ಸಪ್ಪೆ ಪ್ರದರ್ಶನದೊಂದಿಗೆ ಶ್ರೀಲಂಕಾ ಪ್ರವಾಸ ಮುಗಿಸಿದ್ದ ವಿರಾಟ್ ಕೊಹ್ಲಿ ಮತ್ತೊಮ್ಮೆ ಲಂಡನ್ಗೆ ಹಾರಿದ್ದಾರೆ. ವಿರಾಮ ಸಿಕ್ಕಾಗಲೆಲ್ಲ ಮಡದಿ ಮಕ್ಕಳೊಂದಿಗೆ ಲಂಡನ್ಗೆ ಹಾರುವ ಕೊಹ್ಲಿ, ಈಗಲೂ ಮತ್ತೆ ಲಂಡನ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ವಾಸ್ತವವಾಗಿ, ಕೊಹ್ಲಿ ಪತ್ನಿ ಅನುಷ್ಕಾ ಇಬ್ಬರೂ ಮಕ್ಕಳೊಂದಿಗೆ ಲಂಡನ್‌ನಲ್ಲಿ ವಾಸಿಸುತ್ತಿದ್ದಾರೆ. ಹೀಗಾಗಿ ಶ್ರೀಲಂಕಾ ಪ್ರವಾಸ ಮುಗಿದೊಡನೆ ಲಂಡನ್ಗೆ ತೆರಳಿರುವ ವಿರಾಟ್ ಕೊಹ್ಲಿಯ ಹೊಸ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ವಿಡಿಯೋದಲ್ಲಿ ಕಿಂಗ್ ಕೊಹ್ಲಿ ಸಾಮಾನ್ಯ ವ್ಯಕ್ತಿಯಂತೆ ಲಂಡನ್ನ ಅದ್ಯಾವುದೋ ಫುಟ್ಬಾತ್ ಮೇಲೆ ರಸ್ತೆ ದಾಟುವುದಾಕ್ಕಾಗಿ ನಿಂತಿರುವುದನ್ನು ಕಾಣಬಹುದಾಗಿದೆ.
2024 ರ ಟಿ20 ವಿಶ್ವಕಪ್ ನಂತರ ವಿರಾಟ್ ಕೊಹ್ಲಿ ವಿರಾಮ ತೆಗೆದುಕೊಂಡಿದ್ದರು. ಆ ಬಳಿಕವೂ ಶ್ರೀಲಂಕಾ ಪ್ರವಾಸದಿಂದ ಕೊಹ್ಲಿ ರಜೆ ಕೇಳಿದ್ದರು. ಆದರೆ ನೂತನ ಮುಖ್ಯ ಕೋಚ್ ಗೌತಮ್ ಗಂಭೀರ್, ಈ ಸರಣಿಯಲ್ಲಿ ಆಡುವಂತೆ ಕೊಹ್ಲಿ ಹಾಗೂ ರೋಹಿತ್ಗೆ ಹೇಳಿದ್ದರು. ಹೀಗಾಗಿ ಶ್ರೀಲಂಕಾ ಪ್ರವಾಸದಲ್ಲಿ ಏಕದಿನ ಸರಣಿಯಲ್ಲಿ ಕೊಹ್ಲಿ ತಂಡದ ಪರ ಕಣಕ್ಕಿಳಿದಿದ್ದರು. ಆದರೆ ಆಡಿದ ಮೂರು ಪಂದ್ಯಗಳಲ್ಲೂ ಕೊಹ್ಲಿ ವಿಶೇಷ ಪ್ರದರ್ಶನವನ್ನೇನೂ ನೀಡಲಿಲ್ಲ. ಈ ಸರಣಿಯ ಮೂರು ಪಂದ್ಯಗಳಲ್ಲಿ ಕೊಹ್ಲಿ ಕೇವಲ 58 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಆ ಬಳಿಕ ಕೊಹ್ಲಿ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು.
Virat Kohli Spotted On The Street Of London Today! 🚶♂️👑❤️#ViratKohli #London @imVkohli pic.twitter.com/8r05QU3AyC
— virat_kohli_18_club (@KohliSensation) August 14, 2024
ಸದ್ಯ ಶ್ರೀಲಂಕಾ ಪ್ರವಾಸ ಮುಗಿಸಿರುವ ಟೀಂ ಇಂಡಿಯಾ ದೀರ್ಘ ರಜೆಯಲ್ಲಿದೆ. ಆ ನಂತರ ಮುಂದಿನ ತಿಂಗಳ ಅಂದರೆ ಸೆಪ್ಟೆಂಬರ್ 19 ರಿಂದ ಆರಂಭವಾಗಲಿರುವ 2 ಪಂದ್ಯಗಳ ಟೆಸ್ಟ್ ಸರಣಿಯೊಂದಿಗೆ ಟೀಂ ಇಂಡಿಯಾದ ಹೊಸ ಜೆರ್ನಿ ಆರಂಭವಾಗಲಿದೆ. ಈ ಸರಣಿಯಲ್ಲಿ ವಿರಾಟ್ ಕೊಹ್ಲಿ ಕೂಡ ಕಣಕ್ಕಿಳಿಯುವುದನ್ನು ಕಾಣಬಹುದಾಗಿದೆ.
ಅಂತರಾಷ್ಟ್ರೀಯ ಟಿ20 ಯಿಂದ ನಿವೃತ್ತಿಯಾದ ನಂತರ, ಕೊಹ್ಲಿ ಈಗ ಮುಂಬರುವ ಚಾಂಪಿಯನ್ಸ್ ಟ್ರೋಫಿ ಮತ್ತು 2025 ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಮೇಲೆ ಗಮನಹರಿಸಿದ್ದಾರೆ. ಮೆನ್ ಇನ್ ಬ್ಲೂ ಸತತ ಎರಡು ಬಾರಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಆಡಿದೆ. ಆದರೆ ಎರಡು ಬಾರಿಯೂ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಸೋಲನ್ನು ಎದುರಿಸಿದೆ. ಕೊಹ್ಲಿ ನಾಯಕತ್ವದಲ್ಲಿಯೇ ಟೀಂ ಇಂಡಿಯಾ 2017ರಲ್ಲಿ ಪಾಕಿಸ್ತಾನ ವಿರುದ್ಧ ಚಾಂಪಿಯನ್ಸ್ ಟ್ರೋಫಿಯ ಫೈನಲ್‌ನಲ್ಲಿ ಸೋತಿತ್ತು. ಹೀಗಾಗಿ ಕೊಹ್ಲಿ ಪಾಲಿನ ಕೊನೆಯ ಸೀಮಿತ ಓವರ್ಗಳ ಪ್ರಮುಖ ಈವೆಂಟ್ ಇದಾಗಿರುವುದರಿಂದ ಕೊಹ್ಲಿ ಚಾಂಪಿಯನ್ಸ್ ಟ್ರೋಪಿಯನ್ನು ಗೆಲ್ಲುವ ಮೂಲಕ ಈ ಮಾದರಿಗೂ ವಿದಾಯ ಹೇಳುವ ಸಾಧ್ಯತೆಗಳಿವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:10 pm, Thu, 15 August 24