- Kannada News Photo gallery Cricket photos IPL 2025: LSG set to retain Nicholas Pooran, Mayank Yadav, Ravi Bishnoi
IPL 2025: LSG ರಿಟೈನ್ ಮಾಡಿಕೊಂಡಿರುವ 5 ಆಟಗಾರರು ಇವರೇ
IPL 2025: ಐಪಿಎಲ್ ಮೆಗಾ ಹರಾಜಿಗೂ ಮುನ್ನ ಪ್ರತಿ ಫ್ರಾಂಚೈಸಿಗಳಿಗೆ ಒಟ್ಟು 6 ಆಟಗಾರರನ್ನು ರಿಟೈನ್ ಮಾಡಿಕೊಳ್ಳಲು ಅವಕಾಶವಿದೆ. ಒಂದು ವೇಳೆ ಫ್ರಾಂಚೈಸಿಯೊಂದು ಐವರನ್ನು ರಿಟೈನ್ ಮಾಡಿಕೊಂಡರೆ, ಓರ್ವ ಆಟಗಾರನ ಮೇಲೆ ಆರ್ಟಿಎಂ ಕಾರ್ಡ್ ಬಳಸಿಕೊಳ್ಳಬಹುದು. ಅದರಂತೆ ಇದೀಗ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ಐವರು ಆಟಗಾರರನ್ನು ರಿಟೈನ್ ಮಾಡಿಕೊಳ್ಳಲು ನಿರ್ಧರಿಸಿದೆ.
Updated on: Oct 28, 2024 | 1:42 PM

ಐಪಿಎಲ್ ಮೆಗಾ ಹರಾಜಿಗೂ ಮುನ್ನ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಯು 5 ಆಟಗಾರರನ್ನು ರಿಟೈನ್ ಮಾಡಿಕೊಳ್ಳಲು ನಿರ್ಧರಿಸಿದೆ. ಈ ಐದು ಆಟಗಾರರಲ್ಲಿ ತಂಡದ ನಾಯಕ ಕೆಎಲ್ ರಾಹುಲ್ ಇಲ್ಲ ಎಂಬುದು ಖಚಿತವಾಗಿದೆ. ಹೀಗಾಗಿ ಐಪಿಎಲ್ ಸೀಸನ್-18 ರ ಮೆಗಾ ಹರಾಜಿನಲ್ಲಿ ರಾಹುಲ್ ಕಾಣಿಸಿಕೊಳ್ಳುವುದು ಕನ್ಫರ್ಮ್. ಇನ್ನು LSG ಫ್ರಾಂಚೈಸಿ ರಿಟೈನ್ ಮಾಡಿಕೊಂಡಿರುವ 5 ಆಟಗಾರರ ಪಟ್ಟಿ ಈ ಕೆಳಗಿನಂತಿದೆ...

ನಿಕೋಲಸ್ ಪೂರನ್: ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಯು ತನ್ನ ಮೊದಲ ರಿಟೈನ್ ಆಗಿ ವೆಸ್ಟ್ ಇಂಡೀಸ್ ಆಟಗಾರ ನಿಕೋಲಸ್ ಪೂರನ್ ಅವರನ್ನು ಆಯ್ಕೆ ಮಾಡಿಕೊಂಡಿದೆ. ಇದಕ್ಕಾಗಿ ಪೂರನ್ಗೆ 18 ಕೋಟಿ ರೂ. ನೀಡಲು ಎಲ್ಎಸ್ಜಿ ಫ್ರಾಂಚೈಸಿ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.

ಮಯಾಂಕ್ ಯಾದವ್: ಲಕ್ನೋ ಸೂಪರ್ ಜೈಂಟ್ಸ್ ತಂಡದ ಎರಡನೇ ರಿಟೈನ್ ಯುವ ವೇಗಿ ಮಯಾಂಕ್ ಯಾದವ್. ಟೀಮ್ ಇಂಡಿಯಾ ಆಟಗಾರನನ್ನು ಎಲ್ಎಸ್ಜಿ 14 ಕೋಟಿ ರೂ.ಗೆ ತಂಡದಲ್ಲೇ ಉಳಿಸಿಕೊಳ್ಳಲು ನಿರ್ಧರಿಸಿದೆ.

ರವಿ ಬಿಷ್ಣೋಯ್: ಎಲ್ಎಸ್ಜಿ ಫ್ರಾಂಚೈಸಿಯ ಮೂರನೇ ರಿಟೈನ್ ಯುವ ಸ್ಪಿನ್ನರ್ ರವಿ ಬಿಷ್ಣೋಯ್. ಕಳೆದ ಮೂರು ಸೀಸನ್ಗಳಿಂದ ಲಕ್ನೋ ತಂಡದ ಭಾಗವಾಗಿರುವ ಬಿಷ್ಣೋಯ್ ಮುಂಬರುವ ಐಪಿಎಲ್ನಲ್ಲೂ ಎಲ್ಎಸ್ಜಿ ಪರ ಕಣಕ್ಕಿಳಿಯುವುದು ಖಚಿತವಾಗಿದೆ.

ಆಯುಷ್ ಬದೋನಿ: ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಯು ಯುವ ಆಟಗಾರ ಆಯುಷ್ ಬದೋನಿಯನ್ನು ಅನ್ಕ್ಯಾಪ್ಡ್ ಆಟಗಾರರ ಪಟ್ಟಿಯಲ್ಲಿ ತಂಡದಲ್ಲೇ ಉಳಿಸಿಕೊಂಡಿದೆ. ಅದರಂತೆ ಯುವ ಆಟಗಾರನಿಗೆ 4 ಕೋಟಿ ರೂ. ನೀಡುವ ಸಾಧ್ಯತೆಯಿದೆ.

ಮೊಹ್ಸಿನ್ ಖಾನ್: ಎಲ್ಎಸ್ಜಿ ಫ್ರಾಂಚೈಸಿಯು ಎಡಗೈ ವೇಗಿ ಮೊಹ್ಸಿನ್ ಖಾನ್ ಅವರನ್ನು ಸಹ ರಿಟೈನ್ ಮಾಡಿಕೊಳ್ಳಲು ನಿರ್ಧರಿಸಿದೆ. ಟೀಮ್ ಇಂಡಿಯಾ ಪರ ಆಡಿರದ ಕಾರಣ ಮೊಹ್ಸಿನ್ ಖಾನ್ ಕೂಡ ಅನ್ಕ್ಯಾಪ್ಡ್ ಆಟಗಾರರ ಪಟ್ಟಿಯಲ್ಲಿ ರಿಟೈನ್ ಆಗಲಿದ್ದಾರೆ.

ಇನ್ನು ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ಓರ್ವ ಆಟಗಾರನ ಮೇಲೆ ಆರ್ಟಿಎಂ ಕಾರ್ಡ್ ಬಳಸುವ ಸಾಧ್ಯತೆಯಿದೆ. ಆದರೆ ಆ ಆಟಗಾರ ಯಾರೆಂಬುದು ಇನ್ನೂ ಸಹ ನಿರ್ಧಾರವಾಗಿಲ್ಲ. ಅತ್ತ ತಂಡದಲ್ಲಿ ಮಾರ್ಕಸ್ ಸ್ಟೊಯಿನಿಸ್, ಕ್ವಿಂಟನ್ ಡಿಕಾಕ್, ಕೃನಾಲ್ ಪಾಂಡ್ಯ ಸೇರಿದಂತೆ ಪ್ರಮುಖ ಆಟಗಾರರಿದ್ದು, ಹೀಗಾಗಿ ಇವರಲ್ಲಿ ಒಬ್ಬರನ್ನು ಆರ್ಟಿಎಂ ಬಳಸಿ ಹರಾಜಿಗೆ ಬಿಡುಗಡೆ ಮಾಡಬಹುದು.
