ಪ್ರಮುಖ ಆಟಗಾರರಿಲ್ಲದ ಆಸ್ಟ್ರೇಲಿಯಾ ಟಿ20 ತಂಡ ಪ್ರಕಟ
Australia vs Pakistan T20I series: ನವೆಂಬರ್ 14 ರಿಂದ ಪಾಕಿಸ್ತಾನ್ ಮತ್ತು ಆಸ್ಟ್ರೇಲಿಯಾ ನಡುವಣ ಟಿ20 ಸರಣಿ ಶುರುವಾಗಲಿದೆ. ಈ ಸರಣಿಯ ಮೊದಲ ಪಂದ್ಯವು ಬ್ರಿಸ್ಬೇನ್ನಲ್ಲಿ ನಡೆದರೆ, ನವೆಂಬರ್ 16 ರಂದು ನಡೆಯಲಿರುವ ಎರಡನೇ ಪಂದ್ಯಕ್ಕೆ ಸಿಡ್ನಿ ಆತಿಥ್ಯವಹಿಸಲಿದೆ.
ಪಾಕಿಸ್ತಾನ್ ವಿರುದ್ಧದ ಟಿ20 ಸರಣಿಗಾಗಿ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಲಾಗಿದೆ. 13 ಸದಸ್ಯರ ಈ ತಂಡದಲ್ಲಿ ಪ್ರಮುಖ ಆಟಗಾರರು ಕಾಣಿಸಿಕೊಂಡಿಲ್ಲ ಎಂಬುದು ವಿಶೇಷ. ಆಸ್ಟ್ರೇಲಿಯಾ ತಂಡದ ಪ್ರಮುಖ ಆಟಗಾರರು ಭಾರತದ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗಾಗಿ ಸಜ್ಜಾಗುತ್ತಿದ್ದು, ಹೀಗಾಗಿ ಈ ಆಟಗಾರರಿಗೆ ಪಾಕ್ ವಿರುದ್ಧದ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ.
ಇನ್ನು ನಾಯಕ ಮಿಚೆಲ್ ಮಾರ್ಷ್ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು ಗ್ಲೆನ್ ಮ್ಯಾಕ್ಸ್‌ವೆಲ್ ಮುನ್ನಡೆಸುವ ಸಾಧ್ಯತೆಯಿದೆ. ಹಾಗೆಯೇ ತಂಡದಲ್ಲಿ ಟಿಮ್ ಡೇವಿಡ್, ಮಾರ್ಕಸ್ ಸ್ಟೊಯಿನಿಸ್ ಹಾಗೂ ಆ್ಯಡಂ ಝಂಪಾ ಕೂಡ ಕಾಣಿಸಿಕೊಂಡಿದ್ದಾರೆ.
ಪಾಕಿಸ್ತಾನ್ vs ಆಸ್ಟ್ರೇಲಿಯಾ ಟಿ20 ಸರಣಿ ಯಾವಾಗ ಶುರು?
ನವೆಂಬರ್ 14 ರಿಂದ ಪಾಕಿಸ್ತಾನ್ – ಆಸ್ಟ್ರೇಲಿಯಾ ನಡುವಣ ಟಿ20 ಸರಣಿ ಶುರುವಾಗಲಿದೆ. ಈ ಸರಣಿಯ ಮೊದಲ ಪಂದ್ಯವು ಬ್ರಿಸ್ಬೇನ್ನಲ್ಲಿ ನಡೆದರೆ, ನವೆಂಬರ್ 16 ರಂದು ನಡೆಯಲಿರುವ ಎರಡನೇ ಪಂದ್ಯಕ್ಕೆ ಸಿಡ್ನಿ ಆತಿಥ್ಯವಹಿಸಲಿದೆ. ಇನ್ನು ನವೆಂಬರ್ 18 ರಂದು ಜರುಗಲಿರುವ ಮೂರನೇ ಪಂದ್ಯವು ಹೋಬರ್ಟ್ನಲ್ಲಿ ನಡೆಯಲಿದೆ.
- ಮೊದಲ T20I: ನವೆಂಬರ್ 14, ಬ್ರಿಸ್ಬೇನ್
- ಎರಡನೇ T20I: ನವೆಂಬರ್ 16, ಸಿಡ್ನಿ
- ಮೂರನೇ T20I: ನವೆಂಬರ್ 18, ಹೋಬರ್ಟ್
ಈ ಸರಣಿಗಾಗಿ ಉಭಯ ತಂಡಗಳು:
ಆಸ್ಟ್ರೇಲಿಯಾ ಟಿ20 ತಂಡ: ಶಾನ್ ಅಬಾಟ್, ಕ್ಸೇವಿಯರ್ ಬಾರ್ಟ್ಲೆಟ್, ಕೂಪರ್ ಕೊನೊಲಿ, ಟಿಮ್ ಡೇವಿಡ್, ನಾಥನ್ ಎಲ್ಲಿಸ್, ಜೇಕ್ ಫ್ರೇಸರ್-ಮೆಕ್‌ಗುರ್ಕ್, ಆರೋನ್ ಹಾರ್ಡಿ, ಜೋಶ್ ಇಂಗ್ಲಿಸ್, ಸ್ಪೆನ್ಸರ್ ಜಾನ್ಸನ್, ಗ್ಲೆನ್ ಮ್ಯಾಕ್ಸ್‌ವೆಲ್, ಮ್ಯಾಥ್ಯೂ ಶಾರ್ಟ್, ಮಾರ್ಕಸ್ ಸ್ಟೋನಿಸ್, ಆ್ಯಡಂ ಝಂಪಾ.
ಇದನ್ನೂ ಓದಿ: RCB ಉಳಿಸಿಕೊಂಡ ಆರು ಆಟಗಾರರು ಯಾರೆಲ್ಲಾ ಗೊತ್ತಾ?
ಪಾಕಿಸ್ತಾನ್ ಟಿ20 ತಂಡ: ಅರಾಫತ್ ಮಿನ್ಹಾಸ್, ಬಾಬರ್ ಆಝಂ, ಹ್ಯಾರಿಸ್ ರೌಫ್, ಹಸೀಬುಲ್ಲಾ, ಜಹಂದಾದ್ ಖಾನ್, ಮೊಹಮ್ಮದ್ ಅಬ್ಬಾಸ್ ಅಫ್ರಿದಿ, ಮೊಹಮ್ಮದ್ ರಿಝ್ವಾನ್ (ನಾಯಕ), ಮುಹಮ್ಮದ್ ಇರ್ಫಾನ್ ಖಾನ್, ನಸೀಮ್ ಶಾ, ಒಮೈರ್ ಬಿನ್ ಯೂಸುಫ್, ಸಾಹಿಬ್ಝಾದ ಫರ್ಹಾನ್, ಸಲ್ಮಾನ್ ಆಘಾ, ಶಾಹೀನ್ ಅಫ್ರಿದಿ, ಸುಫ್ಯಾನ್ ಮೊಕಿಮ್, ಉಸ್ಮಾನ್ ಖಾನ್.
Published On - 11:39 am, Mon, 28 October 24