ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತೀ ಹೆಚ್ಚು ಓವರ್ಗಳನ್ನು ಎಸೆದು ಅತೀ ಕಡಿಮೆ ಮೇಡನ್ ಓವರ್ ಮಾಡಿದ ಅತ್ಯಂತ ಕಳಪೆ ದಾಖಲೆಯೊಂದು ಪಾಕಿಸ್ತಾನ್ ತಂಡದ ಪಾಲಾಗಿದೆ. ಅದು ಸಹ ತವರು ಮೈದಾನದಲ್ಲಿ ಎಂಬುದು ವಿಶೇಷ. ಮುಲ್ತಾನ್ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಪಾಕಿಸ್ತಾನ್ ಬೌಲರ್ಗಳು ಬರೋಬ್ಬರಿ 150 ಓವರ್ಗಳನ್ನು ಎಸೆದಿದ್ದರು.