ಟೀಮ್ ಇಂಡಿಯಾ ಟಿ20 ತಂಡಕ್ಕೆ ಕನ್ನಡಿಗ ಎಂಟ್ರಿ
India's squad for South Africa: ಟಿ20 ವಿಶ್ವಕಪ್ನ ಫೈನಲಿಸ್ಟ್ಗಳಾದ ಭಾರತ ಮತ್ತು ಸೌತ್ ಆಫ್ರಿಕಾ ತಂಡಗಳು ನವೆಂಬರ್ನಲ್ಲಿ ಮುಖಾಮುಖಿಯಾಗಲಿದೆ. 4 ಟಿ20 ಪಂದ್ಯಗಳ ಈ ಸರಣಿಗೆ ಸೌತ್ ಆಫ್ರಿಕಾ ಆತಿಥ್ಯವಹಿಸಲಿದೆ. ಈ ಸರಣಿಯ ಸಂಪೂರ್ಣ ವೇಳಾಪಟ್ಟಿ ಈ ಕೆಳಗಿನಂತಿದೆ...
ಭಾರತ ಮತ್ತು ಸೌತ್ ಆಫ್ರಿಕಾ ನಡುವಣ ಟಿ20 ಸರಣಿಗೆ ಟೀಮ್ ಇಂಡಿಯಾವನ್ನು ಪ್ರಕಟಿಸಲಾಗಿದೆ. ಹದಿನೈದು ಸದಸ್ಯರ ಈ ತಂಡವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದಾರೆ. ಇನ್ನು ಈ ತಂಡದಲ್ಲಿ ಕರ್ನಾಟಕದ ವೇಗಿ ವಿಜಯಕುಮಾರ್ ವೈಶಾಕ್ ಆಯ್ಕೆಯಾಗಿದ್ದಾರೆ. ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ 11 ಪಂದ್ಯಗಳನ್ನಾಡಿರುವ ವೈಶಾಕ್ ಒಟ್ಟು 13 ವಿಕೆಟ್ ಕಬಳಿಸಿದ್ದಾರೆ.
ಇನ್ನು 30 ಟಿ20 ಪಂದ್ಯಗಳಿಂದ 42 ವಿಕೆಟ್ಗಳನ್ನು ಪಡೆಯುವಲ್ಲಿ ಕರ್ನಾಟಕದ ವೇಗಿ ಯಶಸ್ವಿಯಾಗಿದ್ದಾರೆ. ಈ ಪ್ರದರ್ಶನದ ಫಲವಾಗಿ ಇದೀಗ ವಿಜಯಕುಮಾರ್ ವೈಶಾಕ್ ಸೌತ್ ಆಫ್ರಿಕಾ ವಿರುದ್ಧದ ಸರಣಿಗೆ ಆಯ್ಕೆಯಾಗಿದ್ದಾರೆ.
ಹಾಗೆಯೇ ಕೆಕೆಆರ್ ಪರ ಕಣಕ್ಕಿಳಿದಿದ್ದ ಸ್ಪೋಟಕ ದಾಂಡಿಗ ರಮಣ್ದೀಪ್ ಸಿಂಗ್ ಕೂಡ ಚೊಚ್ಚಲ ಬಾರಿಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ. ಬಿರುಸಿನ ಬ್ಯಾಟಿಂಗ್ ಹಾಗೂ ಅತ್ಯುತ್ತಮ ಫೀಲ್ಡಿಂಗ್ ಹೆಸರುವಾಸಿಯಾಗಿರುವ ರಮಣ್ ಇದೇ ಮೊದಲ ಭಾರತ ತಂಡದಲ್ಲಿ ಅವಕಾಶ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅದರಂತೆ ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಟೀಮ್ ಇಂಡಿಯಾ ಈ ಕೆಳಗಿನಂತಿದೆ…
ಭಾರತ ಟಿ20 ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರಿಂಕು ಸಿಂಗ್, ತಿಲಕ್ ವರ್ಮಾ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ , ಅಕ್ಷರ್ ಪಟೇಲ್, ರಮಣ್ದೀಪ್ ಸಿಂಗ್, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್ , ಅರ್ಷದೀಪ್ ಸಿಂಗ್, ವಿಜಯಕುಮಾರ್ ವೈಶಾಕ್, ಅವೇಶ್ ಖಾನ್, ಯಶ್ ದಯಾಳ್.
ಇದನ್ನೂ ಓದಿ: 4 ಓವರ್ಗಳಲ್ಲಿ 93 ರನ್ಗಳು… 7 ರನ್ಗಳಿಂದ ಬೌಲರ್ಗೆ ಶತಕ ಮಿಸ್..!
ಭಾರತ vs ಸೌತ್ ಆಫ್ರಿಕಾ ಸರಣಿ ಯಾವಾಗ?
ಟಿ20 ವಿಶ್ವಕಪ್ನ ಫೈನಲಿಸ್ಟ್ಗಳಾದ ಭಾರತ ಮತ್ತು ಸೌತ್ ಆಫ್ರಿಕಾ ತಂಡಗಳು ನವೆಂಬರ್ನಲ್ಲಿ ಮುಖಾಮುಖಿಯಾಗಲಿದೆ. 4 ಟಿ20 ಪಂದ್ಯಗಳ ಈ ಸರಣಿಗೆ ಸೌತ್ ಆಫ್ರಿಕಾ ಆತಿಥ್ಯವಹಿಸಲಿದೆ. ಈ ಸರಣಿಯ ಸಂಪೂರ್ಣ ವೇಳಾಪಟ್ಟಿ ಈ ಕೆಳಗಿನಂತಿದೆ…
ತಂಡಗಳು | ದಿನಾಂಕ | ಸಮಯ | ಸ್ಥಳ |
1ನೇ ಟಿ20, ಸೌತ್ ಆಫ್ರಿಕಾ vs ಭಾರತ | ಶುಕ್ರವಾರ, 8 ನವೆಂಬರ್ 2024 | 8:30 PM | ಡರ್ಬನ್ |
2ನೇ ಟಿ20, ಸೌತ್ ಆಫ್ರಿಕಾ vs ಭಾರತ | ಭಾನುವಾರ, 10 ನವೆಂಬರ್ 2024 | 8:30 PM | ಗ್ಕೆಬರ್ಹಾ |
3ನೇ ಟಿ20, ಸೌತ್ ಆಫ್ರಿಕಾ vs ಭಾರತ | ಬುಧವಾರ, 13 ನವೆಂಬರ್ 2024 | 8:30 PM | ಸೆಂಚುರಿಯನ್ |
4ನೇ ಟಿ20, ಸೌತ್ ಆಫ್ರಿಕಾ vs ಭಾರತ | ಶುಕ್ರವಾರ, 15 ನವೆಂಬರ್ 2024 | 8:30 PM | ಜೋಹಾನ್ಸ್‌ಬರ್ಗ್ |