ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ತಂಡದ ಆರಂಭಿಕ ಜೋಡಿ ತಂಡಕ್ಕೆ ಪ್ರಬಲ ಆರಂಭ ನೀಡಿತು. ರೋಹಿತ್ ಶರ್ಮಾ 83 ರನ್ ಗಳಿಸಿದರೆ, ಕೆಎಲ್ ರಾಹುಲ್ 129 ರನ್ ಗಳಿಸಿದರು. ಆದರೆ ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳಿಗೆ ಎರಡನೇ ಇನ್ನಿಂಗ್ಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲಲು ಸಾಧ್ಯವಾಗಲಿಲ್ಲ. ಮಾರ್ಕ್ ವುಡ್ ರಾಹುಲ್ ವಿಕೆಟ್ ಕಿತ್ತರೆ, ರೋಹಿತ್ ಕೂಡ ವುಡ್‌ಗೆ ಬಲಿಯಾದರು. ಆದರೆ ರೋಹಿತ್ ಔಟಾದ ರೀತಿ, ಅನೇಕ ಮಾಜಿ ಆಟಗಾರರಿಗೆ ಇಷ್ಟವಾಗುತ್ತಿಲ್ಲ. ಭಾರತದ ಮಾಜಿ ಟೆಸ್ಟ್ ಬ್ಯಾಟ್ಸ್‌ಮನ್ ವಿವಿಎಸ್ ಲಕ್ಷ್ಮಣ್ ಪ್ರಕಾರ, ರೋಹಿತ್ ಇಂಗ್ಲೆಂಡ್ ಆಟಗಾರರ ಬಲೆಗೆ ಸಿಲುಕಿದರು ಎಂದಿದ್ದಾರೆ.
ರೋಹಿತ್ ಬಾರಿಸಲು ಇಷ್ಟಪಡುತ್ತಾರೆ. ವುಡ್ ಅವರಿಗೆ ಪದೇ ಪದೇ ಶಾರ್ಟ್ ಚೆಂಡುಗಳನ್ನು ಎಸೆಯುತ್ತಿದ್ದರು. ರೋಹಿತ್ ಅಂತಹ ಒಂದು ಚೆಂಡನ್ನು ಬೌಂಡರಿಗಟ್ಟಿದರು. ಆದರೆ ಅದೇ ರೀತಿಯಲ್ಲಿ, ಅವರು ಮತ್ತೊಂದು ಬಾಲ್ ಹೊಡೆಯುವ ಸಮಯದಲ್ಲಿ ಕ್ಯಾಚಿತ್ತು ಔಟಾದರು. ಹೀಗಾಗಿ ಲಕ್ಷ್ಮಣ್ ರೋಹಿತ್ ಅಂತಹ ಶಾಟ್ ಆಡಬಾರದಿತ್ತು, ಅದೂ ಕೂಡ ಆ ಪರಿಸ್ಥಿತಿಯಲ್ಲಿ ಎಂದು ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ. ಮೊದಲ ಟೆಸ್ಟ್ ಪಂದ್ಯದಲ್ಲೂ ರೋಹಿತ್ ಇದೇ ರೀತಿ ಔಟಾದರು. ರೋಹಿತ್ ಅವರ ವಿಕೆಟ್ಗಳನ್ನು ಕೈಚೆಲ್ಲುತ್ತಾರೆ ಎಂದು ಆಗಾಗ್ಗೆ ಹೇಳಲಾಗುತ್ತದೆ. ಲಕ್ಷ್ಮಣ್ ಅವರ ಶಾಟ್ ಆಯ್ಕೆಯ ಮೇಲೆ ಪ್ರಶ್ನೆಗಳನ್ನು ಎತ್ತಿದ್ದಾರೆ.
ರೋಹಿತ್ ಶರ್ಮಾ ತನ್ನನ್ನು ನಿರಾಸೆಗೊಳಿಸಿದ್ದಾರೆ
ESPNcricinfo ಜೊತೆ ಮಾತನಾಡುತ್ತಾ ಲಕ್ಷ್ಮಣ್, ರೋಹಿತ್ ಶರ್ಮಾ ತನ್ನನ್ನು ನಿರಾಸೆಗೊಳಿಸಿದ್ದಾರೆ. ನಾಟಿಂಗ್‌ಹ್ಯಾಮ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಅವರು ಅದೇ ರೀತಿಯಲ್ಲಿ ಔಟಾಗುವುದನ್ನು ನಾವು ನೋಡಿದ್ದೇವೆ. ಕೆಲವೊಮ್ಮೆ ನಿಮ್ಮ ನೆಚ್ಚಿನ ಶಾಟ್ ನಿಮ್ಮ ವಿಕೆಟ್ ತೆಗೆದುಕೊಳ್ಳಬಹುದು. ಅದೇ ಓವರ್ನಲ್ಲಿ ರೋಹಿತ್ ಫೈನ್ ಲೆಗ್ ನಲ್ಲಿ ಸಿಕ್ಸರ್ ಬಾರಿಸಿದರು. ಎದುರಾಳಿ ತಂಡದ ನಾಯಕ ಫೀಲ್ಡಿಂಗ್ ಬದಲಾಯಿಸಿದಾಗ, ಈ ಸಾಲಿನಲ್ಲಿ ಚೆಂಡನ್ನು ಎಸೆಯುವುದು ಸ್ಪಷ್ಟವಾಗಿತ್ತು. ರೋಹಿತ್ ಶರ್ಮಾ ಅದೇ ಹೊಡೆತವನ್ನು ಆಡಬೇಕೆಂದು ಇಂಗ್ಲೆಂಡ್ ಬಯಸಿತು. ಇದು ರೋಹಿತ್‌ಗೆ ಬಲೆ ಬೀಸಿದ್ದು ಸ್ಪಷ್ಟವಾಗಿ ಕಾಣುತ್ತಿತ್ತು. ಇದರಲ್ಲಿ ರೋಹಿತ್ ಸಿಕ್ಕಿಬಿದ್ದರು ಎಂದಿದ್ದಾರೆ.
ಎಚ್ಚರಿಕೆಯಿಂದ ಬ್ಯಾಟ್ ಮಾಡಬೇಕಿತ್ತು
ರೋಹಿತ್ ಜೊತೆಗಾರ ರಾಹುಲ್ ಔಟಾದಾಗ ರೋಹಿತ್ ಎಚ್ಚರಿಕೆಯಿಂದ ಆಡಬೇಕಿತ್ತು ಎಂದು ಲಕ್ಷ್ಮಣ್ ಹೇಳಿದ್ದಾರೆ. ರಾಹುಲ್ ಔಟಾದ ನಂತರ, ರೋಹಿತ್ ಅಲ್ಲಿ ಬ್ಯಾಟಿಂಗ್ ಮುಂದುವರಿಸುವುದು ಬಹಳ ಮುಖ್ಯ. ಅವರು ಬ್ಯಾಟಿಂಗ್ ಮಾಡುತ್ತಿದ್ದ ರೀತಿಯಲ್ಲಿ, ಅವರು ಕೆಲವು ಉತ್ತಮ ಡ್ರೈವ್‌ಗಳನ್ನು ಮಾಡಿದರು. ಅವರು ಚೆಂಡನ್ನು ಚೆನ್ನಾಗಿ ಟೈಮಿಂಗ್ ಮಾಡುತ್ತಿದ್ದರು. ರೋಹಿತ್ ಶರ್ಮಾ ತಮ್ಮ ಅತ್ಯುತ್ತಮ ಫಾರ್ಮ್ ಅನ್ನು ಮುಂದುವರಿಸಬೇಕಾಯಿತು. ರೋಹಿತ್ ಅವರ ಶಾಟ್ ಆಯ್ಕೆಯಿಂದ ನನಗೆ ತುಂಬಾ ನಿರಾಶೆಯಾಗಿದೆ ಎಂದಿದ್ದಾರೆ.