PBKS vs GT Playing XI IPL 2022: ಗುಜರಾತ್ಗೆ ಪಂಜಾಬ್ ಸವಾಲು; ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ XI
PBKS vs GT Playing XI IPL 2022: ಗುಜರಾತ್ ಟೈಟಾನ್ಸ್ ಐಪಿಎಲ್ 2022 ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಆಡುವ ಮೊದಲು ಎರಡು ಪಂದ್ಯಗಳನ್ನು ಆಡಿದೆ ಮತ್ತು ಎರಡನ್ನೂ ಗೆದ್ದಿದೆ.
ಒಂದು ಕಡೆ ಪಂಜಾಬ್ ಕಿಂಗ್ಸ್ ಮತ್ತು ಇನ್ನೊಂದು ಕಡೆ ಗುಜರಾತ್ ಟೈಟಾನ್ಸ್ (Gujarat Titans). ಒಂದು ಕಡೆ ಮಯಾಂಕ್ ಅಗರ್ವಾಲ್ (Mayank Agarwal) ಮತ್ತು ಇನ್ನೊಂದು ಕಡೆ ಹಾರ್ದಿಕ್ ಪಾಂಡ್ಯ (Hardik Pandya) ಇದ್ದಾರೆ. ಎರಡೂ ತಂಡಗಳು ತಮ್ಮದೇ ಆದ ವಿಶೇಷತೆಯನ್ನು ಹೊಂದಿವೆ. ಅಂತಹ ಪರಿಸ್ಥಿತಿಯಲ್ಲಿ, ಈ ಎರಡೂ ತಂಡಗಳು ಪರಸ್ಪರ ಕಾದಾಡಲು ಸಿದ್ದವಾಗಿವೆ. ತಂಡಗಳ ಸಾಮರ್ಥ್ಯ ಅದರ ಆಡುವ XI ನಿಂದ ತಿಳಿಯುತ್ತದೆ. ತಂಡದ ಬೌಲರ್‌ಗಳು, ಬ್ಯಾಟ್ಸ್‌ಮನ್‌ಗಳು ಎಂತಹ ಸಾಮರ್ಥ್ಯ ಹೊಂದಿದ್ದಾರೆ ಎಂಬುದು ಇದನ್ನು ನೋಡಿಯೇ ಗೊತ್ತಾಗುತ್ತದೆ. ಪಂಜಾಬ್ ಮತ್ತು ಗುಜರಾತ್ ಎರಡೂ ತಂಡಗಳು ಬಲಿಷ್ಠ ಆಟಗಾರರಿಂದ ತುಂಬಿವೆ. ಪರಸ್ಪರರ ವಿರುದ್ಧದ ಪಂದ್ಯದಲ್ಲಿ, ಆಡುವ XI ಆಯ್ಕೆಯಲ್ಲಿ ಎರಡೂ ತಂಡಗಳು ಯಾವ ರೀತಿಯ ತಂತ್ರಗಾರಿಗೆ ಮಾಡಲಿವೆ ಎಂಬುದೇ ಪ್ರಶ್ನೆಯಾಗಿದೆ.
ಪಂಜಾಬ್ ಅಥವಾ ಗುಜರಾತ್ ತಂಡದಲ್ಲಿ ಬದಲಾವಣೆ ಇಲ್ಲ? ಗುಜರಾತ್ ಟೈಟಾನ್ಸ್ ಐಪಿಎಲ್ 2022 ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಆಡುವ ಮೊದಲು ಎರಡು ಪಂದ್ಯಗಳನ್ನು ಆಡಿದೆ ಮತ್ತು ಎರಡನ್ನೂ ಗೆದ್ದಿದೆ. ಇದರರ್ಥ ಪಂದ್ಯಾವಳಿಯ ಅವರ ಮೂರನೇ ಪಂದ್ಯದಲ್ಲೂ, ಅವರು ತಮ್ಮ ಗೆಲುವಿನ ಸಂಯೋಜನೆಯನ್ನು ಮುಂದುವರೆಸುವ ನಿರೀಕ್ಷೆಯಿದೆ. ಪಂಜಾಬ್ ಕಿಂಗ್ಸ್‌ನ ವಿಷಯದಲ್ಲೂ ಇದೇ ಆಗಿದೆ. ಪಂಜಾಬ್ ಕಿಂಗ್ಸ್ ಇದುವರೆಗೆ ಆಡಿರುವ 3 ಪಂದ್ಯಗಳಲ್ಲಿ 2ರಲ್ಲಿ ಜಯ ಸಾಧಿಸಿದೆ. ಪಂಜಾಬ್ ತಂಡ ಸಿಎಸ್‌ಕೆ ವಿರುದ್ಧದ ಕೊನೆಯ ಪಂದ್ಯವನ್ನು ಗೆದ್ದ ರೀತಿಯನ್ನು ನೋಡಿದರೆ, ಅವರ ಆಡುವ XI ನಲ್ಲಿಯೂ ಬದಲಾವಣೆ ಮಾಡುವುದು ಕಷ್ಟ.
ಇದರರ್ಥ ಪಂಜಾಬ್ ಕಿಂಗ್ಸ್‌ಗೆ ಧವನ್ ಮತ್ತು ಮಯಾಂಕ್ ಜೋಡಿ ಇನ್ನಿಂಗ್ಸ್ ಪ್ರಾರಂಭಿಸಿದರೆ, ಮಧ್ಯಮ ಕ್ರಮಾಂಕದಲ್ಲಿ ಲಿವಿಂಗ್‌ಸ್ಟನ್, ಶಾರುಖ್ ಖಾನ್ ಮತ್ತು ಜಿತೇಶ್ ಶರ್ಮಾ ಅವರಂತಹ ಆಟಗಾರರು ಮಧ್ಯಮ ಕ್ರಮಾಂಕಕ್ಕೆ ಬಲ ತುಂಬಲಿದ್ದಾರೆ. ಶುಭಮನ್ ಗಿಲ್ ಮತ್ತು ಮ್ಯಾಥ್ಯೂ ವೇಡ್ ಗುಜರಾತ್ ಟೈಟಾನ್ಸ್‌ಗೆ ಇನ್ನಿಂಗ್ಸ್ ತೆರೆಯುವುದನ್ನು ಕಾಣಬಹುದು.
ಎರಡೂ ತಂಡಗಳ ಸಂಭಾವ್ಯ ಪ್ಲೇಯಿಂಗ್ XI ಪಂಜಾಬ್ ಕಿಂಗ್ಸ್: ಶಿಖರ್ ಧವನ್, ಮಯಾಂಕ್ ಅಗರ್ವಾಲ್, ಭಾನುಕಾ ರಾಜಪಕ್ಸೆ, ಜಿತೇಶ್ ಶರ್ಮಾ, ಲಿಯಾಮ್ ಲಿವಿಂಗ್ಸ್ಟನ್, ಶಾರುಖ್ ಖಾನ್, ಓಡಿಯನ್ ಸ್ಮಿತ್, ಕಗಿಸೊ ರಬಾಡ, ರಾಹುಲ್ ಚಹಾರ್, ವೈಭವ್ ಅರೋರಾ.
ಗುಜರಾತ್ ಟೈಟಾನ್ಸ್: ಶುಭಮನ್ ಗಿಲ್, ಮ್ಯಾಥ್ಯೂ ವೇಡ್, ವಿಜಯ್ ಶಂಕರ್, ಹಾರ್ದಿಕ್ ಪಾಂಡ್ಯ, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ಅಭಿನವ್ ಮನೋಹರ್, ರಶೀದ್ ಖಾನ್, ವರುಣ್ ಆರೋನ್, ಲಾಕಿ ಫರ್ಗುಸನ್, ಮೊಹಮ್ಮದ್ ಶಮಿ
ಇದನ್ನೂ ಓದಿ:IPL 2022: ಆರ್ಸಿಬಿ ಎದುರು ಸೋತ ರಾಜಸ್ಥಾನ್ಗೆ ಮತ್ತೊಂದು ಆಘಾತ; ಐಪಿಎಲ್ನಿಂದ ತಂಡದ ವೇಗದ ಬೌಲರ್ ಔಟ್..!