ಕ್ರಿಕೆಟ್ ನಿಂದ ಪಾಕಿಸ್ತಾನಕ್ಕೆ ಅವಮಾನವೂ ಆಗುತ್ತಿದೆ ಮತ್ತು ಭಯೋತ್ಪಾದಕರಿಗೆ ತನ್ನಲ್ಲಿ ಆಶ್ರಯ ಕೊಟ್ಟಿರುವುದಕ್ಕೆ ಮುಖಭಂಗವೂ ಆಗುತ್ತಿದೆ. ನ್ಯೂಜಿಲೆಂಡ್ ಕ್ರಿಕೆಟ್ ತಂಡ ಒಂದೂ ಪಂದ್ಯವಾಡದೆ ಸ್ವದೇಶಕ್ಕೆ ಮರಳಿದ ಬಳಿಕ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್ (ಈಸಿಬಿ) ಪುರುಷರು ಮಹಿಳೆ ತಂಡಗಳ ಪಾಕಿಸ್ತಾನ ಪ್ರವಾಸವನ್ನು ರದ್ದುಗೊಳಿಸಿದೆ. ಈಸಿಬಿ ನಿರ್ಣಯದಿಂದ ತನಗೆ ವಿಪರೀತ ಯಾತನೆ ಮತ್ತು ಘಾಸಿಯಾಗಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಹೊಸ ಚೀಫ್ ರಮೀಜ್ ರಾಜಾ ಹೇಳಿದ್ದಾರೆ. ಸಹಾಯದ ಅಗತ್ಯವಿದ್ದ ಅತ್ಯಂತ ಕ್ಲಿಷ್ಟಕರ ಸಮಯದಲ್ಲಿ ತನ್ನ ಸಮುದಾಯದ ಒಂದು ಸದಸ್ಯ ರಾಷ್ಟ್ರಕ್ಕೆ ಈಸಿಬಿ ಬೆನ್ನು ಹಾಕಿದ್ದು ಅತೀವ ಬೇಸರ ಮೂಡಿಸಿದೆ ಎಂದು ರಮೀಜ್ ರಾಜಾ ತಮ್ಮ ನೋವು ತೋಡಿಕೊಂಡಿದ್ದಾರೆ.
‘ಇಂಗ್ಲೆಂಡ್ ನಮ್ಮನ್ನು ನಿರಾಶೆಯ ಕೂಪಕ್ಕೆ ನೂಕಿದೆ. ನಮಗೆ ಅತ್ಯಂತ ಜರೂರಾಗಿ ಸಹಾಯ ಬೇಕಿದ್ದ ಸಮಯದಲ್ಲಿ ಅದು ನಮ್ಮಿಂದ ವಿಮುಖಗೊಂಡಿದೆ. ಅಲ್ಲಾಹ್ನ ಕೃಪೆಯಿದ್ದರೆ ನಮ್ಮ ಕ್ರಿಕೆಟ್ ಜೀವಂತವಾಗಿರುತ್ತದೆ,’ ಎಂದು ರಮೀಜ್ ಟ್ವೀಟ್ ಮಾಡಿದ್ದಾರೆ.
Disappointed with England, pulling out of their commitment & failing a member of their Cricket fraternity when it needed it most. Survive we will inshallah. A wake up call for Pak team to become the best team in the world for teams to line up to play them without making excuses.
— Ramiz Raja (@iramizraja) September 20, 2021
ಮಂದುವರಿದು ಹೇಳಿರುವ ರಮೀಜ್, ಪಾಕಿಸ್ತಾನ ಕ್ರಿಕೆಟ್ ಟೀಮ್ ವಿಶ್ವದ ಎಲ್ಲ ತಂಡಗಳನ್ನು ಮಣಿಸಿ ಅತ್ಯಂತ ಪ್ರಬಲ ತಂಡವಾಗಲು ಮತ್ತು ಬೇರೆ ದೇಶಗಳು ಆದರೊಂದಿಗೆ ಯಾವುದೇ ನೆಪಗಳನ್ನು ಹೇಳದೆ ಆಡಲು ಹಾತೊರೆಯುವಂತಾಗಲು ಇದೊಂದು ಎಚ್ಚರಿಕೆಯ ಕರೆಯಾಗಿದೆ, ಎಂದು ಹೇಳಿದ್ದಾರೆ.
ರಮೀಜ್ ರಾಜಾ ಪಾಕಿಸ್ತಾನದ ಮಾಜಿ ಆರಂಭ ಆಟಗಾರ ಮತ್ತು ಕಾಮೆಂಟೇಟರ್ ಸಹ ಆಗಿದ್ದಾರೆ.
ಇಂಗ್ಲೆಂಡ್ ನ ಪುರುಷ ಮತ್ತು ಮಹಿಳಾ ತಂಡಗಳ ಪಾಕಿಸ್ತಾನ ಪ್ರವಾಸವನ್ನು ಒಲ್ಲದ ಮನಸ್ಸಿನಿಂದ ರದ್ದುಗೊಳಿಸುತ್ತಿದ್ದೇವೆ, ಎಂದು ಸೋಮವಾರ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ಈಸಿಬಿ ತಿಳಿಸಿತ್ತು.
‘ಪಾಕಿಸ್ತಾನದಲ್ಲಿ ಇಂಗ್ಲೆಂಡ್ ಪುರುಷ ಮತ್ತು ಮಹಿಳೆಯರ ಈ ಹೆಚ್ಚುವರಿ ಪಂದ್ಯಗಳ ಬಗ್ಗೆ ಚರ್ಚಿಲು ಈಸಿಬಿ ವಾರಾಂತ್ಯದಲ್ಲಿ ಸಭೆ ಸೇರಿತ್ತು. ಈ ಪ್ರವಾಸಗಳನ್ನು ಒಲ್ಲದ ಮನಸ್ಸಿನಿಂದ ರದ್ದುಪಡಿಸುತ್ತಿದ್ದೇವೆ ಎಂದು ಈ ಮೂಲಕ ದೃಢೀಕರಿಸುತ್ತೇವೆ,’ ಎಂದು ಈಸಿಬಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: Big news: ಪಾಕ್ ಕ್ರಿಕೆಟ್ಗೆ ಭಾರಿ ಮುಖಭಂಗ; ಭದ್ರತಾ ಕಾರಣದಿಂದಾಗಿ ನ್ಯೂಜಿಲ್ಯಾಂಡ್ ಪ್ರವಾಸ ರದ್ದು!
ಇದನ್ನೂ ಓದಿ: ಭಾರತ ಮತ್ತು ಪಾಕಿಸ್ತಾನದ ನಡುವೆ ದ್ವಿಪಕ್ಷೀಯ ಕ್ರಿಕೆಟ್ ಸರಣಿ ಸದ್ಯಕ್ಕಂತೂ ಸಾಧ್ಯವೇ ಇಲ್ಲ: ರಮೀಜ ರಾಜಾ, ಪಿಸಿಬಿ ಚೇರ್ಮನ್