ಗಂಡು ಮಗುವಿಗೆ ತಂದೆಯಾದ ಕೃನಾಲ್ ಪಾಂಡ್ಯ, ಚಿಕ್ಕಪ್ಪನಾಗಿ ಬಡ್ತಿ ಪಡೆದ ಹಾರ್ದಿಕ್; ಮಗುವಿನ ಹೆಸರೇನು ಗೊತ್ತಾ?

Krunal Pandya: ಪಾಂಡ್ಯ ಬ್ರದರ್ಸ್ ಮನೆಯಲ್ಲಿ ಮತ್ತೆ ಸಂತಸ ಮನೆ ಮಾಡಿದೆ. ಈ ಬಾರಿ ಕೃನಾಲ್ ಪಾಂಡ್ಯ ತಂದೆಯಾಗಿದ್ದಾರೆ. ಹಾರ್ದಿಕ್ ಪಾಂಡ್ಯ ಅವರಂತೆ ಅವರು ಕೂಡ ಮಗನಿಗೆ ತಂದೆಯಾಗಿದ್ದಾರೆ. ಕೃನಾಲ್ ಪಾಂಡ್ಯ ತಂದೆಯಾಗಿ ಬಡ್ತಿ ಪಡೆದರೆ ಹಾರ್ದಿಕ್ ಪಾಂಡ್ಯ ಕೂಡ ಬಡ್ತಿ ಪಡೆದಿದ್ದಾರೆ.

ಗಂಡು ಮಗುವಿಗೆ ತಂದೆಯಾದ ಕೃನಾಲ್ ಪಾಂಡ್ಯ, ಚಿಕ್ಕಪ್ಪನಾಗಿ ಬಡ್ತಿ ಪಡೆದ ಹಾರ್ದಿಕ್; ಮಗುವಿನ ಹೆಸರೇನು ಗೊತ್ತಾ?
ಮಗನೊಂದಿಗೆ ಕೃನಾಲ್ ದಂಪತಿಗಳು
TV9kannada Web Team

| Edited By: pruthvi Shankar

Jul 24, 2022 | 3:42 PM

ಪಾಂಡ್ಯ ಬ್ರದರ್ಸ್ ಮನೆಯಲ್ಲಿ ಮತ್ತೆ ಸಂತಸ ಮನೆ ಮಾಡಿದೆ. ಈ ಬಾರಿ ಕೃನಾಲ್ ಪಾಂಡ್ಯ (Krunal Pandya) ತಂದೆಯಾಗಿದ್ದಾರೆ. ಹಾರ್ದಿಕ್ ಪಾಂಡ್ಯ (Hardik Pandya) ಅವರಂತೆ ಅವರು ಕೂಡ ಮಗನಿಗೆ ತಂದೆಯಾಗಿದ್ದಾರೆ. ಕೃನಾಲ್ ಪಾಂಡ್ಯ ತಂದೆಯಾಗಿ ಬಡ್ತಿ ಪಡೆದರೆ ಹಾರ್ದಿಕ್ ಪಾಂಡ್ಯ ಕೂಡ ಬಡ್ತಿ ಪಡೆದಿದ್ದಾರೆ. ತಂದೆಯಾಗಿದ್ದ ಹಾರ್ದಿಕ್ ಈಗ ಚಿಕ್ಕಪ್ಪನೂ ಆಗಿದ್ದಾರೆ. ಕೃನಾಲ್ ಪಾಂಡ್ಯ ತಾವು ತಂದೆಯಾದ ಖುಷಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅವರು ತಮ್ಮ ಪತ್ನಿಯೊಂದಿಗೆ ತಮ್ಮ ಮಗ ಇರುವ ಎರಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಕೃನಾಲ್ ಪಾಂಡ್ಯ ತಂದೆಯಾಗುತ್ತಿರುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಅವರನ್ನು ಅಭಿನಂದಿಸುವವರ ದಂಡೇ ಹರಿದು ಬಂದಿದೆ. ಪಾಂಡ್ಯ ಬ್ರದರ್ಸ್ ಅಭಿಮಾನಿಗಳು ಮತ್ತು ಕೆಲವು ಕ್ರಿಕೆಟಿಗರು ಶುಭಾಷಯಗಳ ಮಳೆಗರೆದಿದ್ದಾರೆ. ಜಹೀರ್ ಖಾನ್ ಅವರ ಪತ್ನಿ, ಕೃನಾಲ್ ಮತ್ತು ಅವರ ಪತ್ನಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಸಹ ಆಟಗಾರರಿಂದ ಅಭಿನಂದನೆ

ಕೃನಾಲ್ ಪಾಂಡ್ಯ ಅವರನ್ನು ಅಭಿನಂದಿಸಿದವರಲ್ಲಿ, ಕ್ರಿಕೆಟ್ ಜಗತ್ತಿನ ಆರಂಭಿಕ ಹೆಸರುಗಳಲ್ಲಿ ಖಲೀಲ್ ಅಹ್ಮದ್ ಮತ್ತು ಮೊಹ್ಸಿನ್ ಖಾನ್ ಅವರ ಹೆಸರುಗಳು ಕಂಡುಬರುತ್ತವೆ. ಮೊಹ್ಸಿನ್ ಖಾನ್ ಮತ್ತು ಕೃನಾಲ್ ಪಾಂಡ್ಯ ಐಪಿಎಲ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರವಾಗಿ ಆಡುತ್ತಿದ್ದಾರೆ. ಮೊಹ್ಸಿನ್ ಖಾನ್ ತಮ್ಮ ಅಭಿನಂದನಾ ಸಂದೇಶದಲ್ಲಿ “ಮುಬಾರಕಾಬಾದ್ ಭಯ್ಯಾ.” ಎಂದು ಬರೆದುಕೊಂಡಿದ್ದಾರೆ.

ಮಗನ ಹೆಸರು ಕವೀರ್ ಕೃನಾಲ್ ಪಾಂಡ್ಯ

ಸೋಷಿಯಲ್ ಮೀಡಿಯಾದಲ್ಲಿ ಮಗ ಮತ್ತು ಪತ್ನಿ ಜೊತೆಗಿರುವ ಚಿತ್ರವನ್ನು ಪೋಸ್ಟ್ ಮಾಡಿರುವ ಕೃನಾಲ್ ಪಾಂಡ್ಯ ಮನೆಗೆ ಬಂದ ಪುಟ್ಟ ಅತಿಥಿಯ ಹೆಸರನ್ನೂ ಹೇಳಿದ್ದಾರೆ. ಅವರು ತಮ್ಮ ಮಗನಿಗೆ ಕವೀರ್ ಕೃನಾಲ್ ಪಾಂಡ್ಯ ಎಂಬ ಹೆಸರಿಟ್ಟಿದ್ದಾರೆ.

ಇನ್ನು ಕ್ರಿಕೆಟ್ ವಿಚಾರಕ್ಕೆ ಬಂದರೆ ಕೃನಾಲ್ ಪಾಂಡ್ಯ ಸದ್ಯ ಟೀಂ ಇಂಡಿಯಾದಿಂದ ದೂರ ಉಳಿದಿದ್ದಾರೆ. ಆದರೆ ಅವರ ಮಗನ ಚಿಕ್ಕಪ್ಪ ಅಂದರೆ ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾದಲ್ಲಿ ಅಬ್ಬರ ಶುರು ಮಾಡಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಿಂದ ಹಾರ್ದಿಕ್ ಪಾಂಡ್ಯಗೆ ವಿಶ್ರಾಂತಿ ನೀಡಲಾಗಿದೆ. ಆದರೆ ಅವರು 5 ಪಂದ್ಯಗಳ ಟಿ20 ಸರಣಿಯಲ್ಲಿ ತಂಡಕ್ಕೆ ಮರಳುವುದನ್ನು ಕಾಣಬಹುದು.

ಇದನ್ನೂ ಓದಿ

Follow us on

Related Stories

Most Read Stories

Click on your DTH Provider to Add TV9 Kannada