ಐಪಿಎಲ್ 2022 (IPL 2022)ರಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಲಾಗುತ್ತಿದೆ. ವಿರಾಟ್ ಕೊಹ್ಲಿ (Virat Kohli) ಈ ಸೀಸನ್ನಲ್ಲಿ 7000 ರನ್ ಗಳಿಸಿ ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಒಂದೇ ತಂಡದ ಪರ ಆಡುವ ಮೂಲಕ ವಿರಾಟ್ ಈ ಸಾಧನೆ ಮಾಡಿದರು. ಹಿರಿಯ ಆಟಗಾರ ಶಿಖರ್ ಧವನ್ 6000 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಏತನ್ಮಧ್ಯೆ, ಸನ್‌ರೈಸರ್ಸ್ ವೇಗಿ ಉಮ್ರಾನ್ ಮಲಿಕ್ (Umran Malik) ಈ ಸೀಸನ್ನಲ್ಲಿ ಅತ್ಯಂತ ವೇಗದ ಎಸೆತಗಳನ್ನು ಎಸೆದು ದಾಖಲೆ ಬರೆದರು. 150 ಕಿಮೀ / ಗಂ ವೇಗದಲ್ಲಿ ಬೌಲಿಂಗ್ ಮಾಡುವ ಸಾಮಥ್ಯ್ರ ಹೊಂದಿರುವ ಮಲಿಕ್ ತಮ್ಮ ಪ್ರದರ್ಶನದಿಂದ ಟೀಂ ಇಂಡಿಯಾಕ್ಕೆ ಎಂಟ್ರಿಕೊಟ್ಟಿದ್ದಾರೆ. ಪಂಜಾಬ್ ಕಿಂಗ್ಸ್ ಆಟಗಾರ ಲಿವಿಂಗ್ಸ್ಟೋನ್ (Livingstone) (ಎಲ್ಲಾ ಆಟಗಾರರು ಒಟ್ಟಾಗಿ) ಈ ಆವೃತ್ತಿಯಲ್ಲಿ 1000 ನೇ ಸಿಕ್ಸರ್ ಬಾರಿಸಿದರು. 2022ರ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 1000ನೇ ಸಿಕ್ಸರ್ ದಾಖಲಾಗಿತ್ತು. ಅಲ್ಲದೆ ಲಿವಿಂಗ್‌ಸ್ಟೋನ್ ಈ ಋತುವಿನಲ್ಲಿ ಅತ್ಯಂತ ಉದ್ದದ ಸಿಕ್ಸರ್ ಬಾರಿಸಿದ್ದರು. ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಲಿವಿಂಗ್‌ಸ್ಟೋನ್ 117 ಮೀ. ಉದ್ದದ ಸಿಕ್ಸರ್ ಬಾರಿಸಿದ್ದರು.
ಪ್ರಸ್ತುತ ನಡೆಯುತ್ತಿರುವ ಐಪಿಎಲ್-2022ರಲ್ಲಿ 1000 ಸಿಕ್ಸರ್‌ಗಳು ದಾಖಲಾಗಿವೆ. ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ಟೂರ್ನಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದೆ. ರಾಜಸ್ಥಾನ ತಂಡ 116 ಸಿಕ್ಸರ್‌ಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಕೋಲ್ಕತ್ತಾ ನೈಟ್ ರೈಡರ್ಸ್ 113 ಸಿಕ್ಸರ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಪಂಜಾಬ್ ಕಿಂಗ್ಸ್ 110 ಸಿಕ್ಸರ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಡೆಲ್ಲಿ ಕ್ಯಾಪಿಟಲ್ಸ್ 106 ಸಿಕ್ಸರ್‌ಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್ 103 ಸಿಕ್ಸರ್‌ಗಳೊಂದಿಗೆ ಐದನೇ ಸ್ಥಾನದಲ್ಲಿದೆ. ಲಕ್ನೋ ಸೂಪರ್ ಜೈಂಟ್ಸ್ 101 ಸಿಕ್ಸರ್‌ಗಳೊಂದಿಗೆ 6ನೇ ಸ್ಥಾನದಲ್ಲಿದೆ. ಮುಂಬೈ (100), ಹೈದರಾಬಾದ್ (97) ಮತ್ತು ಆರ್‌ಸಿಬಿ (86) ನಂತರದ ಸ್ಥಾನದಲ್ಲಿವೆ. ಗುಜರಾತ್ ಟೈಟಾನ್ಸ್ 69 ಸಿಕ್ಸರ್‌ಗಳೊಂದಿಗೆ ಕೊನೆಯ ಸ್ಥಾನದಲ್ಲಿದೆ. ಜೋಸ್ ಬಟ್ಲರ್ ಈ ಋತುವಿನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದು, ಅವರು 629 ರನ್ ಗಳಿಸಿದ್ದಾರೆ.
ಇದನ್ನೂ ಓದಿ:IPL 2022: ಪ್ಲೇಆಫ್-ಫೈನಲ್‌ಗೆ ಹೊಸ ನಿಯಮ; ಹೀಗಾದರೆ ಪಂದ್ಯವನ್ನಾಡದೆ ಐಪಿಎಲ್ನಿಂದ ಹೊರಬಿಳಲಿದೆ ಆರ್‌ಸಿಬಿ!
ಯಾವ ತಂಡ ಎಷ್ಟು ಸಿಕ್ಸರ್‌ಗಳನ್ನು ಹೊಡೆದಿದೆ?
ರಾಜಸ್ಥಾನ್ ರಾಯಲ್ಸ್ (RR) -116
ಕೋಲ್ಕತ್ತಾ ನೈಟ್ ರೈಡರ್ಸ್ (KKR) -113
ಪಂಜಾಬ್ ಕಿಂಗ್ಸ್ (PBKS) -110
ದೆಹಲಿ ಕ್ಯಾಪಿಟಲ್ಸ್ (DC) -106
ಚೆನ್ನೈ ಸೂಪರ್ ಕಿಂಗ್ಸ್ (CSK) -103
ಲಕ್ನೋ ಸೂಪರ್ ಜೈಂಟ್ಸ್ (LSG) -101
ಮುಂಬೈ ಇಂಡಿಯನ್ಸ್ (MI) -100
ಸನ್‌ರೈಸರ್ಸ್ ಹೈದರಾಬಾದ್ (SRH) -97
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) -86
ಗುಜರಾತ್ ಟೈಟಾನ್ಸ್ (GT) -69