IPL 2022: ಆರ್​ಸಿಬಿ ಎದುರು ಸೋತ ರಾಜಸ್ಥಾನ್​ಗೆ ಮತ್ತೊಂದು ಆಘಾತ; ಐಪಿಎಲ್​ನಿಂದ ತಂಡದ ವೇಗದ ಬೌಲರ್ ಔಟ್..!

IPL 2022: ಆರ್​ಸಿಬಿ ಎದುರು ಸೋತ ರಾಜಸ್ಥಾನ್​ಗೆ ಮತ್ತೊಂದು ಆಘಾತ; ಐಪಿಎಲ್​ನಿಂದ ತಂಡದ ವೇಗದ ಬೌಲರ್ ಔಟ್..!
Rajasthan Royals

IPL 2022: ಕಳೆದ ಋತುವಿನವರೆಗೆ ಮುಂಬೈ ಇಂಡಿಯನ್ಸ್‌ನ ಭಾಗವಾಗಿದ್ದ 34 ವರ್ಷದ ಕೌಲ್ಟರ್ ನೈಲ್ ಅವರನ್ನು ಈ ವರ್ಷದ ಮೆಗಾ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್ ಮೂಲ ಬೆಲೆ 2 ಕೋಟಿ ರೂ.ಗೆ ಖರೀದಿಸಿತು.

TV9kannada Web Team

| Edited By: pruthvi Shankar

Apr 06, 2022 | 4:30 PM

ಐಪಿಎಲ್ 2022 ರಲ್ಲಿ ಪ್ರಬಲ ಆರಂಭವನ್ನು ಮಾಡಿದ ರಾಜಸ್ಥಾನ್ ರಾಯಲ್ಸ್ ಒಂದೇ ದಿನದಲ್ಲಿ ಎರಡು ಹಿನ್ನಡೆ ಅನುಭವಿಸಿದೆ. ಮಂಗಳವಾರ ಮಾರ್ಚ್ 5 ರಂದು, ರಾಜಸ್ಥಾನವು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೋಲನ್ನು ಅನುಭವಿಸಿತು, ಇದು ಈ ಋತುವಿನಲ್ಲಿ ತಂಡದ ಮೊದಲ ಸೋಲು. ಇದೀಗ ಮರುದಿನವೇ ತಂಡದ ಆಟಗಾರನೊಬ್ಬ ಗಾಯಗೊಂಡಿರುವುದು ಅವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಆಸ್ಟ್ರೇಲಿಯದ ಮಧ್ಯಮ ವೇಗಿ ನಾಥನ್ ಕೌಲ್ಟರ್-ನೈಲ್ ಗಾಯಗೊಂಡಿದ್ದಾರೆ ಎಂದು ರಾಜಸ್ಥಾನ್ ರಾಯಲ್ಸ್ ಮಾರ್ಚ್ 6 ಬುಧವಾರದಂದು ತಿಳಿಸಿದೆ. ಈ ಕಾರಣದಿಂದಾಗಿ ಅವರು ಸಂಪೂರ್ಣ ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ. ಕೌಲ್ಟರ್ ನೈಲ್ ಈಗ ತನ್ನ ದೇಶಕ್ಕೆ ಹಿಂದಿರುಗಲಿದ್ದು, ಕೌಲ್ಟರ್ ನೈಲ್ ಬದಲಿ ಯಾರು ಎಂಬುದನ್ನು ರಾಜಸ್ಥಾನ ಇನ್ನೂ ಘೋಷಣೆ ಮಾಡಿಲ್ಲ.

ರಾಜಸ್ಥಾನ್ ರಾಯಲ್ಸ್ ಬುಧವಾರ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದೆ. ಇದರಲ್ಲಿ ಹಿರಿಯ ತಂಡದ ಅಧಿಕಾರಿಯೊಬ್ಬರು ಕೌಲ್ಟರ್-ನೈಲ್ ಗಾಯದ ಕಾರಣ ಪಂದ್ಯಾವಳಿಯನ್ನು ತೊರೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ. ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿದ ಅವರು, ಆಸ್ಟ್ರೇಲಿಯಾದ ಬೌಲರ್ ಶೀಘ್ರವಾಗಿ ಚೇತರಿಸಿಕೊಳ್ಳಲಿ ಮತ್ತು ಮುಂಬರುವ ಋತುವಿನಲ್ಲಿ ತಂಡವನ್ನು ಸೇರಿಕೊಳ್ಳಲಿ ಎಂದು ಹಾರೈಸಿದರು. ಆದರೆ, ಕೌಲ್ಟರ್ ನೈಲ್‌ಗೆ ಯಾವಾಗ ಮತ್ತು ಯಾವ ರೀತಿಯ ಗಾಯವಾಗಿದೆ ಎಂದು ರಾಜಸ್ಥಾನದಿಂದ ಹೇಳಲಾಗಿಲ್ಲ.

2 ಕೋಟಿಗೆ ಖರೀದಿಸಿದೆ ಕಳೆದ ಋತುವಿನವರೆಗೆ ಮುಂಬೈ ಇಂಡಿಯನ್ಸ್‌ನ ಭಾಗವಾಗಿದ್ದ 34 ವರ್ಷದ ಕೌಲ್ಟರ್ ನೈಲ್ ಅವರನ್ನು ಈ ವರ್ಷದ ಮೆಗಾ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್ ಮೂಲ ಬೆಲೆ 2 ಕೋಟಿ ರೂ.ಗೆ ಖರೀದಿಸಿತು. ಹರಾಜಿನ ಮೊದಲ ಸುತ್ತಿನಲ್ಲಿ ಅವರು ಮಾರಾಟವಾಗಲಿಲ್ಲ. ನಂತರ ಎರಡನೇ ದಿನ ರಾಜಸ್ಥಾನ ಅಂತಿಮವಾಗಿ ಅವರನ್ನು ತಮ್ಮ ಪಾಳಯಕ್ಕೆ ಸೇರಿಸಿಕೊಂಡಿತು. ಕೌಲ್ಟರ್ ನೈಲ್ ಐಪಿಎಲ್ 2022 ರಲ್ಲಿ ರಾಜಸ್ಥಾನದ ಮೊದಲ ಪಂದ್ಯವನ್ನೂ ಆಡಿದ್ದರು. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಈ ಪಂದ್ಯದಲ್ಲಿ ಕೌಲ್ಟರ್-ನೈಲ್ 3 ಓವರ್‌ಗಳಲ್ಲಿ 48 ರನ್ ಗಳಿಸಲಾಯಿತು.

ಗಾಯದ ಕಾರಣದಿಂದ ಹೊರಗುಳಿದವರಿವರು ಕೌಲ್ಟರ್ ನೈಲ್ ಬದಲಿಗೆ ಮತ್ತೊಬ್ಬ ವಿದೇಶಿ ಆಟಗಾರನನ್ನು ಸೇರಿಸಿಕೊಳ್ಳುವುದನ್ನು ರಾಜಸ್ಥಾನ ಶೀಘ್ರದಲ್ಲೇ ಪ್ರಕಟಿಸುವ ನಿರೀಕ್ಷೆಯಿದೆ. ಕೌಲ್ಟರ್-ನೈಲ್ ಈ ಋತುವಿನಲ್ಲಿ ಗಾಯದ ಕಾರಣದಿಂದ ಹೊರಗುಳಿದ ಎರಡನೇ ಆಟಗಾರ. ಇದಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಯುವ ಆಟಗಾರ ಲವನೀತ್ ಸಿಸೋಡಿಯಾ ಕೂಡ ಕೆಲ ದಿನಗಳ ಹಿಂದೆ ಗಾಯಗೊಂಡಿದ್ದರು. ಅವರ ಜಾಗಕ್ಕೆ ಬೆಂಗಳೂರು ರಜತ್ ಪಾಟಿದಾರ್ ಅವರನ್ನು ಸೇರಿಸಿಕೊಂಡಿತ್ತು.

ಇದನ್ನೂ ಓದಿ:IPL 2022 Point Table: ಐಪಿಎಲ್ 2022 ಪಾಯಿಂಟ್ ಟೇಬಲ್ ಹೇಗಿದೆ?: ಪರ್ಪಲ್, ಆರೆಂಜ್ ಕ್ಯಾಪ್ ಯಾರ ಕೈಯಲ್ಲಿದೆ?

Follow us on

Related Stories

Most Read Stories

Click on your DTH Provider to Add TV9 Kannada