Hardik Pandya: ಟೀಂ ಇಂಡಿಯಾ ವಿಶ್ವಕಪ್ ಸೋಲಲು ಹಾರ್ದಿಕ್ ಪಾಂಡ್ಯ ಕಾರಣ! ರವಿಶಾಸ್ತ್ರಿ ಶಾಕಿಂಗ್ ಹೇಳಿಕೆ

| Updated By: ಪೃಥ್ವಿಶಂಕರ

Updated on: Jul 25, 2022 | 3:14 PM

Hardik Pandya: ಇಂಜುರಿಯಿಂದಾಗಿ ಹಾರ್ದಿಕ್ ವಿಶ್ವಕಪ್​ನಿಂದ ದೂರ ಉಳಿದರು. ಹೀಗಾಗಿ ಎರಡು ವಿಶ್ವಕಪ್ ಸೋಲಿಗೆ ಪಾಂಡ್ಯ ಗಾಯವೇ ಕಾರಣ. ಅದಕ್ಕಾಗಿ ನಾವು ಭಾರೀ ಬೆಲೆ ತೆರಬೇಕಾಯಿತು ಎಂದಿದ್ದಾರೆ.

Hardik Pandya: ಟೀಂ ಇಂಡಿಯಾ ವಿಶ್ವಕಪ್ ಸೋಲಲು ಹಾರ್ದಿಕ್ ಪಾಂಡ್ಯ ಕಾರಣ! ರವಿಶಾಸ್ತ್ರಿ ಶಾಕಿಂಗ್ ಹೇಳಿಕೆ
ಹಾರ್ದಿಕ್ ಪಾಂಡ್ಯ
Follow us on

ಭಾರತದ ಮಾಜಿ ಕೋಚ್ ರವಿಶಾಸ್ತ್ರಿ (Ravi Shastri) ಹಾರ್ದಿಕ್ ಪಾಂಡ್ಯ (Hardik Pandya) ಬಗ್ಗೆ ಶಾಕಿಂಗ್ ಸುದ್ದಿಯೊಂದನ್ನು ಕಾಮೆಂಟ್ ಮಾಡಿದ್ದಾರೆ. ಎರಡು ವಿಶ್ವಕಪ್ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ( World Cups and the World Test Championship) ಟೀಂ ಇಂಡಿಯಾ ಸೋಲಿಗೆ ಕಾರಣಗಳ ಬಗ್ಗೆ ಮಾತನಾಡಿದ ರವಿಶಾಸ್ತ್ರಿ, ಟೀಮ್ ಇಂಡಿಯಾ ಆಲ್‌ರೌಂಡರ್ ವಿರುದ್ಧ ವಾಗ್ದಾಳಿ ನಡೆಸಿದರು. ನನಗೆ ತಂಡದಲ್ಲಿ ಯಾವಾಗಲೂ ಆಡುವ ಅಗ್ರ-ಆರು ಆಟಗಾರರಲ್ಲಿ ಬೌಲರ್​ಗಳನ್ನು ಕಾಣಲು ಬಯಸುತ್ತೇನೆ. ಆದರೆ ಇಂಜುರಿಯಿಂದಾಗಿ ಹಾರ್ದಿಕ್ ವಿಶ್ವಕಪ್​ನಿಂದ ದೂರ ಉಳಿದರು. ಹೀಗಾಗಿ ಎರಡು ವಿಶ್ವಕಪ್ ಸೋಲಿಗೆ ಪಾಂಡ್ಯ ಗಾಯವೇ ಕಾರಣ. ಅದಕ್ಕಾಗಿ ನಾವು ಭಾರೀ ಬೆಲೆ ತೆರಬೇಕಾಯಿತು ಎಂದಿದ್ದಾರೆ.

ಏಕೆಂದರೆ ಆಗ ಟಾಪ್-6ರಲ್ಲಿ ಟೀಂ ಇಂಡಿಯಾ ಪರ ಬೌಲಿಂಗ್ ಮಾಡುವವರು ಯಾರೂ ಇರಲಿಲ್ಲ. ಅಂತಹವರನ್ನು ಹುಡುಕುವಂತೆ ಆಯ್ಕೆಗಾರರಿಗೂ ಹೇಳಿದ್ದೆ. ಆದರೆ ನಂತರ ಅವರು ಯಾರನ್ನು ಪಾಂಡ್ಯ ಬದಲಿಯಾಗಿ ಹುಡುಕಲಿಲ್ಲ ಎಂದಿದ್ದಾರೆ.

ಶಾಸ್ತ್ರಿ ಅವರ ಕೋಚಿಂಗ್‌ನಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾದಲ್ಲಿ ಎರಡು ಸರಣಿಗಳನ್ನು ಗೆದ್ದುಕೊಂಡಿದ್ದು ಗೊತ್ತೇ ಇದೆ. ಇದಲ್ಲದೆ, ಅವರು ಟೆಸ್ಟ್​ನಲ್ಲಿ ಟೀಂ ಇಂಡಿಯಾವನ್ನು ನಂಬರ್ -1 ಸ್ಥಾನಕ್ಕೆ ಕೊಂಡೊಯ್ದರು. ಆದರೆ ಟೀಂ ಇಂಡಿಯಾ ವಿಶ್ವಕಪ್ ಗೆಲ್ಲುವಲ್ಲಿ ವಿಫಲವಾಯಿತು. ಜೊತೆಗೆ ಮೊದಲ ವಿಶ್ವ ಟೆಸ್ಟ್ ಚಾಂಪಿಯನ್ ಆದ ತಂಡದ ಕೋಚ್ ಎಂಬ ಗೌರವವನ್ನೂ ಸಹ ಶಾಸ್ತ್ರಿ ಕಳೆದುಕೊಂಡರು.

ಇದನ್ನೂ ಓದಿ
Hardik Pandya: ಏಕದಿನ ಕ್ರಿಕೆಟ್​ಗೆ ಹಾರ್ದಿಕ್ ಪಾಂಡ್ಯ ನಿವೃತ್ತಿ! ಶಾಕಿಂಗ್ ಹೇಳಿಕೆ ನೀಡಿದ ಮಾಜಿ ಕೋಚ್ ರವಿಶಾಸ್ತ್ರಿ
IND vs ENG: ಯುವರಾಜ್ ದಾಖಲೆ ಮುರಿದ ಹಾರ್ದಿಕ್; ಮೊದಲ ಟಿ20ಯಲ್ಲಿ ಇತಿಹಾಸ ಸೃಷ್ಟಿಸಿದ ಆಲ್ ರೌಂಡರ್
IND vs ENG: ಹಾರ್ದಿಕ್​ ಪಾಂಡ್ಯಗೆ ವಿಶ್ರಾಂತಿ; ದಿನೇಶ್ ಕಾರ್ತಿಕ್​ಗೆ ಟಿ20 ನಾಯಕತ್ವ! ದ್ರಾವಿಡ್ ಅಚ್ಚರಿ ಆಯ್ಕೆ

ಏಕದಿನ ಪಂದ್ಯಕ್ಕೆ ಹಾರ್ದಿಕ್ ನಿವೃತ್ತಿ!

ಕೆಲವು ದಿನಗಳ ಹಿಂದೆ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಏಕದಿನ ಪಂದ್ಯದ ವೇಳೆ ಭಾರತದ ಮಾಜಿ ಕೋಚ್ ಶಾಸ್ತ್ರಿ, ಹಾರ್ದಿಕ್ ಪಾಂಡ್ಯ ಏಕದಿನ ಕ್ರಿಕೆಟ್​ನಿಂದ ನಿವೃತ್ತರಾಗುತ್ತಾರೆ ಎಂಬ ಆಘಾತಕಾರಿ ಹೇಳಿಕೆ ನೀಡಿದ್ದರು. ಈ ಪಂದ್ಯದಲ್ಲಿ ಸ್ಕೈ ಸ್ಪೋರ್ಟ್ಸ್ ಪರವಾಗಿ ಪ್ರತಿಕ್ರಿಯಿಸಿದ ಶಾಸ್ತ್ರಿ, ODI ಸ್ವರೂಪದ ಭವಿಷ್ಯದ ಚರ್ಚೆಗೆ ಪ್ರತಿಕ್ರಿಯಿಸಿದರು ಮತ್ತು ಹಾರ್ದಿಕ್ 2023 ರ ವಿಶ್ವಕಪ್ ನಂತರ ODI ಕ್ರಿಕೆಟ್‌ನಿಂದ ನಿವೃತ್ತರಾಗಬಹುದು ಎಂದು ಹೇಳಿದರು. ಜೊತೆಗೆ ಯಾವ ಮಾದರಿಯಲ್ಲಿ ಆಡಬೇಕೆಂದು ಆಯ್ಕೆ ಮಾಡುವ ಆಟಗಾರರು ಈಗಾಗಲೇ ನಿಮ್ಮ ಮುಂದೆ ಇದ್ದಾರೆ. ಇದರಲ್ಲಿ ನೀವು ಹಾರ್ದಿಕ್ ಪಾಂಡ್ಯ ಅವರನ್ನೇ ತೆಗೆದುಕೊಳ್ಳಿ. ಅವರು ಟಿ 20 ಕ್ರಿಕೆಟ್ ಅನ್ನು ಹೆಚ್ಚು ಆಡಲು ಬಯಸುತ್ತಾರೆ. ಹೀಗಾಗಿ ಏಕದಿನ ಕ್ರಿಕೆಟ್​ಗೆ ಹಾರ್ದಿಕ್ ಗುಡ್​ಬೈ ಹೇಳಬಹುದು ಎಂದಿದ್ದರು.

ಗಾಯದಿಂದ ಮರಳಿದ ಪಾಂಡ್ಯ..

ಐಪಿಎಲ್‌ನ ಕೊನೆಯ ಸೀಸನ್​ನಲ್ಲಿ ಗಾಯದಿಂದ ಚೇತರಿಸಿಕೊಂಡ ನಂತರ ಹಾರ್ದಿಕ್ ಕ್ರಿಕೆಟ್​ಗೆ ಉತ್ತಮ ಪುನರಾಗಮನವನ್ನು ಮಾಡಿದರು. ಗುಜರಾತ್ ಟೈಟಾನ್ಸ್ ತಂಡದ ನಾಯಕರಾಗಿ ಆಯ್ಕೆಯಾದ ಪಾಂಡ್ಯ ತನ್ನ ಮೊದಲ ಸೀಸನ್​ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಚಾಂಪಿಯನ್ ಆಗಿ ಮಾಡಿದರು.

2018ರ ಏಷ್ಯಾಕಪ್‌ನಲ್ಲಿ ಗಾಯಗೊಂಡಿದ್ದ ಪಾಂಡ್ಯ

2018ರ ಏಷ್ಯಾಕಪ್‌ನಲ್ಲಿ ಹಾರ್ದಿಕ್ ಪಾಂಡ್ಯ ಬೆನ್ನುನೋವಿಗೆ ಒಳಗಾಗಿದ್ದರು. ಅದರ ನಂತರ, ಸತತ ಮೂರು ವರ್ಷಗಳ ಕಾಲ ಬೆನ್ನುನೋವಿನಿಂದ ಅವರು ತೊಂದರೆಗೊಳಗಾಗಿದ್ದರು. ಅಷ್ಟೇ ಅಲ್ಲ, ಚೇತರಿಸಿಕೊಳ್ಳಲು ಪಾಂಡ್ಯ 2021ರ ಟಿ20 ವಿಶ್ವಕಪ್ ಆಯ್ಕೆ ಪ್ರಕ್ರಿಯೆಯಿಂದ ಹೊರಗುಳಿದಿದ್ದರು.