ENG vs WI: ಒಂದೇ ಎಸೆತದಲ್ಲಿ ಶತಕ, ದ್ವಿಶತಕ, ತ್ರಿಶತಕದ ಸಾಧನೆ ಮಾಡಿದ ಬೆನ್ ಸ್ಟೋಕ್ಸ್..!

Updated on: Jul 12, 2024 | 6:51 PM

Ben Stokes: ಇಂಗ್ಲೆಂಡ್‌ನ ಟೆಸ್ಟ್ ನಾಯಕ ಹಾಗೂ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಈ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ 2 ವಿಕೆಟ್ ಪಡೆದರು. ಅವರು ತಮ್ಮ ಮೊದಲ ಓವರ್‌ನಲ್ಲಿ ಬ್ಯಾಟ್ಸ್‌ಮನ್ ಕಿರ್ಕ್ ಮೆಕೆಂಜಿಯನ್ನು ಔಟ್ ಮಾಡಿದರು. ಇದರೊಂದಿಗೆ ಅವರು ವಿಶೇಷ ಶತಕ, ದ್ವಿಶತಕ ಮತ್ತು ತ್ರಿಶತಕವನ್ನು ಪೂರ್ಣಗೊಳಿಸಿದರು.

1 / 6
ಇಂಗ್ಲೆಂಡ್ ಕ್ರಿಕೆಟ್ ತಂಡ ಪ್ರಸ್ತುತ ತವರಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡುತ್ತಿದೆ. ಸರಣಿಯ ಮೊದಲ ಪಂದ್ಯ ಲಾರ್ಡ್ಸ್‌ನಲ್ಲಿ ನಡೆದಿದ್ದು, ಈ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್, ವೆಸ್ಟ್ ಇಂಡೀಸ್ ತಂಡವನ್ನು ಇನ್ನಿಂಗ್ಸ್ ಹಾಗೂ ಹಾಗೂ 114 ರನ್​ಗಳಿಂದ ಮಣಿಸಿದೆ. ಇದರೊಂದಿಗೆ ಸರಣಿಯಲ್ಲಿ 1-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ.

ಇಂಗ್ಲೆಂಡ್ ಕ್ರಿಕೆಟ್ ತಂಡ ಪ್ರಸ್ತುತ ತವರಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡುತ್ತಿದೆ. ಸರಣಿಯ ಮೊದಲ ಪಂದ್ಯ ಲಾರ್ಡ್ಸ್‌ನಲ್ಲಿ ನಡೆದಿದ್ದು, ಈ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್, ವೆಸ್ಟ್ ಇಂಡೀಸ್ ತಂಡವನ್ನು ಇನ್ನಿಂಗ್ಸ್ ಹಾಗೂ ಹಾಗೂ 114 ರನ್​ಗಳಿಂದ ಮಣಿಸಿದೆ. ಇದರೊಂದಿಗೆ ಸರಣಿಯಲ್ಲಿ 1-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ.

2 / 6

ಈ ಗೆಲುವಿನೊಂದಿಗೆ ಇಂಗ್ಲೆಂಡ್ ತಂಡ ಲೆಜೆಂಡರಿ ವೇಗದ ಬೌಲರ್ ಜೇಮ್ಸ್ ಆಂಡರ್ಸನ್​ಗೆ ಗೆಲುವಿನ ಬಿಳ್ಕೋಡುಗೆ ನೀಡಿದೆ. 2003 ರಲ್ಲಿ ಟೆಸ್ಟ್ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಆಂಡರ್ಸನ್ 700 ಟೆಸ್ಟ್ ವಿಕೆಟ್‌ಗಳೊಂದಿಗೆ ವಿದಾಯ ಹೇಳಿದ್ದಾರೆ. ಇಂತಹ ವಿಶೇಷ ಪಂದ್ಯದಲ್ಲಿ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ವಿಶೇಷ ಶತಕ, ದ್ವಿಶತಕ ಹಾಗೂ ತ್ರಿಶತಕ ಪೂರೈಸಿದ್ದಾರೆ.

3 / 6

ಇಂಗ್ಲೆಂಡ್‌ನ ಟೆಸ್ಟ್ ನಾಯಕ ಹಾಗೂ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಈ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ 2 ವಿಕೆಟ್ ಪಡೆದರು. ಅವರು ತಮ್ಮ ಮೊದಲ ಓವರ್‌ನಲ್ಲಿ ಬ್ಯಾಟ್ಸ್‌ಮನ್ ಕಿರ್ಕ್ ಮೆಕೆಂಜಿಯನ್ನು ಔಟ್ ಮಾಡಿದರು. ಇದರೊಂದಿಗೆ ಅವರು ವಿಶೇಷ ಶತಕ, ದ್ವಿಶತಕ ಮತ್ತು ತ್ರಿಶತಕವನ್ನು ಪೂರ್ಣಗೊಳಿಸಿದರು.

4 / 6

ವಾಸ್ತವವಾಗಿ, ಇದು ಬೆನ್ ಸ್ಟೋಕ್ಸ್ ಅವರ 200 ನೇ ಟೆಸ್ಟ್ ವಿಕೆಟ್ ಆಗಿದ್ದರೆ, ಇಂಗ್ಲೆಂಡ್ನಲ್ಲಿ ಅವರ 100 ನೇ ಟೆಸ್ಟ್ ವಿಕೆಟ್ ಆಗಿದೆ. ಅಷ್ಟೇ ಅಲ್ಲದೆ ಈ ವಿಕೆಟ್‌ನೊಂದಿಗೆ ಬೆನ್ ಸ್ಟೋಕ್ಸ್ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 300 ವಿಕೆಟ್‌ಗಳನ್ನು ಪೂರೈಸಿದ ದಾಖಲೆಯನ್ನು ನಿರ್ಮಿಸಿದರು. ಅಂದರೆ ಬೆನ್ ಸ್ಟೋಕ್ಸ್ ಕೇವಲ ಒಂದು ವಿಕೆಟ್‌ನೊಂದಿಗೆ ಈ ಮೂರು ವಿಶೇಷ ಸಾಧನೆಗಳನ್ನು ಪೂರೈಸಿದರು.

5 / 6

ಬೆನ್ ಸ್ಟೋಕ್ಸ್‌ಗೆ ಕಿರ್ಕ್ ಮೆಕೆಂಜಿ ವಿಕೆಟ್ ತುಂಬಾ ವಿಶೇಷವಾಗಿತ್ತು. ಈ ವಿಕೆಟ್‌ನೊಂದಿಗೆ, ಅವರು ವೆಸ್ಟ್ ಇಂಡೀಸ್ ಶ್ರೇಷ್ಠ ಬೌಲರ್ ಗ್ಯಾರಿ ಸೋಬರ್ಸ್ ಮತ್ತು ದಕ್ಷಿಣ ಆಫ್ರಿಕಾದ ಲೆಜೆಂಡರಿ ಆಲ್-ರೌಂಡರ್ ಜಾಕ್ವೆಸ್ ಕಾಲಿಸ್ ಅವರ ವಿಶೇಷ ಕ್ಲಬ್‌ನಲ್ಲಿ ತಮ್ಮ ಸ್ಥಾನವನ್ನು ಪಡೆದರು. ಅವರು ಈಗ ಟೆಸ್ಟ್ ಕ್ರಿಕೆಟ್‌ನಲ್ಲಿ 6,000 ರನ್ ಮತ್ತು 200 ವಿಕೆಟ್‌ಗಳನ್ನು ಪಡೆದ ಇಂಗ್ಲೆಂಡ್‌ನ ಮೊದಲ ಆಟಗಾರ ಮತ್ತು ವಿಶ್ವದ ಮೂರನೇ ಆಟಗಾರ ಎನಿಸಿಕೊಂಡಿದ್ದಾರೆ.

6 / 6

ಬೆನ್ ಸ್ಟೋಕ್ಸ್ ಇದುವರೆಗೆ ಇಂಗ್ಲೆಂಡ್‌ ಪರ ಒಟ್ಟು 103 ಟೆಸ್ಟ್‌ಗಳನ್ನು ಆಡಿದ್ದು, ಇದರಲ್ಲಿ 200 ಕ್ಕೂ ಹೆಚ್ಚು ವಿಕೆಟ್‌ಗಳನ್ನು ಪಡೆದಿದ್ದಾರೆ. ಇದಲ್ಲದೆ ಬ್ಯಾಟಿಂಗ್​ನಲ್ಲೂ ಮ್ಯಾಜಿಕ್ ಮಾಡಿರುವ ಸ್ಟೋಕ್ಸ್ 35.30 ರ ಸರಾಸರಿಯಲ್ಲಿ 6,320 ರನ್ ಬಾರಿಸಿದ್ದಾರೆ. ಇದರಲ್ಲಿ 13 ಶತಕಗಳ ಇನ್ನಿಂಗ್ಸ್ ಕೂಡ ಸೇರಿದೆ.

Loading...
Unable to load recommendations.
Follow Us