10 ವರ್ಷಗಳಲ್ಲಿ 8 ಪಂದ್ಯ, ಟಿ20 ವಿಶ್ವಕಪ್​ಗೂ ಇಲ್ಲ: ಉಮೇಶ್ ಯಾದವ್​ಗೆ ಚಾನ್ಸ್ ನೀಡಿದ್ದು ಯಾಕೆ?

| Updated By: ಝಾಹಿರ್ ಯೂಸುಫ್

Updated on: Sep 21, 2022 | 7:07 PM

Team India: ಉಮೇಶ್ ಯಾದವ್ ಇದೀಗ ಮತ್ತೆ ಭಾರತ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಕೊರೋನಾ ಸೋಂಕಿಗೆ ಒಳಗಾಗಿರುವ ಮೊಹಮ್ಮದ್ ಶಮಿ ಅವರ ಅನುಪಸ್ಥಿತಿಯಲ್ಲಿ ಉಮೇಶ್ ಯಾದವ್​ಗೆ ಸ್ಥಾನ ನೀಡಲಾಗಿದೆ.

10 ವರ್ಷಗಳಲ್ಲಿ 8 ಪಂದ್ಯ, ಟಿ20 ವಿಶ್ವಕಪ್​ಗೂ ಇಲ್ಲ: ಉಮೇಶ್ ಯಾದವ್​ಗೆ ಚಾನ್ಸ್ ನೀಡಿದ್ದು ಯಾಕೆ?
Umesh Yadav
Follow us on

ಟಿ20 ವಿಶ್ವಕಪ್​ಗೆ (T20 World Cup 2022) ಟೀಮ್ ಇಂಡಿಯಾವನ್ನು (Team India) ಘೋಷಿಸಲಾಗಿದೆ. 15 ಸದಸ್ಯರ ಈ ಬಳಗದಲ್ಲಿರುವ ಬಹುತೇಕ ಆಟಗಾರರು ಇದೀಗ ಆಸ್ಟ್ರೇಲಿಯಾ ವಿರುದ್ಧ ಸರಣಿ ಆಡುತ್ತಿದ್ದಾರೆ. ಇನ್ನು ಮೀಸಲು ಆಟಗಾರರಾಗಿ ನಾಲ್ವರು ಆಯ್ಕೆಯಾಗಿದ್ದು, ಅವರಲ್ಲಿ ಕೆಲ ಆಟಗಾರರು ಆಸೀಸ್​ ವಿರುದ್ಧದ ಸರಣಿಯ ಭಾಗವಾಗಿದ್ದಾರೆ. ಮುಂಬರುವ ಟಿ20 ವಿಶ್ವಕಪ್​ ಹಿನ್ನೆಲೆಯಲ್ಲಿ ಈ ಸರಣಿಯು ಟೀಮ್ ಇಂಡಿಯಾ ಪಾಲಿಗೆ ತುಂಬಾ ಮಹತ್ವದ್ದು ಎಂಬುದು ಕೂಡ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್​ಗೆ ಗೊತ್ತಿದೆ. ಇದಾಗ್ಯೂ ಟೀಮ್ ಇಂಡಿಯಾದಲ್ಲಿ ಉಮೇಶ್ ಯಾದವ್​ ಅವರಿಗೆ ಮಣೆಹಾಕಿರುವುದು ಯಾಕೆ ಎಂಬುದು ಇಲ್ಲಿ ದೊಡ್ಡ ಪ್ರಶ್ನೆ.

ಏಕೆಂದರೆ ಉಮೇಶ್ ಯಾದವ್ ಕಳೆದ 10 ವರ್ಷಗಳಲ್ಲಿ ಟೀಮ್ ಇಂಡಿಯಾ ಪರ ಆಡಿದ್ದು ಕೇವಲ 8 ಟಿ20 ಪಂದ್ಯಗಳನ್ನು ಮಾತ್ರ. ಅಂದರೆ 2012 ರಲ್ಲಿ ಭಾರತದ ಪರ ಟಿ20 ಕ್ರಿಕೆಟ್​ನಲ್ಲಿ ಪದಾರ್ಪಣೆ ಮಾಡಿದ್ದ ಉಮೇಶ್ ಯಾದವ್ ಇದೀಗ ಮತ್ತೆ ಭಾರತ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಕೊರೋನಾ ಸೋಂಕಿಗೆ ಒಳಗಾಗಿರುವ ಮೊಹಮ್ಮದ್ ಶಮಿ ಅವರ ಅನುಪಸ್ಥಿತಿಯಲ್ಲಿ ಉಮೇಶ್ ಯಾದವ್​ಗೆ ಸ್ಥಾನ ನೀಡಲಾಗಿದೆ. ಅಂದರೆ ಶಮಿಯ ಕ್ವಾರಂಟೈನ್ ಮುಗಿದರೆ ಅವರು ತಂಡಕ್ಕೆ ವಾಪಾಸಾಗಲಿದ್ದಾರೆ.

ಆದರೆ ಟಿ20 ವಿಶ್ವಕಪ್​ಗೆ ಆಯ್ಕೆಯಾಗದ ಅಥವಾ ಮೀಸಲು ಆಟಗಾರನಾಗಿ ತಂಡದಲ್ಲಿ ಸ್ಥಾನ ಪಡೆಯದ ಉಮೇಶ್ ಯಾದವ್​ಗೆ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಯಾಕಾಗಿ ಅವಕಾಶ ನೀಡಲಾಗಿದೆ ಎಂಬುದೇ ಇಲ್ಲಿ ಪ್ರಶ್ನೆ. ಏಕೆಂದರೆ ಆಸ್ಟ್ರೇಲಿಯಾ ಹಾಗೂ ಸೌತ್ ಆಫ್ರಿಕಾ ವಿರುದ್ಧ ಸರಣಿ ಆಡಲಿರುವ ತಂಡವೇ ಟಿ20 ವಿಶ್ವಕಪ್ ಆಡಲಿದೆ. ಇವರಲ್ಲಿ ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ಮೊಹಮ್ಮದ್ ಶಮಿ ಹಾಗೂ ದೀಪಕ್ ಚಹರ್ ಮೀಸಲು ಆಟಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ
Team India New Jersey: 25 ಕ್ಕೂ ಹೆಚ್ಚು ಬಾರಿ ಜೆರ್ಸಿ ಬದಲಿಸಿದ ಟೀಮ್ ಇಂಡಿಯಾ: ಇಲ್ಲಿದೆ ಫೋಟೋಸ್
RCB ತಂಡದ ಮೊದಲ ಪ್ಲೇಯಿಂಗ್ ಇಲೆವೆನ್​ನಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?
Sanju Samson: ಧೋನಿ, ದ್ರಾವಿಡ್​ಗೂ ಸಾಧ್ಯವಾಗದ ದಾಖಲೆ ನಿರ್ಮಿಸಿದ ಸಂಜು ಸ್ಯಾಮ್ಸನ್
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ಅಂದರೆ 15 ಸದಸ್ಯರ ಬಳಗದಿಂದ ಯಾರಾದರೂ ಹೊರಗುಳಿದರೆ ಮೀಸಲು ಪಟ್ಟಿಯಲ್ಲಿರುವ ಆಟಗಾರರಿಗೆ ಚಾನ್ಸ್ ಸಿಗಲಿದೆ. ಆದರೆ ಟಿ20 ವಿಶ್ವಕಪ್ ತಂಡದಲ್ಲಿ ಇಲ್ಲದ, ಮೀಸಲು ಆಟಗಾರರ ಪಟ್ಟಿಯಲ್ಲೂ ಇರದ ಉಮೇಶ್ ಯಾದವ್​ಗೆ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದ ಪ್ಲೇಯಿಂಗ್ ಇಲೆವೆನ್​ನಲ್ಲಿ ಅವಕಾಶ ನೀಡಿರುವುದೇ ಅಚ್ಚರಿ.

ಏಕೆಂದರೆ ತಂಡದಲ್ಲಿ ವೇಗಿಯಾಗಿ ದೀಪಕ್ ಚಹರ್ ಇದ್ದಾರೆ. ಚಹರ್ ಟಿ20 ವಿಶ್ವಕಪ್​ ಮೀಸಲು ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ವೇಗಿ. ಹೀಗಾಗಿ ಇಲ್ಲಿ ಉಮೇಶ್ ಯಾದವ್​ಗಿಂತ ದೀಪಕ್ ಚಹರ್​ಗೆ ಅವಕಾಶ ಸಿಗಬೇಕಿತ್ತು. ಆದರೆ ಕಳೆದ 10 ವರ್ಷಗಳಲ್ಲಿ ಟೀಮ್ ಇಂಡಿಯಾ ಪರ ಕೇವಲ 8 ಟಿ20 ಪಂದ್ಯವಾಡಿರುವ ಉಮೇಶ್ ಯಾದವ್​ಗೆ ಮಣೆಹಾಕಲಾಗಿದೆ. ಇನ್ನು 8 ಪಂದ್ಯಗಳಿಂದ ಇದುವರೆಗೆ ಪಡೆದಿರುವುದು ಕೇವಲ 11 ವಿಕೆಟ್​ಗಳನ್ನು ಮಾತ್ರ.

ಒಂದು ವೇಳೆ ಉಮೇಶ್ ಯಾದವ್​ ಅವರ ಇತ್ತೀಚಿನ ಪ್ರದರ್ಶನವನ್ನು ಪರಿಗಣಿಸಿ ಅವಕಾಶ ನೀಡಲಾಗಿದೆ ಎಂದು ಹೇಳುವುದಾದರೆ, ಅವರನ್ನು ಏಷ್ಯಾಕಪ್​ ತಂಡದ ಸದಸ್ಯನಾಗಿ ಅಥವಾ ಮೀಸಲು ಆಟಗಾರನಾಗಿ ಆಯ್ಕೆ ಮಾಡಬೇಕಿತ್ತಲ್ಲವೇ ಎಂಬ ಪ್ರಶ್ನೆಯೊಂದು ಹುಟ್ಟಿಕೊಳ್ಳುತ್ತವೆ. ಆದರೆ ಇದೀಗ ಶಮಿಯ ಬದಲಿ ಆಟಗಾರನಾಗಿ ತಂಡದಲ್ಲಿ ಸ್ಥಾನ ಪಡೆದ ಉಮೇಶ್ ಯಾದವ್​ಗೆ ಕಂಬ್ಯಾಕ್ ಬೆನ್ನಲ್ಲೇ ಪ್ಲೇಯಿಂಗ್ ಇಲೆವೆನ್​ನಲ್ಲಿ ಸ್ಥಾನ ನೀಡಿರುವುದು ಹೊಸ ಚರ್ಚೆಗೆ ಕಾರಣವಾಗಿದೆ.

ಅದರಲ್ಲೂ ಟಿ20 ವಿಶ್ವಕಪ್​ ತಂಡಕ್ಕೆ ಆಯ್ಕೆಯಾಗದ ಆಟಗಾರನಿಗೆ ಪ್ಲೇಯಿಂಗ್ ಇಲೆವೆನ್​ನಲ್ಲಿ ಅವಕಾಶ ನೀಡಿರುವುದೇ ಅಚ್ಚರಿ. ಇತ್ತ ಉಮೇಶ್ ಯಾದವ್ ಕಣಕ್ಕಿಳಿದ ಪರಿಣಾಮ ದೀಪಕ್ ಚಹರ್ ಅವಕಾಶ ವಂಚಿತರಾಗಿದ್ದರು. ಇಲ್ಲಿ ಚಹರ್ ಟಿ20 ವಿಶ್ವಕಪ್​ ಮೀಸಲು ಆಟಗಾರರ ಪಟ್ಟಿಯಲ್ಲಿರುವ ಕಾರಣ ಅವರಿಗೆ ಅವಕಾಶ ದೊರೆಯಬೇಕಿತ್ತು. ಇದಾಗ್ಯೂ ಟೀಮ್ ಇಂಡಿಯಾ ಉಮೇಶ್ ಯಾದವ್​ ಅವರನ್ನು ಯಾಕಾಗಿ ಕಣಕ್ಕಿಳಿಸಿತ್ತು ಎಂಬುದೇ ದೊಡ್ಡ ಪ್ರಶ್ನೆ.

ಒಟ್ಟಿನಲ್ಲಿ ಟಿ20 ವಿಶ್ವಕಪ್​ಗೂ ಮುನ್ನ ಟೀಮ್ ಇಂಡಿಯಾ ಆಸ್ಟ್ರೇಲಿಯಾ (3 ಪಂದ್ಯ) ಹಾಗೂ ಸೌತ್ ಆಫ್ರಿಕಾ (3 ಪಂದ್ಯಗಳು) ವಿರುದ್ಧ ಒಟ್ಟು 6 ಟಿ20 ಪಂದ್ಯಗಳನ್ನಾಡಲಿದೆ. ಈ 6 ಪಂದ್ಯಗಳು ಚುಟುಕು ವಿಶ್ವಕಪ್​ಗೂ ಮುನ್ನ ಟೀಮ್ ಇಂಡಿಯಾ ಪಾಲಿಗೆ ಪೂರ್ವಭ್ಯಾಸ ಪಂದ್ಯಗಳಾಗಿವೆ. ಇದಾಗ್ಯೂ  ಟಿ20 ವಿಶ್ವಕಪ್​ ತಂಡದಲ್ಲಿ ಸ್ಥಾನ ಪಡೆಯದ ಆಟಗಾರನಿಗೆ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್​ನಲ್ಲಿ ಅವಕಾಶ ನೀಡಿರುವುದೇ ದೊಡ್ಡ ಅಚ್ಚರಿ.

ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಭಾರತ ತಂಡ:

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಹಾಲ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್ , ಉಮೇಶ್ ಯಾದವ್, ಹರ್ಷಲ್ ಪಟೇಲ್, ದೀಪಕ್ ಚಹರ್, ಜಸ್ಪ್ರೀತ್ ಬುಮ್ರಾ.

 

 

 

Published On - 6:10 pm, Wed, 21 September 22