IPL 2022: ಕೃನಾಲ್ ಪಾಂಡ್ಯ ಜೊತೆಗಿನ ವಿವಾದದ ಬಗ್ಗೆ ಕೊನೆಗೂ ಮೌನ ಮುರಿದ ದೀಪಕ್ ಹೂಡಾ..!

IPL 2022: ಕೃನಾಲ್ ಪಾಂಡ್ಯ ಜೊತೆಗಿನ ವಿವಾದದ ಬಗ್ಗೆ ಕೊನೆಗೂ ಮೌನ ಮುರಿದ ದೀಪಕ್ ಹೂಡಾ..!
ದೀಪಕ್ ಹೂಡಾ, ಕೃನಾಲ್ ಪಾಂಡ್ಯ

IPL 2022: ಜನವರಿ 2021 ರಲ್ಲಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪ್ರಾರಂಭವಾಗುವ ಮೊದಲು ಶಿಬಿರದ ಸಮಯದಲ್ಲಿ ದೀಪಕ್ ಹೂಡಾ ಮತ್ತು ಕೃನಾಲ್ ಪಾಂಡ್ಯ ಜಗಳ ಮಾಡಿಕೊಂಡಿದ್ದರು. ಆ ವೇಳೆ ಕೃನಾಲ್ ಬರೋಡಾದ ನಾಯಕರಾಗಿದ್ದರೆ, ದೀಪಕ್ ತಂಡದ ಉಪನಾಯಕರಾಗಿದ್ದರು.

TV9kannada Web Team

| Edited By: pruthvi Shankar

Apr 07, 2022 | 5:40 PM

ದೀಪಕ್ ಹೂಡಾ (Deepak Hooda) ಐಪಿಎಲ್ 2022 (IPL 2022)ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ತಂಡದ ಭಾಗವಾಗಿದ್ದಾರೆ. ತಂಡದ ಮೊದಲ ಮೂರು ಪಂದ್ಯಗಳಲ್ಲಿ ಈ ಆಟಗಾರ ತನ್ನ ಆಟದಲ್ಲಿ ಛಾಪು ಮೂಡಿಸಿದ್ದಾರೆ. ದೀಪಕ್ ಹೂಡಾ ಮೂರು ಪಂದ್ಯಗಳಲ್ಲಿ ಎರಡು ಅರ್ಧಶತಕಗಳ ಸಹಾಯದಿಂದ 119 ರನ್ ಗಳಿಸಿದ್ದಾರೆ. ಮಧ್ಯಮ ಓವರ್‌ಗಳಲ್ಲಿ ತಂಡದ ಸ್ಕೋರ್ ಅನ್ನು ಮುಂದಕ್ಕೆ ತಳ್ಳುವ ಜವಾಬ್ದಾರಿ ಅವರ ಮೇಲಿದೆ. IPL 2022 ರಲ್ಲಿ ಕ್ರುನಾಲ್ ಪಾಂಡ್ಯ ಕೂಡ ಲಕ್ನೋ ಸೂಪರ್ ಜೈಂಟ್ಸ್ ಜೊತೆಗೆ ಇದ್ದಾರೆ. 2021 ರ ಜನವರಿಯಲ್ಲಿ ದೀಪಕ್ ಮತ್ತು ಕೃನಾಲ್ ನಡುವೆ ದೊಡ್ಡ ಫೈಟ್ ನಡೆದಿತ್ತು. ಈ ಕಾರಣದಿಂದಾಗಿ ದೀಪಕ್ ಹೂಡಾ ದೇಶೀಯ ಕ್ರಿಕೆಟ್‌ನಲ್ಲಿ ಬರೋಡಾ ಪರ ಆಡುವುದನ್ನು ನಿಲ್ಲಿಸಿದರು. ಆದರೆ ಈಗ ಇಬ್ಬರೂ ಆಟಗಾರರು ಭಿನ್ನಾಭಿಪ್ರಾಯಗಳನ್ನು ಬಿಟ್ಟು ಮುನ್ನಡೆಯುತ್ತಿದ್ದಾರೆ.

ದೈನಿಕ್ ಜಾಗರಣ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಈ ವಿಷಯದ ಬಗ್ಗೆ ಮಾತನಾಡಿದ ದೀಪಕ್ ಹೂಡಾ, ನಾನು ಮತ್ತು ಕೃನಾಲ್ ತಂಡದ ಭಾಗವಾಗಿದ್ದೇವೆ. ಇಬ್ಬರೂ ಒಂದೇ ಉದ್ದೇಶದಿಂದ ಆಡುತ್ತಿದ್ದೇವೆ. ಕೃನಾಲ್ ನನ್ನ ಸಹೋದರ, ಸಹೋದರರ ನಡುವೆ ಜಗಳ ಸರ್ವೆ ಸಾಮಾನ್ಯ ಎಂದು ತಮ್ಮ ನಡುವಿನ ಮನಸ್ತಾಪಕ್ಕೆ ಅಂತ್ಯ ಹಾಡಿದ್ದಾರೆ. ಐಪಿಎಲ್ 2022 ರ ಹರಾಜಿನಲ್ಲಿ ಲಕ್ನೋ ದೀಪಕ್ ಹೂಡಾ ಅವರನ್ನು 5.75 ಕೋಟಿ ರೂ. ಖರೀದಿಸಿದೆ. ಅದೇ ಸಮಯದಲ್ಲಿ ಕೃನಾಲ್​ಗೆ 8.25 ಕೋಟಿ ರೂ.ನೀಡಿದೆ. ಇಬ್ಬರೂ ಈ ತಂಡದ ಮಧ್ಯಮ ಕ್ರಮಾಂಕದ ಭಾಗವಾಗಿದ್ದಾರೆ.

ದೀಪಕ್-ಕೃನಾಲ್ ವಿವಾದ ಜನವರಿ 2021 ರಲ್ಲಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪ್ರಾರಂಭವಾಗುವ ಮೊದಲು ಶಿಬಿರದ ಸಮಯದಲ್ಲಿ ದೀಪಕ್ ಹೂಡಾ ಮತ್ತು ಕೃನಾಲ್ ಪಾಂಡ್ಯ ಜಗಳ ಮಾಡಿಕೊಂಡಿದ್ದರು. ಆ ವೇಳೆ ಕೃನಾಲ್ ಬರೋಡಾದ ನಾಯಕರಾಗಿದ್ದರೆ, ದೀಪಕ್ ತಂಡದ ಉಪನಾಯಕರಾಗಿದ್ದರು. ಈ ಇಬ್ಬರ ನಡುವಿನ ಜಗಳದ ನಂತರ ದೀಪಕ್ ತಂಡದ ಶಿಬಿರ ಮತ್ತು ಬಯೋ ಬಬಲ್ ತೊರೆದು ಮನೆಗೆ ವಾಪಸ್ಸಾಗಿದ್ದರು. ಈ ಇಬ್ಬರ ನಡುವಿನ ಜಗಳದ ಬಗ್ಗೆ ಮಾತನಾಡಿದ ದೀಪಕ್, ಕೃನಾಲ್ ನನ್ನನ್ನು ಸದಾ ನಿಂದಿಸುತ್ತಾರೆ ಎಂದು ಆರೋಪಿಸಿದ್ದರು.

ನಂತರ ದೀಪಕ್ ಹೂಡಾ ದೇಶೀಯ ಕ್ರಿಕೆಟ್‌ನಲ್ಲಿ ರಾಜಸ್ಥಾನ ಪರ ಆಡಲು ಶುರು ಮಾಡಿದ್ದರು. ಇದೇ ವೇಳೆ ಬರೋಡಾ ಕ್ರಿಕೆಟ್ ಸಂಸ್ಥೆ ದೀಪಕ್ ಹೂಡಾ ವಿರುದ್ಧ ಕ್ರಮ ಕೈಗೊಂಡು ಬಿಸಿಸಿಐಗೂ ದೂರು ನೀಡಿತ್ತು. ಆಗ ದೀಪಕ್ ಐಪಿಎಲ್​ನಲ್ಲಿ ಪಂಜಾಬ್ ಕಿಂಗ್ಸ್ ಪರ ಆಡುತ್ತಿದ್ದರು. ಈ ವೇಳೆ, ಪಂಜಾಬ್ ಕಿಂಗ್ಸ್ ಸಹ ಹೂಡ ವಿರುದ್ಧ ಕ್ರಮ ಕೈಗೊಳ್ಳುವಂತೆ ಬರೋಡಾ ಕ್ರಿಕೆಟ್ ಸಂಸ್ಥೆ ಕೇಳಿಕೊಂಡಿತ್ತು. ಆದರೆ ವಿಷಯದಲ್ಲಿ ಏನೂ ಆಗಲಿಲ್ಲ.

ಇದನ್ನೂ ಓದಿ:IPL 2022 PBKS vs GT Live Streaming: ಗುಜರಾತ್- ಪಂಜಾಬ್ ಮುಖಾಮುಖಿ; ಪಂದ್ಯದ ಬಗೆಗಿನ ಪೂರ್ಣ ಮಾಹಿತಿ

Follow us on

Related Stories

Most Read Stories

Click on your DTH Provider to Add TV9 Kannada