ಏಷ್ಯಾಕಪ್, ವಿಶ್ವಕಪ್​ನಿಂದ ಔಟ್: ಇದೀಗ ನಾಯಕನಾಗಿ ಎಂಟ್ರಿ..!

| Updated By: ಝಾಹಿರ್ ಯೂಸುಫ್

Updated on: Dec 30, 2023 | 3:01 PM

Wanindu Hasaranga: ಈ ಬಾರಿಯ ಐಪಿಎಲ್ ಮಿನಿ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ವನಿಂದು ಹಸರಂಗ ಅವರನ್ನು ರಿಲೀಸ್ ಮಾಡಿತ್ತು. ಅದರಂತೆ ಹರಾಜಿನಲ್ಲಿ 1.5 ಕೋಟಿ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಲಂಕಾ ಸ್ಪಿನ್ನರ್ ಅನ್ನು ಸನ್​ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಖರೀದಿಸಿದೆ.

ಏಷ್ಯಾಕಪ್, ವಿಶ್ವಕಪ್​ನಿಂದ ಔಟ್: ಇದೀಗ ನಾಯಕನಾಗಿ ಎಂಟ್ರಿ..!
Sri Lanka Team
Follow us on

ಶ್ರೀಲಂಕಾ ಟಿ20 ತಂಡದ ನೂತನ ನಾಯಕನಾಗಿ ವನಿಂದು ಹಸರಂಗ (Wanindu Hasaranga) ಕಾಣಿಸಿಕೊಳ್ಳಲಿದ್ದಾರೆ. ಈ ಹಿಂದೆ ನಾಯಕರಾಗಿದ್ದ ದಸುನ್ ಶಾನಕ ಅವರನ್ನು ಕಪ್ತಾನನ ಸ್ಥಾನದಿಂದ ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಕೆಳಗಿಳಿಸಿದೆ. ಅಲ್ಲದೆ ಹೊಸ ನಾಯಕನಾಗಿ​ ಹಸರಂಗ ಅವರನ್ನು ಆಯ್ಕೆ ಮಾಡಲಾಗಿದೆ.

ಅಚ್ಚರಿ ಎಂದರೆ ವನಿಂದು ಹಸರಂಗ ಕಳೆದ ಆಗಸ್ಟ್​ನಿಂದ ಶ್ರೀಲಂಕಾ ಪರ ಯಾವುದೇ ಪಂದ್ಯವಾಡಿಲ್ಲ. ಲಂಕಾ ಪ್ರೀಮಿಯರ್ ಲೀಗ್ ವೇಳೆ ಗಾಯಗೊಂಡಿದ್ದ ಹಸರಂಗ ಏಷ್ಯಾಕಪ್ ಹಾಗೂ ಏಕದಿನ ವಿಶ್ವಕಪ್​ನಿಂದ ಹೊರಗುಳಿದಿದ್ದರು. ಇದೀಗ ನಾಯಕನಾಗಿ ತಂಡಕ್ಕೆ ಕಂಬ್ಯಾಕ್ ಮಾಡಲು ವನಿಂದು ಹಸರಂಗ ಸಜ್ಜಾಗಿದ್ದಾರೆ.

ಅದರಂತೆ ಜನವರಿಯಲ್ಲಿ ಝಿಂಬಾಬ್ವೆ ವಿರುದ್ಧದ ಟಿ20 ಸರಣಿಯ ಮೂಲಕ ವನಿಂದು ಹಸರಂಗ ಶ್ರೀಲಂಕಾ ತಂಡದ ನಾಯಕರಾಗಿ ಪಾದಾರ್ಪಣೆ ಮಾಡಲಿದ್ದಾರೆ. ಈ ಸರಣಿಯಲ್ಲಿ ಶೀಲಂಕಾ 3 ಟಿ20 ಪಂದ್ಯಗಳನ್ನಾಡಲಿದೆ. ಇತ್ತ ಜೂನ್ 4 ರಿಂದ ಟಿ20 ವಿಶ್ವಕಪ್ ಕೂಡ ಶುರುವಾಗಲಿದೆ. ಹೀಗಾಗಿ ಟಿ20 ವಿಶ್ವಕಪ್​ನಲ್ಲೂ ಶ್ರೀಲಂಕಾ ತಂಡವನ್ನು ಆಲ್​ರೌಂಡರ್ ವನಿಂದು ಹಸರಂಗ ಅವರೇ ಮುನ್ನಡೆಸುವ ಸಾಧ್ಯತೆ ಹೆಚ್ಚಿದೆ.

ವನಿಂದು ಹಸರಂಗ

SRH ಪಾಲಾದ RCB ಆಟಗಾರ:

ಈ ಬಾರಿಯ ಐಪಿಎಲ್ ಮಿನಿ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ವನಿಂದು ಹಸರಂಗ ಅವರನ್ನು ರಿಲೀಸ್ ಮಾಡಿತ್ತು. ಅದರಂತೆ ಹರಾಜಿನಲ್ಲಿ 1.5 ಕೋಟಿ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಲಂಕಾ ಸ್ಪಿನ್ನರ್ ಅನ್ನು ಸನ್​ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಖರೀದಿಸಿದೆ. ಅದು ಕೂಡ 1.5 ಕೋಟಿ ರೂ. ಮೂಲ ಬೆಲೆಗೆ ಎಂಬುದು ವಿಶೇಷ.

ಇದನ್ನೂ ಓದಿ: IPL 2024: ಒಂದು ಎಸೆತದ ಬೆಲೆ ಬರೋಬ್ಬರಿ 7.40 ಲಕ್ಷ ರೂ..!

ಅಂದರೆ ಈ ಹಿಂದೆ ಹಸರಂಗಗೆ ಆರ್​ಸಿಬಿ ಫ್ರಾಂಚೈಸಿ ನೀಡಿದ್ದ ಮೊತ್ತ ಬರೋಬ್ಬರಿ 10.75 ಕೋಟಿ ರೂ. ಇದೀಗ ಕೇವಲ 1.5 ಕೋಟಿ ರೂ.ಗೆ ಶ್ರೀಲಂಕಾ ಸ್ಪಿನ್ ಆಲ್​ರೌಂಡರ್​ನನ್ನು ಎಸ್​ಆರ್​ಹೆಚ್ ಫ್ರಾಂಚೈಸಿ ಖರೀದಿಸಿದೆ.

ಶ್ರೀಲಂಕಾ ತಂಡದ ಹೊಸ ನಾಯಕರುಗಳು:

  • ಏಕದಿನ ತಂಡದ ನಾಯಕ: ಕುಸಾಲ್ ಮೆಂಡಿಸ್
  • ಏಕದಿನ ತಂಡದ ಉಪನಾಯಕ: ಚರಿತ್ ಅಸಲಂಕಾ
  • ಟಿ20 ತಂಡದ ನಾಯಕ: ವನಿಂದು ಹಸರಂಗ
  • ಟಿ20 ತಂಡದ ಉಪನಾಯಕ: ಚರಿತ್ ಅಸಲಂಕಾ

 

Published On - 1:47 pm, Sat, 30 December 23