ಭಾರತದಲ್ಲಿ ಟೆಸ್ಟ್ ಸರಣಿ ಗೆದ್ದಿರುವುದು ಕೇವಲ 6 ತಂಡಗಳು ಮಾತ್ರ. ಈ ಆರು ತಂಡಗಳ ವಿರುದ್ಧ ಟೀಮ್ ಇಂಡಿಯಾ ತವರಿನಲ್ಲಿ 17 ಬಾರಿ ಸರಣಿ ಸೋತಿದೆ. ಇವುಗಳಲ್ಲಿ ಮೂರು ತಂಡಗಳು ತಲಾ ಒಂದು ಬಾರಿ ಮಾತ್ರ ಗೆಲುವಿನ ನಗೆ ಬೀರಿದೆ. ಇನ್ನುಳಿದ ಮೂರು ತಂಡಗಳು ಒಂದಾನೊಂದು ಕಾಲದಲ್ಲಿ ಭಾರತದ ವಿರುದ್ಧ ಪಾರುಪತ್ಯ ಮೆರೆದಿತ್ತು ಎಂಬುದೇ ಸತ್ಯ. ಹಾಗಿದ್ರೆ ಭಾರತದಲ್ಲಿ ಅತೀ ಹೆಚ್ಚು ಬಾರಿ ಟೆಸ್ಟ್ ಸರಣಿ ಗೆದ್ದ ತಂಡ ಯಾವುದು? ಎಂಬ ಪ್ರಶ್ನೆ ಮೂಡುವುದು ಸಹಜ. ಆ ಪ್ರಶ್ನೆಗೆ ಇಲ್ಲಿದೆ ಉತ್ತರ…
ವೆಸ್ಟ್ ಇಂಡೀಸ್: ಭಾರತದಲ್ಲಿ ಅತ್ಯಧಿಕ ಟೆಸ್ಟ್ ಸರಣಿಗಳನ್ನು ಗೆದ್ದ ತಂಡಗಳ ಪೈಕಿ ವೆಸ್ಟ್ ಇಂಡೀಸ್ ಅಗ್ರಸ್ಥಾನದಲ್ಲಿದೆ. ಟೀಮ್ ಇಂಡಿಯಾದ ಟೆಸ್ಟ್ ಕೆರಿಯರ್ನ ಆರಂಭಿಕ ದಿನಗಳಲ್ಲಿ ವಿಂಡೀಸ್ ಪಡೆ ಪಾರುಪತ್ಯ ಮೆರೆದಿದ್ದರು. ಪರಿಣಾಮ ತವರಿನಲ್ಲಿ ಭಾರತ ತಂಡವು 1948, 1958, 1966, 1974, ಮತ್ತು 1983 ರಲ್ಲಿ ಟೆಸ್ಟ್ ಸರಣಿ ಸೋತಿತ್ತು.
ಇಂಗ್ಲೆಂಡ್: ವೆಸ್ಟ್ ಇಂಡೀಸ್ ಬಳಿಕ ಭಾರತದ ವಿರುದ್ಧ ತವರಿನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದು ಇಂಗ್ಲೆಂಡ್. 1933 ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಟೆಸ್ಟ್ ಸರಣಿ ಗೆದ್ದಿದ್ದ ಇಂಗ್ಲೆಂಡ್ ಆ ಬಳಿಕ 1974, 1979, 1984, ಮತ್ತು 2012 ಜಯ ಸಾಧಿಸಿದ್ದರು.
ಆಸ್ಟ್ರೇಲಿಯಾ: ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ಬಳಿಕ ಟೀಮ್ ಇಂಡಿಯಾ ವಿರುದ್ಧ ತವರಿನಲ್ಲಿ ಸೆಟೆದು ನಿಂತ ತಂಡ ಆಸ್ಟ್ರೇಲಿಯಾ. 1956, 1959, 1969, ಮತ್ತು 2004 ರಲ್ಲಿ ಆಸ್ಟ್ರೇಲಿಯಾ ತಂಡವು ಭಾರತದಲ್ಲಿ ಐತಿಹಾಸಿಕ ಟೆಸ್ಟ್ ಸರಣಿಗಳನ್ನು ಗೆದ್ದುಕೊಂಡಿದ್ದರು.
ಪಾಕಿಸ್ತಾನ್, ಸೌತ್ ಆಫ್ರಿಕಾ, ನ್ಯೂಝಿಲೆಂಡ್: ಭಾರತದಲ್ಲಿ ಏಕೈಕ ಟೆಸ್ಟ್ ಸರಣಿ ಗೆದ್ದ ತಂಡಗಳ ಪೈಕಿ ಪಾಕಿಸ್ತಾನ್ (1986) ಅಗ್ರಸ್ಥಾನದಲ್ಲಿದ್ದರೆ, ಸೌತ್ ಆಫ್ರಿಕಾ (1999) ದ್ವಿತೀಯ ಸ್ಥಾನದಲ್ಲಿದೆ. ಇದೀಗ ಈ ಪಟ್ಟಿಗೆ ನ್ಯೂಝಿಲೆಂಡ್ (2024) ಸೇರ್ಪಡೆಯಾಗಿದೆ.
ಇದನ್ನೂ ಓದಿ: ಝಿಂಬಾಬ್ವೆ ಅಬ್ಬರಕ್ಕೆ ಟೀಮ್ ಇಂಡಿಯಾದ ವಿಶ್ವ ದಾಖಲೆ ಉಡೀಸ್
ಅಂದರೆ ಭಾರತದಲ್ಲಿ ಅತ್ಯಧಿಕ ಟೆಸ್ಟ್ ಸರಣಿಗಳನ್ನು ಗೆದ್ದ ದಾಖಲೆ ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ತಂಡಗಳ ಹೆಸರಿನಲ್ಲಿದೆ. ಈ ತಂಡಗಳು ಒಟ್ಟು 5 ಬಾರಿ ಭಾರತಕ್ಕೆ ಸರಣಿ ಸೋಲಿನ ರುಚಿ ತೋರಿಸಿದೆ.
Published On - 9:53 am, Sun, 27 October 24