BGT ಸರಣಿಗೆ ಭಾರತ ತಂಡ ಪ್ರಕಟ: ಮೂವರು ಹೊಸಮುಖಗಳಿಗೆ ಮಣೆ

Border-Gavaskar Trophy 2024-25: ಭಾರತ ಮತ್ತು ಆಸ್ಟ್ರೇಲಿಯಾ ನಡುವಣ 5 ಪಂದ್ಯಗಳ ಟೆಸ್ಟ್ ಸರಣಿಯು ನವೆಂಬರ್ 22 ರಿಂದ ಶುರುವಾಗಲಿದೆ. ಮೊದಲ ಪಂದ್ಯವು ಪರ್ತ್​ನಲ್ಲಿ ನಡೆದರೆ, ಎರಡನೇ ಪಂದ್ಯವು ಅಡಿಲೇಡ್​ನಲ್ಲಿ ಜರುಗಲಿದೆ. ಹಾಗೆಯೇ ಮೂರನೇ ಪಂದ್ಯಕ್ಕೆ ಬ್ರಿಸ್ಬೇನ್​ ಆತಿಥ್ಯವಹಿಸಿದರೆ, ನಾಲ್ಕನೇ ಪಂದ್ಯವು ಮೆಲ್ಬೋರ್ನ್​ನಲ್ಲಿ ನಡೆಯಲಿದೆ.

BGT ಸರಣಿಗೆ ಭಾರತ ತಂಡ ಪ್ರಕಟ: ಮೂವರು ಹೊಸಮುಖಗಳಿಗೆ ಮಣೆ
Team India
Follow us
|

Updated on: Oct 26, 2024 | 7:17 AM

ಆಸ್ಟ್ರೇಲಿಯಾ ವಿರುದ್ಧದ ಪ್ರತಿಷ್ಠಿತ ಬಾರ್ಡರ್ – ಗವಾಸ್ಕರ್ ಟೆಸ್ಟ್ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಈ ಸರಣಿಗಾಗಿ ಒಟ್ಟು 18 ಸದಸ್ಯರನ್ನು ಆಯ್ಕೆ ಮಾಡಲಾಗಿದ್ದು, ಈ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದಾರೆ. ಇನ್ನು ಉಪನಾಯಕನಾಗಿ ಜಸ್ ಪ್ರೀತ್ ಬುಮ್ರಾ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ತಂಡದಲ್ಲಿ ಹೊಸಮುಖಗಳಾಗಿ ಅಭಿಮನ್ಯು ಈಶ್ವರನ್, ಹರ್ಷಿತ್ ರಾಣಾ ಹಾಗೂ ನಿತೀಶ್ ಕುಮಾರ್ ರೆಡ್ಡಿ ಸ್ಥಾನ ಪಡೆದಿದ್ದಾರೆ.

ಇಲ್ಲಿ ಅಭಿಮನ್ಯು ಬ್ಯಾಕ್ ಅಪ್ ಓಪನರ್ ಆಗಿ ಕಾಣಿಸಿಕೊಂಡರೆ, ಹರ್ಷಿತ್ ರಾಣಾ ಹೆಚ್ಚುವರಿ ವೇಗಿಯಾಗಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಹಾಗೆಯೇ ನಿತೀಶ್ ಕುಮಾರ್ ರೆಡ್ಡಿ ಆಲ್ ರೌಂಡರ್ ಸ್ಥಾನದಲ್ಲಿ ಆಯ್ಕೆಯಾಗಿದ್ದಾರೆ.

ಇನ್ನು‌ ಮೀಸಲು ಆಟಗಾರರಾಗಿ ಮೂವರು ವೇಗಿಗಳನ್ನು ಸಹ ಆಯ್ಕೆ ಮಾಡಲಾಗಿದ್ದು, ಅದರಂತೆ ಖಲೀಲ್ ಅಹ್ಮದ್, ನವದೀಪ್ ಸೈನಿ ಹಾಗೂ ಮುಖೇಶ್ ಕುಮಾರ್ ತಂಡದ ಜೊತೆ ಪ್ರಯಾಣಿಸಲಿದ್ದಾರೆ.

ಬಾರ್ಡರ್-ಗವಾಸ್ಕರ್​ ಟೆಸ್ಟ್​ ಸರಣಿಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಜಸ್​ಪ್ರೀತ್ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಅಭಿಮನ್ಯು ಈಶ್ವರನ್, ಶುಭ್​ಮನ್ ಗಿಲ್ , ವಿರಾಟ್ ಕೊಹ್ಲಿ , ಕೆಎಲ್ ರಾಹುಲ್, ರಿಷಭ್ ಪಂತ್ (ವಿಕೆಟ್ ಕೀಪರ್), ಸರ್ಫರಾಝ್ ಖಾನ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ , ಮೊಹಮ್ಮದ್ ಸಿರಾಜ್ , ಆಕಾಶ್ ದೀಪ್, ಪ್ರಸಿದ್ಧ್ ಕೃಷ್ಣ, ಹರ್ಷಿತ್ ರಾಣ, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್.

ಮೀಸಲು ಆಟಗಾರರು: ಮುಖೇಶ್ ಕುಮಾರ್, ನವದೀಪ್ ಸೈನಿ, ಖಲೀಲ್ ಅಹ್ಮದ್.

ಇದನ್ನೂ ಓದಿ: 4 ಓವರ್​ಗಳಲ್ಲಿ 93 ರನ್​ಗಳು… 7 ರನ್​ಗಳಿಂದ ಬೌಲರ್​ಗೆ ಶತಕ ಮಿಸ್..!

ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಯಾವಾಗ ಶುರು?

ಭಾರತ ಮತ್ತು ಆಸ್ಟ್ರೇಲಿಯಾ ನಡುವಣ 5 ಪಂದ್ಯಗಳ ಟೆಸ್ಟ್ ಸರಣಿಯು ನವೆಂಬರ್ 22 ರಿಂದ ಶುರುವಾಗಲಿದೆ. ಮೊದಲ ಪಂದ್ಯವು ಪರ್ತ್​ನಲ್ಲಿ ನಡೆದರೆ, ಎರಡನೇ ಪಂದ್ಯವು ಅಡಿಲೇಡ್​ನಲ್ಲಿ ಜರುಗಲಿದೆ. ಹಾಗೆಯೇ ಮೂರನೇ ಪಂದ್ಯಕ್ಕೆ ಬ್ರಿಸ್ಬೇನ್​ ಆತಿಥ್ಯವಹಿಸಿದರೆ, ನಾಲ್ಕನೇ ಪಂದ್ಯವು ಮೆಲ್ಬೋರ್ನ್​ನಲ್ಲಿ ನಡೆಯಲಿದೆ. ಕೊನೆಯ ಪಂದ್ಯವು ಸಿಡ್ನಿಯಲ್ಲಿ ಜರುಗಲಿದೆ. ಈ ಸರಣಿಯ ಸಂಪೂರ್ಣ ವೇಳಾಪಟ್ಟಿ ಈ ಕೆಳಗಿನಂತಿದೆ…

ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ವೇಳಾಪಟ್ಟಿ:

ತಂಡಗಳು ದಿನಾಂಕ ಸಮಯ ಸ್ಥಳ
1ನೇ ಟೆಸ್ಟ್, ಆಸ್ಟ್ರೇಲಿಯಾ vs ಭಾರತ ಶುಕ್ರವಾರ, 22 ನವೆಂಬರ್ 2024 7:50 AM ಪರ್ತ್
2ನೇ ಟೆಸ್ಟ್, ಆಸ್ಟ್ರೇಲಿಯಾ vs ಭಾರತ (D/N) ಶುಕ್ರವಾರ, 6 ಡಿಸೆಂಬರ್ 2024 9:30 AM ಅಡಿಲೇಡ್
3ನೇ ಟೆಸ್ಟ್, ಆಸ್ಟ್ರೇಲಿಯಾ vs ಭಾರತ ಶನಿವಾರ, 14 ಡಿಸೆಂಬರ್ 2024 5:50 AM ಬ್ರಿಸ್ಬೇನ್
4ನೇ ಟೆಸ್ಟ್, ಆಸ್ಟ್ರೇಲಿಯಾ vs ಭಾರತ ಗುರುವಾರ, 26 ಡಿಸೆಂಬರ್ 2024 5 AM ಮೆಲ್ಬೋರ್ನ್
5ನೇ ಟೆಸ್ಟ್, ಆಸ್ಟ್ರೇಲಿಯಾ vs ಭಾರತ ಶುಕ್ರವಾರ, 3 ಜನವರಿ 2025 5 AM ಸಿಡ್ನಿ

ಹಾಸನಾಂಬೆ ಬಳಿ ಡಿಕೆ ಶಿವಕುಮಾರ್​ ಬೇಡಿಕೊಂಡಿದ್ದು ಹೀಗಂತೆ
ಹಾಸನಾಂಬೆ ಬಳಿ ಡಿಕೆ ಶಿವಕುಮಾರ್​ ಬೇಡಿಕೊಂಡಿದ್ದು ಹೀಗಂತೆ
10 ಸೆಕೆಂಡ್​ನಲ್ಲಿ 5 ಬಾರಿ ಬಿಜೆಪಿ ನಾಯಕನಿಗೆ ನಮಸ್ಕರಿಸಿದ ಐಎಎಸ್​ ಅಧಿಕಾರಿ
10 ಸೆಕೆಂಡ್​ನಲ್ಲಿ 5 ಬಾರಿ ಬಿಜೆಪಿ ನಾಯಕನಿಗೆ ನಮಸ್ಕರಿಸಿದ ಐಎಎಸ್​ ಅಧಿಕಾರಿ
ದರ್ಶನ್​ಗೆ 4 ಹೆಜ್ಜೆ ನಡೆಯಲೂ ಆಗ್ತಿಲ್ಲ; ಕಣ್ಣೀರು ಹಾಕುವಂತಿದೆ ಈ ವಿಡಿಯೋ
ದರ್ಶನ್​ಗೆ 4 ಹೆಜ್ಜೆ ನಡೆಯಲೂ ಆಗ್ತಿಲ್ಲ; ಕಣ್ಣೀರು ಹಾಕುವಂತಿದೆ ಈ ವಿಡಿಯೋ
ಗೆಳೆಯರೊಂದಿಗೆ ಹರಟೆ ಹೊಡೆಯುತ್ತಿದ್ದಾಗಲೇ ಹೃದಯಾಘಾತದಿಂದ ಯುವಕ ನಿಧನ
ಗೆಳೆಯರೊಂದಿಗೆ ಹರಟೆ ಹೊಡೆಯುತ್ತಿದ್ದಾಗಲೇ ಹೃದಯಾಘಾತದಿಂದ ಯುವಕ ನಿಧನ
ದೇವರಾಜೇಗೌಡ ಹೆಸರು ಪ್ರಸ್ತಾಪವಾಗುತ್ತಿದ್ದಂತೆಯೇ ವರಸೆ ಬದಲಿಸಿದ ರೇವಣ್ಣ
ದೇವರಾಜೇಗೌಡ ಹೆಸರು ಪ್ರಸ್ತಾಪವಾಗುತ್ತಿದ್ದಂತೆಯೇ ವರಸೆ ಬದಲಿಸಿದ ರೇವಣ್ಣ
ಆ ಹೆಸರು ಹೇಳಲೂ ಹನುಮಂತನಿಗೆ ನಾಚಿಕೆ: ವಿಡಿಯೋ
ಆ ಹೆಸರು ಹೇಳಲೂ ಹನುಮಂತನಿಗೆ ನಾಚಿಕೆ: ವಿಡಿಯೋ
ನನ್ನ ಮನವೊಲಿಕೆಗೆ ಯಾವ ನಾಯಕನೂ ಪ್ರಯತ್ನಿಸಿಲ್ಲ: ಅಜ್ಜಂಪೀರ್ ಖಾದ್ರಿ
ನನ್ನ ಮನವೊಲಿಕೆಗೆ ಯಾವ ನಾಯಕನೂ ಪ್ರಯತ್ನಿಸಿಲ್ಲ: ಅಜ್ಜಂಪೀರ್ ಖಾದ್ರಿ
ಚನ್ನಪಟ್ಟಣ: ನಿಖಿಲ್ ಸ್ಪರ್ಧಿಸಬಾರದು ಅಂತ ಹೇಳೋದಿಕ್ಕಾಗುತ್ತೆಯೇ? ಶಿವಕುಮಾರ್
ಚನ್ನಪಟ್ಟಣ: ನಿಖಿಲ್ ಸ್ಪರ್ಧಿಸಬಾರದು ಅಂತ ಹೇಳೋದಿಕ್ಕಾಗುತ್ತೆಯೇ? ಶಿವಕುಮಾರ್
ಯುವತಿಯ ತುಟಿಗೆ ಮುತ್ತಿಡಲು ಹೋದ ಪೊಲೀಸ್; ವಿಡಿಯೋ ವೈರಲ್
ಯುವತಿಯ ತುಟಿಗೆ ಮುತ್ತಿಡಲು ಹೋದ ಪೊಲೀಸ್; ವಿಡಿಯೋ ವೈರಲ್
ಎನ್​ಡಿಎ ಅಭ್ಯರ್ಥಿ ಬಂಗಾರು ಹಣಮಂತು ಗೆಲ್ಲೋದು ಶತಸಿದ್ಧ: ಶ್ರೀರಾಮುಲು
ಎನ್​ಡಿಎ ಅಭ್ಯರ್ಥಿ ಬಂಗಾರು ಹಣಮಂತು ಗೆಲ್ಲೋದು ಶತಸಿದ್ಧ: ಶ್ರೀರಾಮುಲು