India vs England ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ನ ಎರಡನೇ ಇನ್ನಿಂಗ್ಸ್ನಲ್ಲೂ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ (Virat Kohli) ಮತ್ತೆ ವೈಫಲ್ಯ ಅನುಭವಿಸಿದರು. ಓಪನರ್ಗಳ ಪತನದ ಬಳಿಕ ತಂಡಕ್ಕೆ ಆಸರೆಯಾಗ ಬೇಕಿದ್ದ ಕೊಹ್ಲಿ ತಮ್ಮ ಕಳಪೆ ಫಾರ್ಮ್ ಅನ್ನು ಮತ್ತೆ ಮುಂದುವರೆಸಿದ್ದಾರೆ. 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕೊಹ್ಲಿ ಆರಂಭದಲ್ಲಿ ಉತ್ತಮವಾಗಿಯೆ ಎಚ್ಚರಿಕೆಯಿಂದ ಬ್ಯಾಟ್ ಬೀಸುತ್ತಿದ್ದರು. ಆದರೆ, 20 ರನ್ ಗಳಿಸಿದ್ದಾಗ ಸ್ಯಾಮ್ ಕುರ್ರನ್ ಬೌಲಿಂಗ್ನಲ್ಲಿ ಸುಲಭವಾಗಿ ಕೀಪರ್ಗೆ ಕ್ಯಾಚಿತ್ತು ನಿರ್ಗಮಿಸಿದರು.
ಸತತವಾಗಿ ವೈಫಲ್ಯ ಅನುಭವಿಸುತ್ತಿರುವ ಕೊಹ್ಲಿ ಔಟ್ ಆದ ತಕ್ಷಣ ಡ್ರೆಸ್ಸಿಂಗ್ ರೂಮ್ಗೆ ತೆರಳಿ ಕೋಪದಲ್ಲಿ ತಮ್ಮ ಕೈಯಲ್ಲಿದ್ದ ಟವೆಲ್ ಅನ್ನು ಎಸೆದಿದ್ದಾರೆ. ಇದು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್ ಆಗುತ್ತಿದೆ. ದಾಖಲೆಗಳನ್ನು ಪುಡಿ ಪುಡಿ ಮಾಡುತ್ತಿದ್ದ ಕೊಹ್ಲಿ ಬ್ಯಾಟ್ನಿಂದ ಈಗ ಶತಕದ ಬಂದು ಎರಡು ವರ್ಷಗಳು ಕಳೆದಿವೆ.
ಕಳೆದ ಏಳು ಟೆಸ್ಟ್ ಇನ್ನಿಂಗ್ಸ್ನಲ್ಲಿ ಕೊಹ್ಲಿ ಗಳಿಸಿದ ರನ್ 20, 42, 0, 13, 44, 0, 27, 62, 0 ಹೀಗಿದೆ. ಸರಾಗವಾಗಿ ಅರ್ಧಶತಕ ಸಿಡಿಸುತ್ತಿದ್ದ ಕೊಹ್ಲಿ ಕಳೆದ ಏಳು ಇನ್ನಿಂಗ್ಸ್ನಲ್ಲಿ 50ರ ಗಡಿ ದಾಟಲಿಲ್ಲ. ಇತ್ತೀಚೆಗಷ್ಟೆ ಕೊಹ್ಲಿಯ ಕಳಪೆ ಆಟ ಕಂಡು ಮಾಜಿ ಓಪನರ್ ವಿರೇಂದ್ರ ಸೆಹ್ವಾಗ್ ಕೂಡ ಇವರನ್ನು ಟ್ರೋಲ್ ಮಾಡಿದ್ದರು.
— . (@aikdoteenchaar) August 15, 2021
ಎರಡನೇ ಇನ್ನಿಂಗ್ಸ್ನಲ್ಲಿ ಭಾರತ ಕೆ. ಎಲ್ ರಾಹುಲ್ (5) ಹಾಗೂ ರೋಹಿತ್ ಶರ್ಮಾ (21) ವಿಕೆಟ್ ಅನ್ನು ಬೇಗನೆ ಕಳೆದುಕೊಂಡಿತು . ನಾಯಕ ವಿರಾಟ್ ಕೊಹ್ಲಿ ಕೂಡ 20 ರನ್ಗೆ ಬ್ಯಾಟ್ ಕಳೆಗಿಟ್ಟರು. ಈ ಸಂದರ್ಭ ಕಳಪೆ ಫಾರ್ಮ್ನಿಂದ ಕಂಗೆಟ್ಟಿದ್ದ ಚೇತೇಶ್ವರ್ ಪೂಜಾರ ಹಾಗೂ ಉಪ ನಾಯಕ ಅಜಿಂಕ್ಯಾ ರಹಾನೆ ತಂಡಕ್ಕೆ ಆಸರೆಯಾಗಿ ನಿಂತರು. ಈ ಜೋಡಿ ಎಚ್ಚರಿಕೆಯ ಜೊತೆಯಾಟ ಆಡಿ 100 ರನ್ಗಳ ಕಾಣಿಕೆ ನೀಡಿತು. ಪೂಜಾರ 206 ಎಸೆತಗಳಲ್ಲಿ 45 ರನ್ ಗಳಿಸಿದರೆ, ರಹಾನೆ 146 ಎಸೆತಗಳಲ್ಲಿ 61 ರನ್ಗೆ ಔಟ್ ಆದರು, ರವೀಂದ್ರ ಜಡೇಜಾ 3 ರನ್ಗೆ ಬೌಲ್ಡ್ ಆದರು.
ಅಂತಿಮವಾಗಿ ನಾಲ್ಕನೇ ದಿನದಾಟದ ಅಂತ್ಯಕ್ಕೆ ಭಾರತ 6 ವಿಕೆಟ್ ಕಳೆದುಕೊಂಡು 181 ರನ್ ಬಾರಿಸಿದೆ. 154 ರನ್ಗಳ ಮುನ್ನಡೆಯಲ್ಲಿದೆ. ರಿಷಭ್ ಪಂತ್ 14 ರನ್ ಹಾಗೂ ಇಶಾಂತ್ ಶರ್ಮಾ 4 ರನ್ ಗಳಿಸಿ ಅಂತಿಮ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
India vs England: ಬ್ಯಾಟ್ ಮಾಡುತ್ತಿದ್ದ ಪಂತ್ಗೆ ಕೊಹ್ಲಿಯಿಂದ ಸಿಗ್ನಲ್: ದಿನದಾಟವನ್ನೇ ಅಂತ್ಯಗೊಳಿಸಿದ ಅಂಪೈರ್
India vs England: ರೋಚಕ ಘಟ್ಟದ ಲಾರ್ಡ್ಸ್ ಟೆಸ್ಟ್ನಲ್ಲಿ ಟ್ವಿಸ್ಟ್: ಭಾರತಕ್ಕಿದೆ ಗೆಲ್ಲುವ ಅವಕಾಶ: ಹೇಗೆ ಗೊತ್ತೇ?
(Virat Kohli throws towel in Angry after getting out for 20 runs on India vs England second Test)