Virat Kohli: ಸೆಕ್ಯುರಿಟಿಯನ್ನು ವಂಚಿಸಿ ಕೊಹ್ಲಿ ಬಳಿ ತೆರಳಿದ ಅಭಿಮಾನಿ: ಆಮೇಲೆ ಆಗಿದ್ದೇನು?

| Updated By: ಝಾಹಿರ್ ಯೂಸುಫ್

Updated on: Sep 01, 2022 | 1:05 PM

Virat Kohli: ಹಾಂಗ್ ಕಾಂಗ್ ವಿರುದ್ದದ ಪಂದ್ಯದಲ್ಲಿ 44 ಎಸೆತಗಳನ್ನು ಎದುರಿಸಿದ್ದ ವಿರಾಟ್ ಕೊಹ್ಲಿ 3 ಸಿಕ್ಸ್ ಹಾಗೂ 1 ಫೋರ್​ನೊಂದಿಗೆ ಅಜೇಯ 59 ರನ್ ಬಾರಿಸಿದ್ದರು.

Virat Kohli: ಸೆಕ್ಯುರಿಟಿಯನ್ನು ವಂಚಿಸಿ ಕೊಹ್ಲಿ ಬಳಿ ತೆರಳಿದ ಅಭಿಮಾನಿ: ಆಮೇಲೆ ಆಗಿದ್ದೇನು?
Virat Kohli
Follow us on

Asia Cup 2022: ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಅಪಾರ ಅಭಿಮಾನಿಗಳಿರುವುದು ಗೊತ್ತೇ ಇದೆ. ಅದು ಭಾರತದಲ್ಲಿ ಮಾತ್ರವಲ್ಲ, ಪಾಕಿಸ್ತಾನ್, ಅಫ್ಘಾನಿಸ್ತಾನ್, ಆಸ್ಟ್ರೇಲಿಯಾ, ಇಂಗ್ಲೆಂಡ್…ಹೀಗೆ ಎಲ್ಲೆಡೆಯೂ ಕೊಹ್ಲಿಗೆ ವಿಶೇಷ ಅಭಿಮಾನಿಗಳಿದ್ದಾರೆ. ಅಂತಹ ಅಭಿಮಾನಿ ದುಬೈನಲ್ಲೂ ಕಾಣಿಸಿಕೊಂಡಿದ್ದಾನೆ. ಆದರೆ ಅದು ಪುಟ್ಟ ಅಭಿಮಾನಿ ಎಂಬುದಷ್ಟೇ ವ್ಯತ್ಯಾಸ. ಏಷ್ಯಾಕಪ್ ಟೂರ್ನಿಯ ಅಂಗವಾಗಿ ಬುಧವಾರ ಭಾರತ ಮತ್ತು ಹಾಂಕಾಂಗ್ ತಂಡಗಳು ಮುಖಾಮುಖಿಯಾಗಿತ್ತು. ಈ ಸಂದರ್ಭದಲ್ಲಿ ಭಾರತ ತಂಡವು ಕ್ರೀಡಾಂಗಣದೊಳಗೆ ಹೋಗುತ್ತಿದ್ದ ವೇಳೆ ಕೊಹ್ಲಿಯ ಕಟ್ಟಾ ಅಭಿಮಾನಿಯಾಗಿದ್ದ ಬಾಲಕನೊಬ್ಬ ಸೆಕ್ಯುರಿಟಿಯನ್ನು ವಂಚಿಸಿ ವಿರಾಟ್ ಕೊಹ್ಲಿಯ ಬಳಿ ಧಾವಿಸಿದ್ದ. ಆದರೆ ಅಲ್ಲಿದ್ದ ಭದ್ರತಾ ಸಿಬ್ಬಂದಿ ಆತನನ್ನು ಮುಂದೆ ಹೋಗದಂತೆ ತಡೆದರು.

ಇದನ್ನು ಗಮಿನಿಸಿದ ಕೊಹ್ಲಿ ಬಾಲಕನನ್ನು ಬಿಡುವಂತೆ ಸೂಚಿಸಿದ್ದಾರೆ. ನಂತರ ಭದ್ರತಾ ಸಿಬ್ಬಂದಿ ಬಾಲಕನ್ನು ಬಿಟ್ಟಿದ್ದು, ಆತ ಕೊಹ್ಲಿ ಬಳಿ ತೆರಳಿ ಆಟೋಗ್ರಾಫ್ ಹಾಗೂ ಸೆಲ್ಫಿಗಳನ್ನು ತೆಗೆದು ಖುಷಿಪಟ್ಟರು. ಇದೀಗ ಈ ಕೊಹ್ಲಿಯನ್ನು ಭೇಟಿಯಾಗಿದ್ದ ಬಾಲಕನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಿಯಮ ಉಲ್ಲಂಘಿಸಿದರೂ ಕೊಹ್ಲಿ ಹುಡುಗನ ಜೊತೆ ತುಂಬಾ ಸಮಚಿತ್ತದಿಂದ ವರ್ತಿಸಿರುವುದಕ್ಕೆ ಅಭಿಮಾನಿಗಳು ಮತ್ತು ನೆಟಿಜನ್‌ಗಳು ಪ್ರಶಂಸೆಗಳ ಸುರಿಮಳೆಗೈಯುತ್ತಿದ್ದಾರೆ.

ಒಟ್ಟಿನಲ್ಲಿ ಭರ್ಜರಿ ಫಾರ್ಮ್ ಮೂಲಕ ಮೈದಾನದಲ್ಲಿ ಅಬ್ಬರಿಸಲಾರಂಭಿಸಿದ್ದ ವಿರಾಟ್ ಕೊಹ್ಲಿ, ಮೈದಾನದ ಹೊರಗೂ ಅಭಿಮಾನಿಗಳಿಗೆ ಪ್ರೀತಿ ಹಂಚುವ ಮೂಲಕ ಎಲ್ಲರ ಹೃದಯ ಗೆಲ್ಲುತ್ತಿದ್ದಾರೆ.

ಇನ್ನು ಹಾಂಗ್ ಕಾಂಗ್ ವಿರುದ್ದದ ಪಂದ್ಯದಲ್ಲಿ 44 ಎಸೆತಗಳನ್ನು ಎದುರಿಸಿದ್ದ ವಿರಾಟ್ ಕೊಹ್ಲಿ 3 ಸಿಕ್ಸ್ ಹಾಗೂ 1 ಫೋರ್​ನೊಂದಿಗೆ ಅಜೇಯ 59 ರನ್ ಬಾರಿಸಿದ್ದರು. ಈ ಮೂಲಕ ಟಿ20 ಕ್ರಿಕೆಟ್​ನಲ್ಲಿ 31 ಅರ್ಧಶತಕಗಳನ್ನು ಬಾರಿಸಿದ ವಿಶೇಷ ದಾಖಲೆಯನ್ನು ನಿರ್ಮಿಸಿದ್ದಾರೆ.