ನ್ಯೂಜಿಲೆಂಡ್ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳನ್ನು ಸೋತಿರುವ ಟೀಂ ಇಂಡಿಯಾ 12 ವರ್ಷಗಳ ಬಳಿಕ ತವರಿನಲ್ಲಿ ಟೆಸ್ಟ್ ಸರಣಿಯನ್ನು ಕಳೆದುಕೊಂಡಿದೆ. ತಂಡದ ಈ ಕಳಪೆ ಸಾಧನೆಗೆ ಬ್ಯಾಟಿಂಗ್ ವೈಫಲ್ಯವೇ ಪ್ರಮುಖ ಕಾರಣ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಅದರಲ್ಲೂ ಅನುಭವಿಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಕಳಪೆ ಬ್ಯಾಟಿಂಗ್ ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು. ಆಡಿರುವ ಎರಡು ಟೆಸ್ಟ್ಗಳಲ್ಲಿ ಈ ಇಬ್ಬರು ಆಟಗಾರರು ಒಂದೊಂದು ಇನ್ನಿಂಗ್ಸ್‌ನಲ್ಲಿ ಶೂನ್ಯಕ್ಕೆ ಔಟಾದರೆ, ಉಳಿದ ಇನ್ನಿಂಗ್ಸ್ಗಳಲ್ಲಿ ರನ್ ಕಲೆಹಾಕಿದ್ದು ಕೂಡ ಅಲ್ಪಸ್ವಲ್ಪ. ಅನುಭವಿಗಳಾಗಿ ತಂಡವನ್ನು ಮುನ್ನಡೆಸಬೇಕಿದ್ದ ಈ ಇಬ್ಬರು ಬೇಗನೇ ಪೆವಿಲಿಯನ್ ಸೇರಿಕೊಂಡಿದ್ದು, ಇತರ ಆಟಗಾರರ ಪ್ರದರ್ಶನದ ಮೇಲೆ ಪರಿಣಾಮ ಬೀರಿತು. ಹೀಗಾಗಿ ಈ ಇಬ್ಬರ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದು, ರೋಹಿತ್ ಹಾಗೂ ಕೊಹ್ಲಿ ಫಾರ್ಮ್ ಕಂಡುಕೊಳ್ಳಲು ದೇಶೀ ಕ್ರಿಕೆಟ್ ಆಡಲಿ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಬೆಂಗಳೂರು ಮತ್ತು ಪುಣೆ ಎರಡೂ ಟೆಸ್ಟ್ ಪಂದ್ಯಗಳಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರಿಂದ ಹೆಚ್ಚಿನ ನಿರೀಕ್ಷೆಗಳನ್ನು ಇಡಲಾಗಿತ್ತು. ಆದರೆ, ಇಬ್ಬರೂ ಸ್ಟಾರ್ ಬ್ಯಾಟ್ಸ್‌ಮನ್‌ಗಳು ಅಭಿಮಾನಿಗಳಿಗೆ ಸಾಕಷ್ಟು ನಿರಾಸೆ ಮೂಡಿಸಿದರು. ಪುಣೆ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ರೋಹಿತ್ ಖಾತೆ ತೆರೆಯದೆ ಔಟಾದರೆ, ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 8 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಕೊಹ್ಲಿ ಸ್ಥಿತಿಯೂ ಇದಕ್ಕಿಂತ ಹೊರತಾಗಿರಲಿಲ್ಲ. ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ ಒಂದು ರನ್ ಗಳಿಸಿದ್ದ ಕೊಹ್ಲಿ ಎರಡನೇ ಇನ್ನಿಂಗ್ಸ್‌ನಲ್ಲಿ 17 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು.
ಸತತ ಎರಡು ಪಂದ್ಯಗಳಲ್ಲಿ ಈ ಇಬ್ಬರ ಕಳಪೆ ಆಟವನ್ನು ನೋಡಿದ ಅಭಿಮಾನಿಗಳು ಕೊಹ್ಲಿ-ರೋಹಿತ್ ವಿರುದ್ಧ ಗುಡುಗಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಆಡದಿರುವ ಬಗ್ಗೆ ಅಭಿಮಾನಿಗಳು ಈ ಇಬ್ಬರು ಲೆಜೆಂಡರಿ ಬ್ಯಾಟ್ಸ್‌ಮನ್‌ಗಳಿಗೆ ನೇರ ಪ್ರಶ್ನೆಗಳನ್ನು ಕೇಳಿದ್ದಾರೆ. ‘ಕ್ರಿಕೆಟ್ ದೇವರು’ ಸಚಿನ್ ತೆಂಡೂಲ್ಕರ್ 40ರ ಹರೆಯದಲ್ಲಿ ರಣಜಿ ಟ್ರೋಫಿಯಲ್ಲಿ ಆಡುತ್ತಾರೆ ಎಂದಾದರೆ ರೋಹಿತ್-ಕೊಹ್ಲಿ ಏಕೆ ಆಡಬಾರದು ಎಂದು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಧ್ವನಿ ಎತ್ತಿದ್ದಾರೆ.
A crazy fact:
Virat Kohli’s last Ranji match was in 2012
Sachin Tendulkar’s last Ranji match was in 2013 #RanjiTrophy— Ramachandra.M| ರಾಮಚಂದ್ರ.ಎಮ್ (@nanuramu) October 26, 2024
Agree with your point of view.our all player should play domestic Cricket also, if Virat and Rohit have spin match practice then they may perform inthis match, but they look like new to spin.
— Sarcastic Indian🇮🇳 (@yogesh_sarcasm) October 26, 2024
Last time when so called superstars played the ranji match
KL RAHUL :- 2014
Rohit Sharma:- 2015
Shubhman Gill :- 2018
Virat Kohli :- 2012
& Funniest thing is
Sachin Tendulkar :- 2013This god complex of some cricketers has to end.#INDvsNZ pic.twitter.com/2dBs1y5hRi
— Raazi (@Crick_logist) October 26, 2024
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ದೇಶೀಯ ಕ್ರಿಕೆಟ್ ಆಡಿ ವರ್ಷಗಳೇ ಕಳೆದಿವೆ. ಕೊಹ್ಲಿ ತಮ್ಮ ಕೊನೆಯ ರಣಜಿ ಪಂದ್ಯವನ್ನು 2012 ರಲ್ಲಿ ಆಡಿದ್ದರು. ಆದರೆ, ಸಚಿನ್ ತೆಂಡೂಲ್ಕರ್ ತಮ್ಮ ಕೊನೆಯ ರಣಜಿ ಪಂದ್ಯವನ್ನು 2013 ರಲ್ಲಿ ಆಡಿದ್ದರು. ಅಂದರೆ ಸಚಿನ್ ನಿವೃತ್ತಿಗೆ ಕೆಲವೇ ಸಮಯವಿದ್ದಾಗಲೂ ರಣಜಿಯಲ್ಲಿ ಆಡಿದ್ದರು. ಆದರೆ ಕೊಹ್ಲಿ ಮಾತ್ರ ಸಚಿನ್ಗೂ ಮುನ್ನ ಅಂದರೆ 2012 ರಲ್ಲಿ ಕೊನೆಯ ಬಾರಿಗೆ ದೇಶೀಯ ಟೂರ್ನಿ ಆಡಿದ್ದರು. ಮತ್ತೊಂದೆಡೆ, ರೋಹಿತ್ ಶರ್ಮಾ ಕೊನೆಯ ಬಾರಿಗೆ 2016 ರಲ್ಲಿ ದೇಶೀಯ ಕ್ರಿಕೆಟ್‌ನಲ್ಲಿ ಆಡಿದ್ದರು. ಕೊಹ್ಲಿ ದೇಶೀಯ ಕ್ರಿಕೆಟ್‌ನಲ್ಲಿ ಆಡಿ 12 ವರ್ಷಗಳು ಕಳೆದಿದ್ದರೆ, ರೋಹಿತ್ ಕೂಡ 8 ವರ್ಷಗಳಿಂದ ದೇಶೀಯ ಕ್ರಿಕೆಟ್‌ನಲ್ಲಿ ಆಡಿಲ್ಲ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ