DC vs SRH IPL 2022 Head To Head: ಎರಡು ತಂಡಗಳಿಗೂ ಗೆಲುವು ಅಗತ್ಯ; ಇಬ್ಬರ ಮುಖಾಮುಖಿ ವರದಿ ಹೀಗಿದೆ

| Updated By: ಪೃಥ್ವಿಶಂಕರ

Updated on: May 04, 2022 | 4:05 PM

DC vs SRH IPL 2022 Head To Head: ಈ ಎರಡು ತಂಡಗಳ ನಡುವೆ ಮುಖಾಮುಖಿ ಅಂಕಿ ಅಂಶಗಳನ್ನು ಗಮನಿಸಿದರೆ, ಹೈದರಾಬಾದ್ ತಂಡ ಇದರಲ್ಲಿ ಮುಂದಿದೆ. ಈ ಎರಡೂ ತಂಡಗಳು ಇಲ್ಲಿಯವರೆಗೆ ಒಟ್ಟು 20 ಪಂದ್ಯಗಳನ್ನು ಆಡಿದ್ದು, ಈ ಪೈಕಿ ಹೈದರಾಬಾದ್ 11 ರಲ್ಲಿ ಜಯ ಸಾಧಿಸಿದೆ.

DC vs SRH IPL 2022 Head To Head: ಎರಡು ತಂಡಗಳಿಗೂ ಗೆಲುವು ಅಗತ್ಯ; ಇಬ್ಬರ ಮುಖಾಮುಖಿ ವರದಿ ಹೀಗಿದೆ
DC vs SRH
Follow us on

ಐಪಿಎಲ್-2022 (IPL 2022)ರ ಆರಂಭಿಕ ಪಂದ್ಯಗಳಲ್ಲಿ ಸನ್‌ರೈಸರ್ಸ್ ಹೈದರಾಬಾದ್ (Sunrisers Hyderabad) ಕಳಪೆ ಪ್ರದರ್ಶನ ನೀಡಿತ್ತು. ಸತತ ಎರಡು ಪಂದ್ಯಗಳಲ್ಲಿ ಸೋತ ನಂತರ ಕೇನ್ ವಿಲಿಯಮ್ಸನ್ (Kane Williamson) ನಾಯಕತ್ವದ ಈ ತಂಡವು ಗೆಲುವಿನ ಟ್ರ್ಯಾಕ್‌ಗೆ ಮರಳಿತು ಮತ್ತು ಸತತ ಐದು ಪಂದ್ಯಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಆದರೆ ಕಳೆದ ಎರಡು ಪಂದ್ಯಗಳಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಗೆಲ್ಲಲು ಸಾಧ್ಯವಾಗಲಿಲ್ಲ. ಮೊದಲು ಗುಜರಾತ್ ಟೈಟಾನ್ಸ್ ಅವರನ್ನು ಐದು ವಿಕೆಟ್‌ಗಳಿಂದ ಸೋಲಿಸಿತು. ನಂತರ ಚೆನ್ನೈ ಸೂಪರ್ ಕಿಂಗ್ಸ್ ಅವರನ್ನು ಸೋಲಿಸಿತು. ಇದೀಗ ಡೆಲ್ಲಿ ಕ್ಯಾಪಿಟಲ್ಸ್ ಮುಂದಿನ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಎದುರು ನಿಂತಿದೆ. ಈ ಎರಡು ತಂಡಗಳು ಮುಂಬೈನ ಸಿಸಿಐ ಬ್ರಬೋರ್ನ್ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಲಿವೆ. ಡೆಲ್ಲಿ ಕ್ಯಾಪಿಟಲ್ಸ್‌ಗೂ ಸಹ ಈ ಸೀಸನ್ ಅಷ್ಟೊಂದು ಉತ್ತಮವಾಗಿಲ್ಲ . ಈ ಋತುವಿನಲ್ಲಿ ಪ್ಲೇಆಫ್‌ಗೆ ಹೋಗುವ ಅವಕಾಶವನ್ನು ಜೀವಂತವಾಗಿಡಲು ಡೆಲ್ಲಿ ಈ ಪಂದ್ಯವನ್ನು ಗೆಲ್ಲಬೇಕಾಗಿದೆ.

ಪಾಯಿಂಟ್ ಪಟ್ಟಿಯಲ್ಲಿ ಹೈದರಾಬಾದ್‌ಗಿಂತ ಡೆಲ್ಲಿ ಸ್ಥಾನ ಉತ್ತಮವಾಗಿಲ್ಲ. ಒಂಬತ್ತು ಪಂದ್ಯಗಳಿಂದ ಐದು ಸೋಲು ಮತ್ತು ನಾಲ್ಕು ಗೆಲುವಿನೊಂದಿಗೆ 10 ಅಂಕಗಳೊಂದಿಗೆ ಏಳನೇ ಸ್ಥಾನದಲ್ಲಿದೆ. ಹೈದರಾಬಾದ್ ಅವರಿಗಿಂತ ಮೂರು ಸ್ಥಾನ ಮುಂದಿದೆ. ಈ ತಂಡವು ನಾಲ್ಕನೇ ಸ್ಥಾನದಲ್ಲಿದ್ದು, ಐದು ಪಂದ್ಯಗಳನ್ನು ಗೆದ್ದು ನಾಲ್ಕು ಸೋಲುಗಳನ್ನು ಎದುರಿಸಿದೆ. ಡೆಲ್ಲಿ ಎಂಟು ಪಾಯಿಂಟ್ಸ್ ಮತ್ತು ಹೈದರಾಬಾದ್ 10 ಪಾಯಿಂಟ್ಸ್ ಹೊಂದಿದೆ.

ಮುಖಾಮುಖಿ ಅಂಕಿಅಂಶ ಹೀಗಿದೆ
ಈ ಋತುವಿನಲ್ಲಿ ಈ ಎರಡು ತಂಡಗಳು ಮೊದಲ ಬಾರಿಗೆ ಮುಖಾಮುಖಿಯಾಗುತ್ತಿವೆ. ಈ ಎರಡು ತಂಡಗಳ ನಡುವೆ ಮುಖಾಮುಖಿ ಅಂಕಿ ಅಂಶಗಳನ್ನು ಗಮನಿಸಿದರೆ, ಹೈದರಾಬಾದ್ ತಂಡ ಇದರಲ್ಲಿ ಮುಂದಿದೆ. ಈ ಎರಡೂ ತಂಡಗಳು ಇಲ್ಲಿಯವರೆಗೆ ಒಟ್ಟು 20 ಪಂದ್ಯಗಳನ್ನು ಆಡಿದ್ದು, ಈ ಪೈಕಿ ಹೈದರಾಬಾದ್ 11 ರಲ್ಲಿ ಜಯ ಸಾಧಿಸಿದೆ. ಅಂದರೆ, ಎರಡು ಪಂದ್ಯಗಳ ಅಂತರದಿಂದ ಹೈದರಾಬಾದ್ ತಂಡ ಮುಂದಿದೆ. ಆದರೆ, ಸದ್ಯದ ಫಾರ್ಮ್ ನೋಡಿದರೆ ಹೈದರಾಬಾದ್ ತಂಡ ಡೆಲ್ಲಿಗಿಂತ ಸ್ವಲ್ಪ ಉತ್ತಮವಾಗಿದೆ.

ಇದನ್ನೂ ಓದಿ
IPL 2022: ಅಹಮದಾಬಾದ್​ನಲ್ಲಿ ಫೈನಲ್! ಪ್ಲೇಆಫ್, ಫೈನಲ್‌ ವೇಳಾಪಟ್ಟಿ, ಸ್ಥಳ ಅಂತಿಮಗೊಳಿಸಿದ ಬಿಸಿಸಿಐ
IPL 2022 RCB vs CSK Live Streaming: ಚೆನ್ನೈ-ಆರ್​ಸಿಬಿ ಮುಖಾಮುಖಿ; ಪಂದ್ಯದ ಬಗ್ಗೆ ಇಲ್ಲಿದೆ ಮಾಹಿತಿ

ಕಳೆದ 5 ಪಂದ್ಯಗಳ ಅಂಕಿ ಅಂಶಗಳು ಹೀಗಿವೆ
ಒಟ್ಟಾರೆ ಪಂದ್ಯಗಳಲ್ಲಿ ಹೈದರಾಬಾದ್ ತಂಡ ಭಾರೀ ಪ್ರದರ್ಶನ ಕಾಣುತ್ತಿದ್ದು, ಕಳೆದ ಐದು ಪಂದ್ಯಗಳ ಅಂಕಿ-ಅಂಶಗಳನ್ನು ಗಮನಿಸಿದರೆ ಇಲ್ಲಿ ಡೆಲ್ಲಿ ತಂಡವೇ ಮೇಲುಗೈ ಸಾಧಿಸುತ್ತಿದೆ. ಕಳೆದ ಐದು ಪಂದ್ಯಗಳಲ್ಲಿ ದೆಹಲಿ ಮೂರರಲ್ಲಿ ಗೆದ್ದಿದ್ದರೆ, ಹೈದರಾಬಾದ್ ಎರಡರಲ್ಲಿ ಗೆದ್ದಿದೆ. ಸೆಪ್ಟೆಂಬರ್ 22, 2021 ರಂದು ನಡೆದ ಪಂದ್ಯದಲ್ಲಿ ಡೆಲ್ಲಿ ಎಂಟು ವಿಕೆಟ್‌ಗಳಿಂದ ಗೆದ್ದಿತು. 25 ಏಪ್ರಿಲ್ 2021 ರಂದು ಆಡಿದ ಪಂದ್ಯದಲ್ಲೂ ಕೂಡ ಡೆಲ್ಲಿ ಜಯಗಳಿಸಿತು. ದೆಹಲಿಯು 8 ನವೆಂಬರ್ 2021 ರಂದು ಹೈದರಾಬಾದ್ ಅನ್ನು ಸೋಲಿಸಿತು. 27 ಅಕ್ಟೋಬರ್ 2020 ಮತ್ತು 29 ಸೆಪ್ಟೆಂಬರ್ 2020 ರಂದು ನಡೆದ ಪಂದ್ಯವನ್ನು ಸನ್‌ರೈಸರ್ಸ್ ಗೆದ್ದಿದೆ.