IND vs ENG 4th Test: ಭಾರತ ಗೆದ್ದ ತಕ್ಷಣ ಡ್ರೆಸ್ಸಿಂಗ್ ರೂಮ್​ನಲ್ಲಿ ರಾಹುಲ್ ದ್ರಾವಿಡ್ ಏನು ಮಾಡಿದ್ರು ನೋಡಿ

Rahul Dravid Celebration: ರಾಂಚಿಯಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಗೆದ್ದ ನಂತರ ರಾಹುಲ್ ದ್ರಾವಿಡ್ ಖುಷಿ ವ್ಯಕ್ತಪಡಿಸಿ ಡ್ರೆಸ್ಸಿಂಗ್ ರೂಂನಲ್ಲಿ ಸಂಭ್ರಮಿಸಿದರು. ಮೈದಾನದಲ್ಲಿ ಶುಭ್​ಮನ್ ಗಿಲ್ ಮತ್ತು ಧ್ರುವ್ ಜುರೆಲ್ ಅವರನ್ನು ತಬ್ಬಿಕೊಂಡಾಗ ಭಾರತದ ಮುಖ್ಯ ಕೋಚ್ ಅವರ ಮುಖದಲ್ಲಿ ನಗು ಇತ್ತು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

IND vs ENG 4th Test: ಭಾರತ ಗೆದ್ದ ತಕ್ಷಣ ಡ್ರೆಸ್ಸಿಂಗ್ ರೂಮ್​ನಲ್ಲಿ ರಾಹುಲ್ ದ್ರಾವಿಡ್ ಏನು ಮಾಡಿದ್ರು ನೋಡಿ
Rahul Dravid Celebration

Updated on: Feb 27, 2024 | 7:43 AM

ರಾಂಚಿ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧದ 192 ರನ್ ಗುರಿಯನ್ನು ಬೆನ್ನಟ್ಟಿದ ಭಾರತ (India vs England) ತವರಿನಲ್ಲಿ ಮತ್ತೊಂದು ಸರಣಿ ಜಯ ದಾಖಲಿಸಿದ ಸಾಧನೆ ಮಾಡಿದೆ. ಆತಿಥೇಯ ತಂಡ ಒಂದು ಹಂತದಲ್ಲಿ ಟೆಸ್ಟ್ ಅನ್ನು ಕೈಯಲ್ಲಿ ಹಿಡಿದಿಟ್ಟುಕೊಂಡಿತ್ತು. ಆದರೆ ಇಂಗ್ಲೆಂಡ್ ಪುಟಿದೇಳುವ ಮೂಲಕ ಭಾರತವನ್ನು ಸೋಲಿನ ಸುಳಿಗೆ ಸಿಲುಕಿಸಿತು. ಬಳಿಕ ಶುಭ್​ಮನ್ ಗಿಲ್ ಅವರ ಅರ್ಧಶತಕ ಮತ್ತು ಧ್ರುವ್ ಜುರೆಲ್ ಅವರ ಅಜೇಯ 39 ರನ್​ಗಳಳ ನೆರವಿನಿಂದ ಭಾರತವು ಟಾರ್ಗೆಟ್ ಬೆನ್ನಟ್ಟಿ 5 ವಿಕೆಟ್​ಗಳ ಜಯ ಸಾಧಿಸಿ ಸರಣಿಯಲ್ಲಿ 3-1 ಮುನ್ನಡೆ ಪಡೆದುಕೊಂಡಿದೆ.

ಭಾರತ ಗೆದ್ದ ತಕ್ಷಣ ಎಲ್ಲ ಆಟಗಾರರು ಕುಣಿದು ಕುಪ್ಪಳಿಸಿದರು. ಅದರಲ್ಲೂ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಗೆಲುವಿನ ನಂತರ ಸಂಭ್ರಮಿಸಿದ್ದು ವಿಶೇಷವಾಗಿತ್ತು. ಟೀಮ್ ಇಂಡಿಯಾ ಗೆಲುವಿನ ರನ್ ಗಳಿಸಿದ ನಂತರ ಡ್ರೆಸ್ಸಿಂಗ್ ರೂಂನಲ್ಲಿ ದ್ರಾವಿಡ್ ಸಂಭ್ರಮಿಸಿದರು. ಆಟದ ನಂತರ ಗಿಲ್ ಮತ್ತು ಧ್ರುವ್ ಅವರನ್ನು ಅಪ್ಪಿಕೊಂಡ ದ್ರಾವಿಡ್ ಅವರ ಮುಖದಲ್ಲಿ ನಗು ಇತ್ತು. ದ್ರಾವಿಡ್ ಮೈದಾನದಲ್ಲಿ ತಮ್ಮ ಭಾವನೆಗಳನ್ನು ಅಷ್ಟೇನೂ ಹೊರಹಾಕುವುದಿಲ್ಲ. ಈ ರೀತಿ ಆಚರಿಸಿದ್ದು ಅಪರೂಪವಾಗಿದೆ.

ಅತಿ ಹೆಚ್ಚು ಸರಣಿ ಗೆಲುವು; ಪಾಕ್, ವಿಂಡೀಸ್ ದಾಖಲೆ ಮುರಿದ ಟೀಂ ಇಂಡಿಯಾ

ಭಾರತದ ಗೆಲುವಲ್ಲಿ ರಾಹುಲ್ ದ್ರಾವಿಡ್ ಸಂಭ್ರಮಿಸಿದ ವಿಡಿಯೋ:

 

ರಾಂಚಿಯಲ್ಲಿ ಜಯ ಸಾಧಿಸುವ ಮೂಲಕ ಭಾರತ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ಗೆಲುವನ್ನು ತನ್ನದಾಗಿಸಿಕೊಂಡಿದೆ. ಸರಣಿಯ ಐದನೇ ಟೆಸ್ಟ್ ಪಂದ್ಯ ಮಾರ್ಚ್ 7 ರಿಂದ 11 ರವರೆಗೆ ಧರ್ಮಶಾಲಾದಲ್ಲಿ ನಡೆಯಲಿದೆ.

ಸರಣಿಯ ಆರಂಭಿಕ ಪಂದ್ಯದಲ್ಲಿ ಆತಿಥೇಯ ತಂಡವನ್ನು ಬೆಚ್ಚಿ ಬೀಳಿಸಿದ ಇಂಗ್ಲೆಂಡ್ ಹೈದರಾಬಾದ್ ಟೆಸ್ಟ್‌ನಲ್ಲಿ ಗೆಲುವು ಸಾಧಿಸಿತು. ಎರಡನೇ ಪಂದ್ಯದಲ್ಲಿ ಪುಟಿದೆದ್ದ ಭಾರತ 106 ರನ್‌ಗಳ ಜಯ ದಾಖಲಿಸಿ ಸರಣಿಯನ್ನು 1-1ರಲ್ಲಿ ಸಮಬಲಗೊಳಿಸಿತು. ಬಳಿಕ ರಾಜ್‌ಕೋಟ್‌ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ಅದ್ಭುತ ಪ್ರದರ್ಶನ ನೀಡಿತು ಮತ್ತು 434 ರನ್‌ಗಳ ದೊಡ್ಡ ಗೆಲುವು ದಾಖಲಿಸಿ 2-1 ಮುನ್ನಡೆ ಸಾಧಿಸಿದೆ.

‘ಯುವ ತಂಡದ ಶ್ರೇಷ್ಠ ಸರಣಿ ಗೆಲುವು’; ಐತಿಹಾಸಿಕ ಗೆಲುವನ್ನು ಸಂಭ್ರಮಿಸಿದ ಕಿಂಗ್ ಕೊಹ್ಲಿ

4 ನೇ ಟೆಸ್ಟ್‌ನಲ್ಲಿ ಕೂಡ ಭಾರತ ತನ್ನ ಫಾರ್ಮ್ ಅನ್ನು ಮುಂದುವರೆಸಿತು ಮತ್ತು 4 ನೇ ದಿನದಲ್ಲಿ 192 ರನ್ ಬೆನ್ನಟ್ಟಿ ಸರಣಿ ಗೆಲುವು ಕಂಡಿತು. ಕೆಲ ಸ್ಟಾರ್ ಆಟಗಾರರ ಅಲಭ್ಯತೆಯಲ್ಲಿ ಯುವ ಆಟಗಾರರು ನೀಡಿದ ಪ್ರದರ್ಶನ ಎಲ್ಲರ ಮನ್ನಣೆಗೆ ಪಾತ್ರವಾಗಿದೆ. ವಿರಾಟ್ ಕೊಹ್ಲಿ ವೈಯಕ್ತಿಕ ಕಾರಣಗಳಿಂದ ಹೊರಗುಳಿದಿದ್ದಾರೆ ಮತ್ತು ಸರಣಿಯಲ್ಲಿ ಯಾವುದೇ ಪಂದ್ಯವನ್ನು ಆಡಿಲ್ಲ. ಕೆಎಲ್ ರಾಹುಲ್ ಸರಣಿಯಲ್ಲಿ ಕೇವಲ ಒಂದು ಪಂದ್ಯವನ್ನಾಡಿದ್ದಾರಷ್ಟೆ. ಮೊಹಮ್ಮದ್ ಶಮಿ ಪಾದದ ಗಾಯದಿಂದ ಹೊರಗುಳಿದಿದ್ದಾರೆ. 4ನೇ ಟೆಸ್ಟ್ ಪಂದ್ಯದಿಂದ ಜಸ್ಪ್ರೀತ್ ಬುಮ್ರಾ ಅವರಿಗೆ ವಿಶ್ರಾಂತಿ ನೀಡಲಾಗಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ