T20 World Cup: ಟಿ20 ವಿಶ್ವಕಪ್​ಗೆ ಬಲಿಷ್ಠ ವೆಸ್ಟ್ ಇಂಡೀಸ್ ತಂಡ ಪ್ರಕಟ; ರಸೆಲ್, ನರೇನ್​ಗೆ ಕೋಕ್..!

| Updated By: ಪೃಥ್ವಿಶಂಕರ

Updated on: Sep 14, 2022 | 10:05 PM

T20 World Cup: ಈ ಬಾರಿ ಸ್ಫೋಟಕ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ನಿಕೋಲಸ್ ಪೂರನ್ ಎರಡು ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್‌ ತಂಡದ ನಾಯಕತ್ವವಹಿಸಿಕೊಂಡಿದ್ದಾರೆ.

T20 World Cup: ಟಿ20 ವಿಶ್ವಕಪ್​ಗೆ ಬಲಿಷ್ಠ ವೆಸ್ಟ್ ಇಂಡೀಸ್ ತಂಡ ಪ್ರಕಟ; ರಸೆಲ್, ನರೇನ್​ಗೆ ಕೋಕ್..!
West Indies cricket team
Follow us on

2022ರ ಟಿ20 ವಿಶ್ವಕಪ್‌ಗೆ (T20 World Cup 2022) ಕ್ರಿಕೆಟ್ ಆಡುವ ಎಲ್ಲಾ ದೇಶಗಳು ಹಂತಹಂತವಾಗಿ ತಮ್ಮ ತಂಡಗಳನ್ನು ಪ್ರಕಟಿಸುತ್ತಿವೆ. ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ಭಾರತದಂತಹ ತಂಡಗಳ ನಂತರ ಇದೀಗ ಎರಡು ಬಾರಿಯ ಟಿ20 ವಿಶ್ವಕಪ್ ಚಾಂಪಿಯನ್ ವೆಸ್ಟ್ ಇಂಡೀಸ್ ( West Indies) ಕೂಡ ತನ್ನ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ನಿಕೋಲಸ್ ಪೂರನ್ ನಾಯಕತ್ವದಲ್ಲಿ, ಇತ್ತೀಚಿಗೆ ಭಾರತ ಮತ್ತು ಬಾಂಗ್ಲಾದೇಶದಂತಹ ತಂಡಗಳ ವಿರುದ್ಧದ ಸರಣಿಯಲ್ಲಿ ವಿಂಡೀಸ್ ತಂಡದ ಭಾಗವಾಗಿದ್ದ ಅದೇ ಹೆಚ್ಚಿನ ಆಟಗಾರರು ಸ್ಥಾನ ಪಡೆದಿದ್ದಾರೆ. ಈ ಆಯ್ಕೆಯಲ್ಲಿ ಸ್ಫೋಟಕ ಆಲ್‌ರೌಂಡರ್ ಆಂಡ್ರೆ ರಸೆಲ್ (Andre Russell) ಮತ್ತು ಸ್ಪಿನ್ನರ್ ಸುನಿಲ್ ನರೇನ್‌ಗೆ ತಂಡದಲ್ಲಿ ಅವಕಾಶ ನೀಡಲಾಗಿಲ್ಲ ಎಂಬುದೇ ಇನ್ನೊಂದು ಅಚ್ಚರಿಯ ಸಂಗತಿಯಾಗಿದೆ.

ಸರಿಯಾಗಿ ಒಂದು ವರ್ಷದ ನಂತರ ಎಡಗೈ ಓಪನರ್ ಎವಿನ್ ಲೂಯಿಸ್ ತಂಡಕ್ಕೆ ಮರಳಿದ್ದಾರೆ. ಲೆವಿಸ್ ತನ್ನ ಕೊನೆಯ ಪಂದ್ಯವನ್ನು ವೆಸ್ಟ್ ಇಂಡೀಸ್‌ ಪರ 2021 ರ T20 ವಿಶ್ವಕಪ್‌ನಲ್ಲಿಯೇ ಆಡಿದ್ದರು. ಅಂದಿನಿಂದ, ಫಿಟ್‌ನೆಸ್‌ನಂತಹ ಸಮಸ್ಯೆಗಳಿಂದ ಅವರು ತಂಡಕ್ಕೆ ಆಯ್ಕೆಯಾಗಲು ಸಾಧ್ಯವಾಗಿರಲಿಲ್ಲ. ವೆಸ್ಟ್ ಇಂಡೀಸ್ ತಂಡ ಟಿ20 ವಿಶ್ವಕಪ್ ಸೂಪರ್-12 ಸುತ್ತಿನಲ್ಲಿ ಇತರ ತಂಡಗಳ ನಡುವೆ ಸ್ಥಾನ ಪಡೆಯಲು ಅರ್ಹತಾ ಪಂದ್ಯಗಳನ್ನು ಆಡಬೇಕಿದೆ.

ರಸೆಲ್-ನರೇನ್‌ಗೆ ಅವಕಾಶವಿಲ್ಲ

ವಿಂಡೀಸ್ ಆಯ್ಕೆದಾರರು T20 ಕ್ರಿಕೆಟ್‌ನ ಇಬ್ಬರು ದೊಡ್ಡ ಸ್ಟಾರ್​ಗಳಾದ ಆಂಡ್ರೆ ರಸೆಲ್ ಮತ್ತು 2012 ಮತ್ತು 2014 ರಲ್ಲಿ ತಂಡವನ್ನು ವಿಶ್ವ ಚಾಂಪಿಯನ್ ಮಾಡಿದ ಸುನಿಲ್ ನರೇನ್ ಅವರನ್ನು ತಂಡಕ್ಕೆ ಆಯ್ಕೆ ಮಾಡಿಲ್ಲ. ಕಳೆದ ವರ್ಷದ T20 ವಿಶ್ವಕಪ್‌ನಿಂದ ವೆಸ್ಟ್ ಇಂಡೀಸ್‌ ಪರ ರಸೆಲ್ ಒಂದೇ ಒಂದು ಪಂದ್ಯವನ್ನು ಆಡಿಲ್ಲ. ಆದರೆ ನರೇನ್ 2019 ರಿಂದ ತಂಡದಲ್ಲಿ ಕಾಣಿಸಿಕೊಂಡಿಲ್ಲ. ಇತ್ತೀಚೆಗೆ, ವಿಂಡೀಸ್ ಕೋಚ್ ಫಿಲ್ ಸಿಮನ್ಸ್ ಇಬ್ಬರ ಲಭ್ಯತೆಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಅವರಿಬ್ಬರು ಟಿ20 ವಿಶ್ವಕಪ್​ ತಂಡಕ್ಕೆ ಆಯ್ಕೆಯಾಗುವುದು ಕಷ್ಟ ಎಂದಿದ್ದರು.

ಇವರಲ್ಲದೆ ಹಿರಿಯ ಸ್ಪಿನ್ನರ್ ಹೇಡನ್ ವಾಲ್ಷ್ ಜೂನಿಯರ್ ಮತ್ತು ಫ್ಯಾಬಿಯನ್ ಅಲೆನ್ ಕೂಡ ತಂಡಕ್ಕೆ ಆಯ್ಕೆಯಾಗಿಲ್ಲ. ತಂಡದಲ್ಲಿ ಇಬ್ಬರು ಹೊಸ ಮುಖಗಳಾಗಿ ಸ್ಪಿನ್ನರ್ ಯಾನಿಕ್ ಕ್ಯಾರಿಯಾ ಮತ್ತು ರಾಮನ್ ರೈಫರ್ ಅವರಿಗೆ ಅವಕಾಶ ನೀಡಲಾಗಿದೆ. ಇಬ್ಬರೂ ಆಟಗಾರರು ಈ ಮಾದರಿಯಲ್ಲಿ ವೆಸ್ಟ್ ಇಂಡೀಸ್‌ಗೆ ಇನ್ನೂ ಪದಾರ್ಪಣೆ ಮಾಡಿಲ್ಲ.

ವೆಸ್ಟ್ ಇಂಡೀಸ್ ತಂಡ

ನಿಕೋಲಸ್ ಪೂರನ್ (ನಾಯಕ), ರೋವ್ಮನ್ ಪೊವೆಲ್ (ಉಪನಾಯಕ), ಯಾನಿಕ್ ಕ್ಯಾರಿಯಾ, ಜಾನ್ಸನ್ ಚಾರ್ಲ್ಸ್, ಶೆಲ್ಡರ್ ಕಾಟ್ರೆಲ್, ಶಿಮ್ರಾನ್ ಹೆಟ್ಮೆಯರ್, ಜೇಸನ್ ಹೋಲ್ಡರ್, ಅಕಿಲ್ ಹೊಸೈನ್, ಅಲ್ಜಾರಿ ಜೋಸೆಫ್, ಬ್ರಾಂಡನ್ ಕಿಂಗ್, ಎವಿನ್ ಲೆವಿಸ್, ಕೈಲ್ ಮೆಯರ್ಸ್, ಓಬೆದ್ ಮೆಕಾಯ್, ಓಡಿಯನ್ ಸ್ಮಿತ್ ಮತ್ತು ರಾಮೆನ್ ರೀಫರ್

Published On - 9:41 pm, Wed, 14 September 22