ಐಸಿಸಿ ಟಿ20 ವಿಶ್ವಕಪ್ (T20 World Cup 2022) ಸೆಮಿ ಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ ಹೀನಾಯ ಸೋಲು ಕಂಡ ಬಳಿಕ ಭಾರತೀಯ ಕ್ರಿಕೆಟ್ನಲ್ಲಿ (Team India) ಮಹತ್ವದ ಬೆಳವಣಿಗೆ ನಡೆಯುತ್ತಿದೆ. ಇದರ ಅಂಗವಾಗಿ ಆಯ್ಕೆ ಸಮಿತಿಯ ತಲೆದಂಡವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡುವ ಮೂಲಕ ಬಿಸಿಸಿಐ (BCCI) ನಿನ್ನೆ ಆಯ್ಕೆ ಸಮಿತಿಯನ್ನು ವಜಾಗೊಳಿಸಿದ್ದು, ಹೊಸ ಸಮಿತಿಯ ಆಯ್ಕೆಗೆ ಅರ್ಜಿ ಕೂಡ ಆಹ್ವಾನಿಸಲಾಗಿದೆ. ಇದರೊಂದಿಗೆ ಬಿಸಿಸಿಐ ಇನ್ನಷ್ಟು ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಿದ್ಧತೆ ನಡೆಸುತ್ತಿದೆ ಎಂದು ಮೂಲಗಳು ಮಾಧ್ಯಮಗಳಿಗೆ ತಿಳಿಸಿವೆ.
ಚೇತನ್ ಶರ್ಮಾ ಅವರ ಆಯ್ಕೆ ಸಮಿತಿಯನ್ನು ನಿನ್ನೆ ವಜಾಗೊಳಿಸಿದ ನಂತರ ಆಯ್ಕೆ ಸಮಿತಿಯ ಮುಖ್ಯಸ್ಥರ ಹುದ್ದೆಗೆ ಅಜಿತ್ ಅಗರ್ಕರ್ ಅವರ ಹೆಸರು ಹೆಚ್ಚು ಚರ್ಚೆಯಾಗುತ್ತಿದೆ ಎಂದು ವರದಿಯಾಗಿದೆ. ಇದಕ್ಕೂ ಮುನ್ನ ಅಜಿತ್ ಅಗರ್ಕರ್ ಈ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಆದರೆ ಕಳೆದ ಬಾರಿ ಆಯ್ಕೆ ಸಮಿತಿಯ ಹುದ್ದೆ ಸಿಕ್ಕಿರಲಿಲ್ಲ. ಅಜಿತ್ ಅಗರ್ಕರ್ ಅವರಿಗೆ ಈ ಬಾರಿ ಹುದ್ದೆ ಸಿಗುವ ಸಾಧ್ಯತೆ ಹೆಚ್ಚಿದೆ.
ಬಹುತೇಕ ಅಂತಿಮಗೊಳಿಸಲಾಗಿದೆ
ಅಜಿತ್ ಅಗರ್ಕರ್ ಯುವ ಮಾಜಿ ಕ್ರಿಕೆಟಿಗನಾಗಿದ್ದು, ಅವರಿಗೆ ಎಲ್ಲಾ ಮೂರು ಸ್ವರೂಪಗಳಲ್ಲಿ ಆಡಿದ ಅನುಭವ ಇದೆ. ಕಳೆದ ಬಾರಿಯೂ ಸಹ ಅವರ ಹೆಸರು ಈ ಹುದ್ದೆಗೆ ಬಹಳ ಹತ್ತಿರ ಬಂದಿತ್ತು. ಆದರೆ ಅಂತಿಮ ಹಂತದಲ್ಲಿ ಅವರ ಹೆಸರನ್ನು ಕೈಬಿಡಲಾಗಿತ್ತು. ಆದರೆ ಈ ವರ್ಷ ಅಜಿತ್ ಅಗರ್ಕರ್ ಅವರ ಹೆಸರನ್ನು ಬಹುತೇಕ ಅಂತಿಮಗೊಳಿಸಲಾಗಿದೆ. ಅಗರ್ಕರ್ ಜೊತೆ ಈ ಬಗ್ಗೆ ಯಾವುದೇ ಚರ್ಚೆ ನಡೆಯದಿದ್ದರೂ ಅಗರ್ಕರ್ ಅವರ ಹೆಸರು ನಿರ್ಧಾರವಾಗಲಿದೆ ಎಂದು ಮಾಹಿತಿ ಹೊರಬಿದ್ದಿದೆ.
ಮುಖ್ಯ ಆಯ್ಕೆಗಾರನಾಗಲು ಬೇಕಾದ ಅರ್ಹತೆಗಳು
ಆಯ್ಕೆ ಮಂಡಳಿಯ ಜವಾಬ್ದಾರಿಗಳು
ಅಜಿತ್ ಅಗರ್ಕರ್ ಅವರ ವೃತ್ತಿಜೀವನ
ಟೀಂ ಇಂಡಿಯಾ ಪರ 26 ಟೆಸ್ಟ್ ಪಂದ್ಯಗಳನ್ನು ಆಡಿರುವ ಅಜಿತ್ ಅಕರ್ಗರ್ 58 ವಿಕೆಟ್ ಪಡೆದಿದ್ದಾರೆ. ಹಾಗೆಯೇ 191 ಏಕದಿನ ಪಂದ್ಯಗಳಲ್ಲಿ 288 ವಿಕೆಟ್ ಕಬಳಿಸಿದರೆ. ಆಡಿರುವ 4 ಟಿ20 ಪಂದ್ಯಗಳಲ್ಲಿ 3 ವಿಕೆಟ್ ಕಬಳಿಸಿದ್ದಾರೆ. ಹಾಗೆಯೇ ಐಪಿಎಲ್ನಲ್ಲಿ 32 ಪಂದ್ಯಗಳನ್ನಾಡಿರುವ ಅಜಿತ್ 29 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
Published On - 3:38 pm, Sat, 19 November 22