AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

6,6,6,6,6,6: ಯುವರಾಜ್ ಸಿಂಗ್ ಸಿಡಿಲಬ್ಬರಕ್ಕೆ ತತ್ತರಿಸಿದ ಆಸ್ಟ್ರೇಲಿಯಾ!

ವರ್ಲ್ಡ್​ ಚಾಂಪಿಯನ್​ಶಿಪ್ ಆಫ್ ಲೆಜೆಂಡ್ಸ್ ಎಂಬುದು ನಿವೃತ್ತ ಅಂತರರಾಷ್ಟ್ರೀಯ ಕ್ರಿಕೆಟ್ ತಾರೆಗಳು ಭಾಗವಹಿಸುವ ಒಂದು ಪ್ರಮುಖ ಟಿ20 ಕ್ರಿಕೆಟ್ ಪಂದ್ಯಾವಳಿಯಾಗಿದೆ. ಪ್ರಸ್ತುತ ಇದರ ಮೂರನೇ ಆವೃತ್ತಿಯು ಯುಎಇಯ ಶಾರ್ಜಾ ಮತ್ತು ದುಬೈನಲ್ಲಿ ಜರುಗುತ್ತಿದೆ. ಈ ಟೂರ್ನಿಯ ಮೊದಲ ಪಂದ್ಯದಲ್ಲೇ ಇಂಡಿಯಾ ಚಾಂಪಿಯನ್ಸ್ ತಂಡ ಭರ್ಜರಿ ಜಯ ಸಾಧಿಸಿದೆ.

6,6,6,6,6,6: ಯುವರಾಜ್ ಸಿಂಗ್ ಸಿಡಿಲಬ್ಬರಕ್ಕೆ ತತ್ತರಿಸಿದ ಆಸ್ಟ್ರೇಲಿಯಾ!
Yuvraj Singh Image Credit source: Fancode
ಝಾಹಿರ್ ಯೂಸುಫ್
|

Updated on: Oct 04, 2026 | 8:56 AM

Share

ವರ್ಲ್ಡ್​ ಚಾಂಪಿಯನ್​ಶಿಪ್ ಆಫ್ ಲೆಜೆಂಡ್ಸ್​ ಟೂರ್ನಿಯ ಮೊದಲ ಪಂದ್ಯದಲ್ಲೇ ಭರ್ಜರಿ ಜಯ ಸಾಧಿಸಿ ಇಂಡಿಯಾ ಚಾಂಪಿಯನ್ಸ್ ಶುಭಾರಂಭ ಮಾಡಿದೆ. ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಚಾಂಪಿಯನ್ಸ್ ತಂಡದ ನಾಯಕ ಉಸ್ಮಾನ್ ಖ್ವಾಜಾ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿ ಇಂಡಿಯಾ ಚಾಂಪಿಯನ್ಸ್ ನಿರೀಕ್ಷಿತ ಆರಂಭ ಪಡೆದಿರಲಿಲ್ಲ.

ಆರಂಭಿಕ ದಾಂಡಿಗ ಅಂಬಾಟಿ ರಾಯುಡು ಕೇವಲ 4 ರನ್​ಗಳಿಸಿ ಔಟಾದರೆ, ಆ ಬಳಿಕ ಬಂದ ಸ್ಟುವರ್ಟ್ ಬಿನ್ನಿ 13 ರನ್​ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನು ಮತ್ತೋರ್ವ ಆರಂಭಿಕ ಬ್ಯಾಟರ್ ನಮನ್ ಓಜಾ 26 ಎಸೆತಗಳಲ್ಲಿ ಕಲೆಹಾಕಿದ್ದು ಕೇವಲ 31 ರನ್​ಗಳು ಮಾತ್ರ.

ಈ ಹಂತದಲ್ಲಿ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಯುವರಾಜ್ ಸಿಂಗ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಆಸ್ಟ್ರೇಲಿಯಾ ಬೌಲರ್​ಗಳನ್ನು ಮನಬಂದಂತೆ ದಂಡಿಸಿದ ಯುವಿ 6 ಭರ್ಜರಿ ಸಿಕ್ಸರ್ ಹಾಗೂ 5 ಫೋರ್​ಗಳೊಂದಿಗೆ ಕೇವಲ 44 ಎಸೆತಗಳಲ್ಲಿ 71 ರನ್ ಚಚ್ಚಿದರು.

ಯುವರಾಜ್ ಸಿಂಗ್​ಗೆ ಉತ್ತಮ ಸಾಥ್ ನೀಡಿದ ಯೂಸುಫ್ ಪಠಾಣ್ ಕೇವಲ 20 ಎಸೆತಗಳಲ್ಲಿ 4 ಸಿಕ್ಸರ್​ಗಳೊಂದಿಗೆ 37 ರನ್ ಬಾರಿಸಿದರು. ಇನ್ನು ಅಂತಿಮ ಹಂತದಲ್ಲಿ ಅಬ್ಬರಿಸಿದ ರಿಷಿ ಧವನ್ 12 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 1 ಫೋರ್​ನೊಂದಿಗೆ 35 ರನ್ ಚಚ್ಚಿದರು. ಈ ಮೂಲಕ ಇಂಡಿಯಾ ಚಾಂಪಿಯನ್ಸ್ ತಂಡವು 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 196 ರನ್ ಕಲೆಹಾಕಿತು.

197 ರನ್​ಗಳ ಕಠಿಣ ಗುರಿ:

20 ಓವರ್​ಗಳಲ್ಲಿ 197 ರನ್​ಗಳ ಗುರಿ ಪಡೆದ ಆಸ್ಟ್ರೇಲಿಯಾ ಚಾಂಪಿಯನ್ಸ್ ತಂಡಕ್ಕೆ ಡಾರ್ಸಿ ಶಾರ್ಟ್ ಉತ್ತಮ ಆರಂಭ ಒದಗಿಸಿದರು. ಮೊದಲ ಓವರ್​ನಿಂದಲೇ ಬಿರುಸಿನ ಬ್ಯಾಟಿಂಗ್​ಗೆ ಒತ್ತು ನೀಡಿದ ಶಾರ್ಟ್ ಕೇವಲ 28 ಎಸೆತಗಳಲ್ಲಿ 7 ಸಿಕ್ಸರ್ ಹಾಗೂ 4 ಫೋರ್​ಗಳೊಂದಿಗೆ 65 ರನ್ ಬಾರಿಸಿದರು.

ಇದಾಗ್ಯೂ ಶಾರ್ಟ್ ಅವರ ಈ ಭರ್ಜರಿ ಬ್ಯಾಟಿಂಗ್​ಗೆ ಉಳಿದ ಬ್ಯಾಟರ್​ಗಳಿಂದ ನಿರೀಕ್ಷಿತ ಸಾಥ್ ಸಿಕ್ಕಿರಲಿಲ್ಲ. ಪರಿಣಾಮ ಆಸ್ಟ್ರೇಲಿಯಾ ಚಾಂಪಿಯನ್ಸ್ ತಂಡವು 16.2 ಓವರ್​ಗಳಲ್ಲಿ 150 ರನ್​ಗಳಿಸಿ ಆಲೌಟ್ ಆಯಿತು. ಈ ಮೂಲಕ ಇಂಡಿಯಾ ಚಾಂಪಿಯನ್ಸ್ ತಂಡವು 46 ರನ್​ಗಳ ಭರ್ಜರಿ ಜಯ ಸಾಧಿಸಿ ಶುಭಾರಂಭ ಮಾಡಿದೆ.

ಇಂಡಿಯಾ ಚಾಂಪಿಯನ್ಸ್ ಪ್ಲೇಯಿಂಗ್ 11: ನಮನ್ ಓಜಾ (ವಿಕೆಟ್ ಕೀಪರ್), ಅಂಬಾಟಿ ರಾಯುಡು , ಯುವರಾಜ್ ಸಿಂಗ್ (ನಾಯಕ) , ಯೂಸುಫ್ ಪಠಾಣ್ , ಇರ್ಫಾನ್ ಪಠಾಣ್ , ಸ್ಟುವರ್ಟ್ ಬಿನ್ನಿ , ರಿಷಿ ಧವನ್ , ಹರ್ಭಜನ್ ಸಿಂಗ್ , ಪಿಯೂಷ್ ಚಾವ್ಲಾ , ಮೋಹಿತ್ ಶರ್ಮಾ , ಧವಲ್ ಕುಲಕರ್ಣಿ.

ಇದನ್ನೂ ಓದಿ: ಇದು ಕೇವಲ ಗೆಲುವಲ್ಲ… ಇತಿಹಾಸವನ್ನೇ ಬದಲಿಸಿದ ವೆಸ್ಟ್ ಇಂಡೀಸ್

ಆಸ್ಟ್ರೇಲಿಯಾ ಚಾಂಪಿಯನ್ಸ್ ಪ್ಲೇಯಿಂಗ್ 11: ಡಾರ್ಸಿ ಶಾರ್ಟ್ , ಉಸ್ಮಾನ್ ಖ್ವಾಜಾ (ನಾಯಕ) , ಬೆನ್ ಡಂಕ್ (ವಿಕೆಟ್ ಕೀಪರ್ ), ಕ್ಯಾಲಮ್ ಫರ್ಗುಸನ್ , ಜೊನಾಥನ್ ವೆಲ್ಸ್ , ಜೋ ಬರ್ನ್ಸ್ , ನಾಥನ್ ಕೌಲ್ಟರ್-ನೈಲ್ , ಬೆನ್ ಲಾಫ್ಲಿನ್ , ಫವಾದ್ ಅಹ್ಮದ್ , ಕೇನ್ ರಿಚರ್ಡ್ಸನ್ , ಬೆನ್ ಹಿಲ್ಫೆನ್‌ಹೌಸ್.

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More