
ಎರಡನೇ ಆವೃತ್ತಿಯ ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ 2025 (World Championship Of Legends 2025) ಟೂರ್ನಮೆಂಟ್ ಜುಲೈ 18 ರ ಶುಕ್ರವಾರದಿಂದ ಪ್ರಾರಂಭವಾಗುತ್ತಿದೆ. ಈ ಟೂರ್ನಮೆಂಟ್‌ನಲ್ಲಿ, ಇಂಡಿಯಾ ಚಾಂಪಿಯನ್ಸ್, ವೆಸ್ಟ್ ಇಂಡೀಸ್ ಚಾಂಪಿಯನ್ಸ್, ಸೌತ್ ಆಫ್ರಿಕಾ ಚಾಂಪಿಯನ್ಸ್, ಪಾಕಿಸ್ತಾನ ಚಾಂಪಿಯನ್ಸ್, ಆಸ್ಟ್ರೇಲಿಯಾ ಚಾಂಪಿಯನ್ಸ್ ಮತ್ತು ಇಂಗ್ಲೆಂಡ್ ಚಾಂಪಿಯನ್ಸ್ ತಂಡಗಳು ಭಾಗವಹಿಸುತ್ತಿವೆ. ಟೂರ್ನಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ಪಾಕಿಸ್ತಾನ ಚಾಂಪಿಯನ್ಸ್ ತಂಡಗಳು ಮುಖಾಮುಖಿಯಾಗಿವೆ. ಈ ನಡುವೆ ವೆಸ್ಟ್ ಇಂಡೀಸ್ ಚಾಂಪಿಯನ್ಸ್ (West Indies Champions) ತಂಡಕ್ಕೆ ಸಂಬಂಧಿಸಿದ ಸುದ್ದಿಯೊಂದು ಸಾಕಷ್ಟು ಸದ್ದು ಮಾಡುತ್ತಿದ್ದು, ಈ ತಂಡದ ಆಟಗಾರರು 30 ಗ್ರಾಂ ಚಿನ್ನದಿಂದ ತಯಾರಿಸಲಾಗಿರುವ ಜೆರ್ಸಿ ತೊಟ್ಟು ಕಣಕ್ಕಿಳಿಯುತ್ತಿದೆ ಎಂದು ವರದಿಯಾಗಿದೆ.
ವೆಸ್ಟ್ ಇಂಡೀಸ್ ಚಾಂಪಿಯನ್ಸ್ ತಂಡ ಧರಿಸಲಿರುವ ಈ ಜೆರ್ಸಿಯ ಬೆಲೆ ಇನ್ನೂ ತಿಳಿದುಬಂದಿಲ್ಲ ಆದರೆ ಇದನ್ನು ದುಬೈನ ಲಾರೆನ್ಸ್ ಗ್ರೂಪ್ ಚಾನೆಲ್ 2 ಗ್ರೂಪ್‌ನ ಸಹಭಾಗಿತ್ವದಲ್ಲಿ ತಯಾರಿಸಿದೆ. ಈ ಪಂದ್ಯಾವಳಿಯಲ್ಲಿ, ವೆಸ್ಟ್ ಇಂಡೀಸ್ ತಂಡದ ಅನೇಕ ಸ್ಟಾರ್ ಆಟಗಾರರು ಈ ಜೆರ್ಸಿಯನ್ನು ಧರಿಸುವುದನ್ನು ಕಾಣಬಹುದ್ದಾಗಿದ್ದು, ಇದೀಗ ಈ ಜೆರ್ಸಿಯನ್ನು ಕ್ರಿಸ್ ಗೇಲ್, ಕೀರನ್ ಪೊಲಾರ್ಡ್ ಮತ್ತು ಡ್ವೇನ್ ಬ್ರಾವೋ ಬಿಡುಗಡೆ ಮಾಡಿದ್ದಾರೆ.
Gayle, Pollard among West Indies Champions to don most expensive jersey in Cricket history made of 30gms of Gold. 🤯
– Dubai-based Lorenze made the Jersey in partnership with Channel2 Group. pic.twitter.com/8IOKfKeKpy
— Mufaddal Vohra (@mufaddal_vohra) July 18, 2025
2025 ರ ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಟೂರ್ನಮೆಂಟ್ ಬಗ್ಗೆ ಹೇಳುವುದಾದರೆ, ಈ ಪಂದ್ಯಾವಳಿಯಲ್ಲಿ ಅನೇಕ ಲೆಜೆಂಡರಿ ಆಟಗಾರರು ಆಡಲಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಆಟಗಾರರು ಮಾತ್ರ ಇದರಲ್ಲಿ ಆಡುವುದನ್ನು ಕಾಣಬಹುದು. ವೆಸ್ಟ್ ಇಂಡೀಸ್ ತಂಡದ ನಾಯಕತ್ವವನ್ನು ಕ್ರಿಸ್ ಗೇಲ್ ಅವರಿಗೆ ವಹಿಸಲಾಗಿದೆ. ಇದು ಮಾತ್ರವಲ್ಲದೆ, ತಂಡವು ಅನೇಕ ಆಕ್ರಮಣಕಾರಿ ಬ್ಯಾಟ್ಸ್‌ಮನ್‌ಗಳು ಮತ್ತು ಮಾರಕ ಬೌಲರ್‌ಗಳನ್ನು ಸಹ ಒಳಗೊಂಡಿದೆ.
ವೆಸ್ಟ್ ಇಂಡೀಸ್ ಚಾಂಪಿಯನ್ಸ್ ತಂಡ: ಕ್ರಿಸ್ ಗೇಲ್, ಕೀರನ್ ಪೊಲಾರ್ಡ್, ಡ್ವೇನ್ ಬ್ರಾವೋ, ಲೆಂಡ್ಲ್ ಸಿಮ್ಮನ್ಸ್, ಡ್ವೇನ್ ಸ್ಮಿತ್, ಶೆಲ್ಡನ್ ಕಾಟ್ರೆಲ್, ಶಿವನಾರಾಯಣ್ ಚಂದ್ರಪಾಲ್, ಚಾಡ್ವಿಕ್ ವಾಲ್ಟನ್, ಶಾನನ್ ಗೇಬ್ರಿಯಲ್, ಆಶ್ಲೇ ನರ್ಸ್, ಫಿಡೆಲ್ ಎಡ್ವರ್ಡ್ಸ್, ವಿಲಿಯಂ ಪರ್ಕಿನ್ಸ್, ಸುಲೈಮನ್ ಬೆನ್, ಡೇವ್ ಮೊಹಮ್ಮದ್, ನಿಕಿತಾ ಮಿಲ್ಲರ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ