PBKS vs RCB: ಗನ್ ಸೆಲೆಬ್ರೇಷನ್ ಮಾಡಿದ ಪಂಜಾಬ್ ಬ್ಯಾಟರ್ನ ಮೈಚಳಿ ಬಿಡಿಸಿದ ವಿರಾಟ್ ಕೊಹ್ಲಿ: ವಿಡಿಯೋ
Virat Kohli - Riley Rossouw: ರಿಲೀ ರೂಸೋ ಔಟಾದ ನಂತರ ವಿರಾಟ್ ಕೊಹ್ಲಿ ಅವರ ಸಂಭ್ರಮಾಚರಣೆ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗಿದೆ. ಕೊಹ್ಲಿ ದಕ್ಷಿಣ ಆಫ್ರಿಕಾದ ಬ್ಯಾಟರ್ ಮಾಡಿದ ಸೆಲೆಬ್ರೇಷನ್ ಅನ್ನು ಅವರಿಗೇ ವಾಪಾಸ್ ನೀಡಿದರು. ಈ ಪಂದ್ಯದಲ್ಲಿ ವಿರಾಟ್ 47 ಎಸೆತಗಳಲ್ಲಿ 92 ರನ್ ಗಳಿಸಿದರು. ಆರ್‌ಸಿಬಿ ತನ್ನ ಪ್ಲೇಆಫ್ ರೇಸ್‌ನಲ್ಲಿ ಜೀವಂತವಾಗಿದೆ.
ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಂಜಾಬ್ ಕಿಂಗ್ಸ್ ಅನ್ನು 60 ರನ್‌ಗಳಿಂದ ಸೋಲಿಸಿ ಪ್ಲೇಆಫ್ ತಲುಪುವ ಭರವಸೆಯನ್ನು ಜೀವಂತವಾಗಿರಿಸಿದೆ. ವಿರಾಟ್ ಕೊಹ್ಲಿ (Virat Kohli) -ರಜತ್ ಪಟಿದಾರ್ ಅದ್ಭುತ ಬ್ಯಾಟಿಂಗ್ ನೆರವಿನಿಂದ ಆರ್‌ಸಿಬಿ ಬೃಹತ್ ಮೊತ್ತ ಕಲೆಹಾಕಿದರೆ, ಅದಕ್ಕೆ ತಕ್ಕಂತೆ ಫಾಫ್ ಪಡೆ ಬೌಲರ್ಗಳು ಸಾಥ್ ನೀಡಿದರು. ಆರ್‌ಸಿಬಿ ನೀಡಿದ್ದ ಟಾರ್ಗೆಟ್ ಬೆನ್ನಟ್ಟಲು ಬಂದ ಪಂಜಾಬ್ ಕೂಡ ಕಠಿಣ ಪೈಪೋಟಿ ನೀಡಿತು. ರಿಲೀ ರೂಸೋ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಆದರೆ, ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಇದೀಗ ರೂಸೋ ಔಟಾದಾಗ ವಿರಾಟ್ ಕೊಹ್ಲಿಯ ಸಂಭ್ರಮಾಚರಣೆ ವಿಡಿಯೋ ವೈರಲ್ ಆಗುತ್ತಿದೆ.
ಆರ್‌ಸಿಬಿ ನೀಡಿದ್ದ 242 ರನ್ಗಳ ಟಾರ್ಗೆಟ್ ಬೆನ್ನಟ್ಟಿದ ಪಂಜಾಬ್ ಪರ ರಿಲೀ ರೂಸೋ ಸ್ಫೋಟಕ ಬ್ಯಾಟಿಂಗ್ ನಡೆಸಿ ಬೆಂಗಳೂರಿನ ಬೌಲರ್‌ಗಳನ್ನು ದಂಡಿಸಿದರು. ಕೇವಲ 21 ಎಸೆತಗಳಲ್ಲಿ 225 ಸ್ಟ್ರೈಕ್ ರೇಟ್‌ನಲ್ಲಿ ತಮ್ಮ ಅರ್ಧಶತಕವನ್ನು ಪೂರ್ಣಗೊಳಿಸಿದರು, ರೂಸೋ ಅವರ 27 ಎಸೆತಗಳ ಇನ್ನಿಂಗ್ಸ್‌ನಲ್ಲಿ 61 ರನ್ ಗಳಿಸಿದರು. ಈ ಅವಧಿಯಲ್ಲಿ ಅವರ ಬ್ಯಾಟ್‌ನಿಂದ 9 ಬೌಂಡರಿ ಮತ್ತು 3 ಸಿಕ್ಸರ್‌ಗಳು ಕಾಣಿಸಿಕೊಂಡವು. ಆದರೆ, ಅವರು ಔಟಾದಾಗ ವಿರಾಟ್ ಕೊಹ್ಲಿ ಮಾಡಿದ ಸೆಲೆಬ್ರೇಷನ್ ಸಖತ್ ವೈರಲ್ ಆಗುತ್ತಿದೆ.
ಆರ್‌ಸಿಬಿ ಗೆಲುವಿನ ಗುಟ್ಟು ರಟ್ಟು: ಪೋಸ್ಟ್ ಮ್ಯಾಚ್ನಲ್ಲಿ ಡುಪ್ಲೆಸಿಸ್ ಏನು ಹೇಳಿದ್ರು ನೋಡಿ
ರಿಲೀ ರೂಸೋ ಅರ್ಧಶತಕ ಸಿಡಿಸಿದಾಗ ಗನ್ ಸೆಲೆಬ್ರೇಷನ್ ಮಾಡಿದರು. ಇದು ಆರ್ಸಿಬಿಯನ್ನು ಕೆರಳಿಸಿತ್ತು. ಬಳಿಕ 9 ನೇ ಓವರ್ನ ಕರ್ಣ್ ಶರ್ಮಾ ಬೌಲಿಂಗ್ನಲ್ಲಿ ವಿಲ್ ಜ್ಯಾಕಸ್ಗೆ ಬೌಂಡರಿ ಲೈನ್ ಬಳಿ ಕ್ಯಾಚ್ ನೀಡಿ ರಿಲೀ ಔಟಾದರು. ಈ ಸಂದರ್ಭ ವಿರಾಟ್ ಕೊಹ್ಲಿ ಸೇಡು ತೀರಿಸಿಕೊಂಡರು. ರುಸ್ಸೋ ಔಟಾದ ನಂತರ ವಿರಾಟ್ ಕೂಡ ಗನ್ ಸೆಲೆಬ್ರೇಷನ್ ಮಾಡುವ ಮೂಲಕ ಅವರನ್ನು ಟ್ರೋಲ್ ಮಾಡಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿಯಾಗಿ ಹರಿದಾಡುತ್ತಿದೆ.
ವಿರಾಟ್ ಕೊಹ್ಲಿಯ ಗನ್ ಸೆಲೆಬ್ರೇಷನ್ ವಿಡಿಯೋ ಇಲ್ಲಿದೆ ನೋಡಿ:
Virat Kohli the entertainer. Rilee Rossouw went berserk and celebrated his 50 in gun style, #ViratKohli replicated the same celebration after taking his catch.#PBKSvsRCB #RCBvPBKS #ViratKohli𓃵pic.twitter.com/K6csm6x6Vh
— Ganpat Teli (@gateposts_) May 10, 2024
ಎರಡೆರಡು ಜೀವದಾನ; 92 ರನ್ಗಳ ದಾಖಲೆಯ ಇನ್ನಿಂಗ್ಸ್ ಆಡಿದ ಕಿಂಗ್ ಕೊಹ್ಲಿ..!
ಪಂಜಾಬ್ ಕಿಂಗ್ಸ್ ಅನ್ನು ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಬಗ್ಗುಬಡಿದ ಆರ್‌ಸಿಬಿ 60 ರನ್ಗಳ ಜಯ ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ 7 ವಿಕೆಟ್‌ಗೆ 241 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಪಂಜಾಬ್ ಕಿಂಗ್ಸ್ 17 ಓವರ್‌ಗಳಲ್ಲಿ 181 ರನ್ ಗಳಿಸಿ ಆಲೌಟ್ ಆಯಿತು. ಈ ಜಯದ ಮೂಲಕ ಬೆಂಗಳೂರು ತಂಡದ ಪ್ಲೇ ಕನಸು ಜೀವಂತವಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ