ಇಂಡಿಯನ್ ಪ್ರೀಮಿಯರ್ ಲೀಗ್ 2024 ರಲ್ಲಿ ವಿರಾಟ್ ಕೊಹ್ಲಿ (Virat Kohli) ಭರ್ಜರಿ ಫಾರ್ಮ್ನಲ್ಲಿದ್ದಾರೆ. ಬ್ಯಾಟಿಂಗ್ ಹೊರತಾಗಿ ಫೀಲ್ಡಿಂಗ್‌ನಲ್ಲೂ ಕಿಂಗ್ ಕೊಹ್ಲಿ ಮಿಂಚುತ್ತಿದ್ದಾರೆ. ಗುರುವಾರ, ಮೇ 9 ರಂದು ಐಪಿಎಲ್ 2024ರ 58 ನೇ ಪಂದ್ಯವು ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಧರ್ಮಶಾಲಾದಲ್ಲಿ ನಡೆಯಿತು. ಈ ಪಂದ್ಯದಲ್ಲಿ ವಿರಾಟ್ ಮೊದಲು 92 ರನ್‌ಗಳ ಬಿರುಸಿನ ಇನ್ನಿಂಗ್ಸ್ ಆಡಿ ತಂಡವನ್ನು 241 ರನ್‌ಗಳ ಬೃಹತ್ ಸ್ಕೋರ್‌ಗೆ ಕೊಂಡೊಯ್ದರು, ನಂತರ ಫೀಲ್ಡಿಂಗ್‌ನಲ್ಲೂ ತಂಡಕ್ಕೆ ಕೊಡುಗೆ ನೀಡಿದರು. ಪಂಜಾಬ್‌ನ ಸ್ಫೋಟಕ ಬ್ಯಾಟರ್ ಶಶಾಂಕ್ ಸಿಂಗ್ ಅವರನ್ನು ರನ್ ಔಟ್ ಮಾಡುವ ಮೂಲಕ ಆರ್‌ಸಿಬಿ ಜಯದಲ್ಲಿ ಮುಖ್ಯ ಪಾತ್ರವಹಿಸಿದರು. ಅದ್ಭುತ ಪ್ರದರ್ಶನಕ್ಕಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಕೂಡ ಬಾಚಿಕೊಂಡರು.
ಪಂಜಾಬ್ ಕಿಂಗ್ಸ್ ಇನ್ನಿಂಗ್ಸ್‌ನ 14ನೇ ಓವರ್‌ನಲ್ಲಿ ಈ ರೋಚಕ ರನ್ ಔಟ್ ಘಟನೆ ನಡೆದಿದೆ. ಲಾಕಿ ಫರ್ಗುಸನ್ ಅವರ ನಾಲ್ಕನೇ ಎಸೆತದಲ್ಲಿ, ಸ್ಯಾಮ್ ಕರ್ರಾನ್ ಮಿಡ್-ವಿಕೆಟ್ ಕಡೆಗೆ ಚೆಂಡನ್ನು ಅಟ್ಟಿ ಎರಡು ರನ್ ಗಳಿಸಲು ಬಯಸಿದರು. ಬೌಂಡರಿಯಲ್ಲಿ ಬಾಲ್ಗಾಗಿ ಕಾದುಕುಳಿತಿದ್ದ ವಿರಾಟ್ ಚಿರತೆಯ ವೇಗದಲ್ಲಿ 30 ಯಾರ್ಡ್ ವೃತ್ತದವರೆಗೆ ಓಡಿ ಬಂದರು. ಚೆಂಡನ್ನು ಕೈಗೆತ್ತಿಕೊಂಡು ನೇರವಾಗಿ ನಾನ್ ಸ್ಟ್ರೈಕರ್ನ ತುದಿಗೆ ಗುರಿಯಿಟ್ಟರು. ಚೆಂಡು ನೇರವಾಗಿ ವಿಕೆಟ್ಗೆ ಬಡಿದಿದೆ. ಸಮಯಕ್ಕೆ ಕ್ರೀಸ್ ತಲುಪಲು ಸಾಧ್ಯವಾಗದ ಶಶಾಂಕ್ ಸಿಂಗ್ ರನ್ ಔಟ್ಗೆ ಬಲಿಯಾದರು.
ಗನ್ ಸೆಲೆಬ್ರೇಷನ್ ಮಾಡಿದ ಪಂಜಾಬ್ ಬ್ಯಾಟರ್ನ ಮೈಚಳಿ ಬಿಡಿಸಿದ ವಿರಾಟ್ ಕೊಹ್ಲಿ: ವಿಡಿಯೋ
ಶಶಾಂಕ್ ಸಿಂಗ್ ಅವರು 19 ಎಸೆತಗಳಲ್ಲಿ 4 ಬೌಂಡರಿ ಮತ್ತು ಎರಡು ಸಿಕ್ಸರ್‌ಗಳೊಂದಿಗೆ 37 ರನ್ ಗಳಿಸಿ ರನೌಟ್ ಆದರು. ಈ ರನ್ ಔಟ್ ಪಂದ್ಯಕ್ಕೆ ತಿರುವು ನೀಡಿತು. ಆರ್‌ಸಿಬಿ ಗೆಲುವಿನ ಹಾದಿ ಮತ್ತಷ್ಟು ಸುಗಮವಾಯಿತು. ಇದೀಗ ಕೊಹ್ಲಿಯ ಅದ್ಭುತ ರನ್ ಔಟ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
The CHEETAH run out by Kohlipic.twitter.com/sye5Bx5KXp
— POTT⁷⁶⁵ (@KlolZone) May 9, 2024
He’s unfolding magic tonight 💫
First with the bat & now on the field with that outstanding direct hit 🎯
Watch the match LIVE on @StarSportsIndia and @JioCinema 💻📱#TATAIPL | #PBKSvRCB | @imVkohli | @RCBTweets pic.twitter.com/6TsRbpamxG
— IndianPremierLeague (@IPL) May 9, 2024
ಆರ್‌ಸಿಬಿ ಗೆಲುವಿನ ಗುಟ್ಟು ರಟ್ಟು: ಪೋಸ್ಟ್ ಮ್ಯಾಚ್ನಲ್ಲಿ ಡುಪ್ಲೆಸಿಸ್ ಏನು ಹೇಳಿದ್ರು ನೋಡಿ
ವಿರಾಟ್ ಕೊಹ್ಲಿ ಐಪಿಎಲ್ 2024 ರಲ್ಲಿ 153.51 ಸ್ಟ್ರೈಕ್ ರೇಟ್‌ನಲ್ಲಿ 12 ಪಂದ್ಯಗಳಿಂದ 634 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು ಐದು ಅರ್ಧಶತಕವಿದೆ. ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಇವರು ಅಗ್ರಸ್ಥಾನದಲ್ಲಿದ್ದಾರೆ. ಆರ್‌ಸಿಬಿ 12 ಪಂದ್ಯಗಳಲ್ಲಿ 10 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್ನಲ್ಲಿ ಏಳನೇ ಸ್ಥಾನದಲ್ಲಿದೆ. ಬೆಂಗಳೂರಿಗೆ ಎರಡು ಪಂದ್ಯಗಳು ಉಳಿದಿವೆ. ಪ್ಲೇ ಆಫ್ ಪ್ರವೇಶಿಸಬೇಕಾದರೆ ಈ ಎರಡೂ ಪಂದ್ಯ ಗೆಲ್ಲುವುದರ ಜೊತೆಗೆ ಇತರೆ ತಂಡಗಳ ಫಲಿತಾಂಶ ಆರ್‌ಸಿಬಿ ಪರ ಆಗಬೇಕಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ