ಟೀಮ್ ಇಂಡಿಯಾ ಎಂಟ್ರಿಗೆ 17 ಕೆ.ಜಿ ಕಳೆದುಕೊಂಡ ಯುವ ವೇಗಿ

Harshit Rana: ಐಪಿಎಲ್ 2024 ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಪರ 13 ಪಂದ್ಯಗಳನ್ನಾಡಿದ್ದ ಹರ್ಷಿತ್ ರಾಣಾ ಒಟ್ಟು 19 ವಿಕೆಟ್ ಕಬಳಿಸಿದ್ದರು. ಈ 19 ವಿಕೆಟ್​ಗಳೊಂದಿಗೆ ಕೆಕೆಆರ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಟೀಮ್ ಇಂಡಿಯಾ ಎಂಟ್ರಿಗೆ 17 ಕೆ.ಜಿ ಕಳೆದುಕೊಂಡ ಯುವ ವೇಗಿ
Harshit Rana
Follow us
|

Updated on: Oct 28, 2024 | 2:19 PM

ಬಾರ್ಡರ್-ಗವಾಸ್ಕರ್ ಟ್ರೋಫಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಈ ತಂಡವು ನವೆಂಬರ್ 10 ರಂದು ಆಸ್ಟ್ರೇಲಿಯಾದ ಪರ್ತ್‌ಗೆ ಹಾರಲಿದೆ. ಹೀಗೆ ಪರ್ತ್​ಗೆ ಹಾರಲಿರುವ ಭಾರತ ತಂಡದಲ್ಲಿ ದೆಹಲಿಯ ಯುವ ವೇಗಿಯೊಬ್ಬರು ಸಹ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೆ ಈ ಬಾರಿಯ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಕಣಕ್ಕಿಳಿಯುವ ಮೂಲಕ ತಮ್ಮ ಬಾಲ್ಯದ ಕನಸನ್ನು ಈಡೇರಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ. ಆ ಆಟಗಾರ ಮತ್ಯಾರೂ ಅಲ್ಲ… ಅವರೇ ಹರ್ಷಿತ್ ರಾಣಾ. ಐಪಿಎಲ್​ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಪರ ಕಣಕ್ಕಿಳಿದಿದ್ದ ರಾಣಾ ಇದೀಗ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

22 ವರ್ಷದ ಹರ್ಷಿತ್ ರಾಣಾ ಐಪಿಎಲ್‌ನಿಂದ ಗಮನ ಸೆಳೆದ ಸ್ಟಾರ್ ಬೌಲರ್. ಗೌತಮ್ ಗಂಭೀರ್ ಅವರ ಮಾರ್ಗದರ್ಶನದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್‌ಗಾಗಿ ಅದ್ಭುತ ಪ್ರದರ್ಶನ ನೀಡಿದ್ದ ಹರ್ಷಿತ್ ಬಾಂಗ್ಲಾದೇಶ್ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗಿದ್ದರು. ಆದರೆ ಅವರಿಗೆ ಚೊಚ್ಚಲ ಪಂದ್ಯವಾಡಲು ಅವಕಾಶ ಸಿಕ್ಕಿರಲಿಲ್ಲ. ಇದೀಗ ಬಾರ್ಡರ್-ಗವಾಸ್ಕರ್ ಟೆಸ್ಟ್​ ಸರಣಿಗೂ ಆಯ್ಕೆಯಾಗಿದ್ದಾರೆ.

ಈ ಆಯ್ಕೆಯ ಬೆನ್ನಲ್ಲೇ ಹರ್ಷಿತ್ ರಾಣಾ ದೇಶೀಯ ಅಂಗಳದಲ್ಲಿ ಭರ್ಜರಿ ಪ್ರದರ್ಶನ ಮುಂದುವರೆಸಿದ್ದಾರೆ. ಪ್ರಸ್ತುತ ನಡೆಯುತ್ತಿರುವ ರಣಜಿ ಟೂರ್ನಿಯಲ್ಲಿ ಅಸ್ಸಾಂ ವಿರುದ್ಧದ ಪಂದ್ಯದಲ್ಲಿ ದೆಹಲಿ ಪರ ಕಣಕ್ಕಿಳಿದ ಹರ್ಷಿತ್ 5 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಈ ಮೂಲಕ ಭಾರತ ತಂಡಕ್ಕೆ ತನ್ನ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಬಾಲ್ಯದ ಕನಸು ಯವ್ವೌನದಲ್ಲಿ ನನಸು:

ಹರ್ಷಿತ್ ರಾಣಾಗೆ ಬಾಲ್ಯದಿಂದಲೂ ಬಾರ್ಡರ್-ಗವಾಸ್ಕರ್ ಟ್ರೋಫಿ ಎಂದರೆ ಪಂಚಪ್ರಾಣ. ಈ ಬಗ್ಗೆ ಖಾಸಗಿ ಸಂದರ್ಶನವೊಂದರಲ್ಲಿ ಮಾತನಾಡಿರುವ ಹರ್ಷಿತ್, ನನಗೆ ಬಾಲ್ಯದಿಂದಲೇ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಎಂದರೆ ತುಂಬಾ ಇಷ್ಟ. ಹೀಗಾಗಿಯೇ ಈ ಟೂರ್ನಿ ಪಂದ್ಯಗಳನ್ನು ವೀಕ್ಷಿಸಲು ದೆಹಲಿಯ ಚಳಿಯನ್ನೇ ಲೆಕ್ಕಿಸದೇ ಬೆಳಿಗ್ಗೆ 4 ಗಂಟೆಗೆ ತಂದೆಯೊಂದಿಗೆ ಎದ್ದು ಕೂತಿರುತ್ತಿದ್ದೆ.

ಅಲ್ಲದೆ 6ನೇ ವಯಸ್ಸಿನಿಂದಲೂ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ನೋಡುತ್ತಿದ್ದೇನೆ. 2020-21ರ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ, ಚೇತೇಶ್ವರ ಪೂಜಾರ ಅವರ ದೇಹದ ಮೇಲೆ ಚೆಂಡುಗಳಿಂದಾದ ಗಾಯವಾಗಿರಲಿ ಅಥವಾ ಅಶ್ವಿನ್-ಹನುಮ ವಿಹಾರಿಯ ನಡುವಿನ ಪಾಲುದಾರಿಕೆಯಾಗಿರಲಿ, ಈ ಎಲ್ಲಾ ಕ್ಷಣಗಳು ದೇಶಕ್ಕಾಗಿ ನಾನು ಕೂಡ ಆಡಬೇಕೆಂದು ನನ್ನನ್ನು ಪ್ರೇರೇಪಿಸಿವೆ. ಇದೀಗ ಇದೇ ಸರಣಿಗಾಗಿ ನಾನು ಕೂಡ ಆಯ್ಕೆಯಾಗಿರುವುದು ಖುಷಿ ನೀಡಿದೆ ಎಂದು ಹರ್ಷಿತ್ ರಾಣ ಹೇಳಿದ್ದಾರೆ.

ಗಾಯದಿಂದ ಎದ್ದು ಬಂದ, ಗೆದ್ದು ಬಂದ:

ಬಾಲ್ಯದಿಂದಲೂ ಭಾರತ ಟೆಸ್ಟ್ ತಂಡದ ಭಾಗವಾಗಬೇಕೆಂದು ಕನಸು ಕಂಡಿದ್ದ ಹರ್ಷಿತ್ ರಾಣಾ ಅವರಿಗೆ ಟೀಮ್ ಇಂಡಿಯಾ ಎಂಟ್ರಿ ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಏಕೆಂದರೆ ಚಿಕ್ಕ ವಯಸ್ಸಿನಿಂದಲೇ ಕ್ರಿಕೆಟ್ ಆಡುತ್ತಿದ್ದ ಕಾರಣ ಅವರು ಸತತವಾಗಿ ಗಾಯಗೊಳ್ಳುತ್ತಿದ್ದರು. ಅದರಲ್ಲೂ 20ನೇ ವಯಸ್ಸಿನಲ್ಲಿ ಹಲವು ಬಾರಿ ಮೂಳೆ ಮೂರಿತಕ್ಕೊಳಗಾದರು. ಆದರೆ ಆ ಗಾಯಗಳೇ ಇಂದು ಹರ್ಷಿತ್ ರಾಣಾ ಅವರನ್ನು ಫಿಟ್​ ಅ್ಯಂಡ್ ಫೈನ್ ಆಟಗಾರನಾಗಿಸಿರುವುದು ವಿಶೇಷ.

ಅಂದರೆ ಹರ್ಷಿತ್ ರಾಣಾ ಸತತವಾಗಿ ಗಾಯಗೊಳ್ಳಲು ಒಂದು ಕಾರಣ ಅವರ ಫಿಟ್​ನೆಸ್ ಸಮಸ್ಯೆ. ಹೀಗಾಗಿ ವೇಟ್‌ಲಿಫ್ಟಿಂಗ್ ಮತ್ತು ಹ್ಯಾಮರ್ ಥ್ರೋನಲ್ಲಿ ಸಿಆರ್‌ಪಿಎಫ್ ಅನ್ನು ಪ್ರತಿನಿಧಿಸಿರುವ ತಂದೆ ಪ್ರದೀಪ್ ರಾಣಾ ಅವರ ಮಾರ್ಗದರ್ಶನದಲ್ಲಿ ಹರ್ಷಿತ್ ಫಿಟ್​ನೆಸ್​ ಮಂತ್ರಕ್ಕೆ ಮುಂದಾದರು. ಇದಕ್ಕಾಗಿ ದೇಹ ದಂಡಿಸಲು ಶುರು ಮಾಡಿದರು.

17 ಕೆ.ಜಿ ಕಳೆದುಕೊಂಡ ಯುವ ಬೌಲರ್:

ಫಿಟ್​ನೆಸ್ ಸಾಧಿಸಬೇಕೆಂದು ಪಣತೊಟ್ಟಿದ್ದ ಹರ್ಷಿತ್ ರಾಣಾ 2023-24 ರ ರಣಜಿ ಸೀಸನ್​ ವೇಳೆ ಮಂಡಿರಜ್ಜು ಗಾಯಗೊಳ್ಳಕ್ಕಾದರು. ಇದರಿಂದ ಇಡೀ ರಣಜಿ ಸೀಸನ್​ನಿಂದ ಹೊರಗುಳಿಯಬೇಕಾಯಿತು. ಆದರೆ ಆ ಬಳಿಕ ದೇಹ ದಂಡನೆ ಮುಂದುವರೆಸಿದರು. ಪರಿಣಾಮ ಹರ್ಷಿತ್ ರಾಣ ಒಂದೇ ವರ್ಷದೊಳಗೆ 17 ಕೆ.ಜಿ ತೂಕ ಕಳೆದುಕೊಂಡರು.

ಈ ಮೂಲಕ ಫಿಟ್​ನೆಸ್ ಸಾಧಿಸಿದ ಹರ್ಷಿತ್ ರಾಣ ಕಳೆದ 7 ತಿಂಗಳಿಂದ ಗಾಯಗೊಂಡಿಲ್ಲ. ಅಲ್ಲದೆ ಈ ಬಾರಿಯ ಐಪಿಎಲ್​ನಲ್ಲೂ ಭರ್ಜರಿ ಬೌಲಿಂಗ್ ಮೂಲಕ ಮಿಂಚಿದ್ದಾರೆ.

ಇದನ್ನೂ ಓದಿ: IPL 2025: LSG ರಿಟೈನ್ ಮಾಡಿಕೊಂಡಿರುವ 5 ಆಟಗಾರರು ಇವರೇ

ಈ ಎಲ್ಲಾ ಕಾರಣಗಳಿಂದಾಗಿ ಇದೀಗ ಹರ್ಷಿತ್ ರಾಣಾಗೆ ಟೀಮ್ ಇಂಡಿಯಾದಲ್ಲಿ ಅವಕಾಶ ಸಿಕ್ಕಿದೆ. ಈ ಅವಕಾಶದೊಂದಿಗೆ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಆಡುವ ಹರ್ಷಿತ್ ಅವರ ಬಾಲ್ಯದ ಕನಸು ಈಡೇರಲಿದೆಯಾ ಕಾದು ನೋಡಬೇಕಿದೆ.