ವರ್ಲ್ಡ್ ಚಾಂಪಿಯನ್​ಶಿಪ್​ ಆಫ್ ಲೆಜೆಂಡ್ಸ್​ನಲ್ಲಿ ಭಾರತಕ್ಕೆ ಫೈನಲ್​ಗೇರಲು ಒಂದೇ ಮೆಟ್ಟಿಲು

|

Updated on: Jul 12, 2024 | 10:09 AM

2003ರ ವಿಶ್ವಕಪ್​​ನಲ್ಲಿ, 2011ರ ವರ್ಲ್ಡ್​ಕಪ್ ಕ್ವಾಟರ್​ಫೈನಲ್​ನಲ್ಲಿ, 2023ರ ವರ್ಲ್ಡ್​ ಕಪ್​ನಲ್ಲಿ, 2024ರ ಟಿ20 ವಿಶ್ವಕಪ್​ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ಮುಖಾಮುಖಿ ಆಗಿವೆ. ಈ ಕಾರಣದಿಂದ ಇಂದಿನ ಪಂದ್ಯ ಸಾಕಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ.

ವರ್ಲ್ಡ್ ಚಾಂಪಿಯನ್​ಶಿಪ್​ ಆಫ್ ಲೆಜೆಂಡ್ಸ್​ನಲ್ಲಿ ಭಾರತಕ್ಕೆ ಫೈನಲ್​ಗೇರಲು ಒಂದೇ ಮೆಟ್ಟಿಲು
Follow us on

ಟಿ20 ವಿಶ್ವಕಪ್ ಪೂರ್ಣಗೊಂಡ ಬೆನ್ನಲ್ಲೇ ವರ್ಲ್ಡ್​ ಚಾಂಪಿಯನ್​ಶಿಪ್​ ಆಫ್ ಲೆಜೆಂಡ್ಸ್ ಆರಂಭ ಆಗಿದೆ. ಇಂದು (ಜುಲೈ 12) ಸೆಮಿಫೈನಲ್ ನಡೆಯಲಿದೆ. ಈ ಪಂದ್ಯದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ಮುಖಾಮುಖಿ ಆಗುತ್ತಿವೆ. ಈ ಪಂದ್ಯ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಪಂದ್ಯದಲ್ಲಿ ಗೆದ್ದರೆ ಭಾರತ ನೇರವಾಗಿ ಫೈನಲ್​ಗೆ ಲಗ್ಗೆ ಇಡಲಿದೆ. ಭಾರತ ತಂಡಕ್ಕೆ ಯುವರಾಜ್​ ಸಿಂಗ್ ಕ್ಯಾಪ್ಟನ್ ಆದರೆ, ಆಸ್ಟ್ರೇಲಿಯಾ ತಂಡವನ್ನು ವೇಗಿ ಬ್ರೇಟ್​ಲೀ ಮುನ್ನಡೆಸುತ್ತಿದ್ದಾರೆ.

ಇಂಗ್ಲೆಂಡ್​ನ ನಾರ್ಥಾಂಪ್ಟನ್​ನಲ್ಲಿ ಈ ಪಂದ್ಯ ನಡೆಯುತ್ತಿದೆ. ಭಾರತ ಹಾಗೂ ಆಸ್ಟ್ರೇಲಿಯಾ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಸಾಕಷ್ಟು ಬಾರಿ ಮುಖಾಮುಖಿ ಆಗಿವೆ. 2003ರ ವಿಶ್ವಕಪ್​​ನಲ್ಲಿ, 2011ರ ವರ್ಲ್ಡ್​ಕಪ್ ಕ್ವಾಟರ್​ಫೈನಲ್​ನಲ್ಲಿ, 2023ರ ವರ್ಲ್ಡ್​ ಕಪ್​ನಲ್ಲಿ, 2024ರ ಟಿ20 ವಿಶ್ವಕಪ್​ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ಮುಖಾಮುಖಿ ಆಗಿವೆ. ಈ ಕಾರಣದಿಂದ ಇಂದಿನ ಪಂದ್ಯ ಸಾಕಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ.

ಯುವರಾಜ್​ ಸಿಂಗ್, ಸುರೇಶ್ ರೈನಾ, ಪಠಾಣ್ ಸಹೋದರರು ರಾಬಿತ್ ಉತ್ತಪ್ಪ ಮೊದಲಾದವರು ಟೀಂ ಇಂಡಿಯಾದಲ್ಲಿ ಇದ್ದಾರೆ. ಉಳಿದಂತೆ ಆಸ್ಟ್ರೇಲಿಯಾ ತಂಡದಲ್ಲಿ ಬ್ರೇಟ್​ ಲಿ, ಆರೋನ್ ಫಿಂಚ್, ಟಿಮ್ ಪೈನೇ ಮೊದಲಾದವರು ಇದ್ದಾರೆ. ಸ್ಟಾರ್​ ಸ್ಪೋರ್ಟ್ಸ್​ನಲ್ಲಿ ರಾತ್ರಿ 9 ಗಂಟೆಗೆ ಪಂದ್ಯ ಆರಂಭ ಆಗಲಿದೆ.

ಇದನ್ನೂ ಓದಿ: ಭಾರತ- ಶ್ರೀಲಂಕಾ ಕ್ರಿಕೆಟ್ ಕದನ ಯಾವ ಚಾನೆಲ್​ನಲ್ಲಿ ನೇರಪ್ರಸಾರ ಗೊತ್ತಾ?

ಬಲಿಷ್ಠತೆಯ ಲೆಕ್ಕಾಚಾರಕ್ಕೆ ಬಂದರೆ ಭಾರತ ಹಾಗೂ ಆಸ್ಟ್ರೇಲಿಯಾ ಎರಡೂ ತಂಡಗಳು ಬಲಿಷ್ಠವಾಗಿವೆ. ಯಾವ ತಂಡ ಗೆಲ್ಲುತ್ತದೆ ಎಂದು ಊಹಿಸುವುದು ತುಂಬಾನೇ ಕಷ್ಟ. ಟೀಂ ಇಂಡಿಯಾದಲ್ಲಿ ಯುವರಾಜ್ ಸಿಂಗ್ ಅವರು ಹೊಡಿಬಡಿ ಆಟವನ್ನು ನಿರೀಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 9:54 am, Fri, 12 July 24