Asia Cup 2024: ಏಷ್ಯಾಕಪ್​ನಲ್ಲಿ ಇಂದು ಭಾರತ vs ನೇಪಾಳ ಮುಖಾಮುಖಿ

|

Updated on: Jul 23, 2024 | 10:14 AM

Womens Aisa Cup 2024: ಏಷ್ಯಾಕಪ್​ನ ಮೊದಲೆರಡು ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿರುವ ಟೀಮ್ ಇಂಡಿಯಾ ಗ್ರೂಪ್-ಎ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಹೀಗಾಗಿ ಇಂದಿನ ಪಂದ್ಯದಲ್ಲಿ ನೇಪಾಳ ವಿರುದ್ಧ ಜಯ ಸಾಧಿಸಿದರೆ ಸೆಮಿಫೈನಲ್​ಗೇರುವುದು ಖಚಿತ. ಅತ್ತ ನೇಪಾಳ ತಂಡ ಸೆಮಿಫೈನಲ್​ಗೇರಬೇಕಿದ್ದರೆ ಇಂದಿನ ಪಂದ್ಯದಲ್ಲಿ ಗೆಲ್ಲಬೇಕು. ಹಾಗೆಯೇ ಪಾಕಿಸ್ತಾನ್ ತಂಡವು ಯುಎಇ ವಿರುದ್ಧ ಸೋಲನುಭವಿಸಬೇಕು.

Asia Cup 2024: ಏಷ್ಯಾಕಪ್​ನಲ್ಲಿ ಇಂದು ಭಾರತ vs ನೇಪಾಳ ಮುಖಾಮುಖಿ
IND vs NEP
Follow us on

ಮಹಿಳಾ ಏಷ್ಯಾಕಪ್​ ಟಿ20 ಟೂರ್ನಿಯ 10ನೇ ಪಂದ್ಯದಲ್ಲಿ ಭಾರತ ಮತ್ತು ನೇಪಾಳ ತಂಡಗಳು ಮುಖಾಮುಖಿಯಾಗಲಿದೆ. ಶ್ರೀಲಂಕಾದ ರಂಗಿರಿ ಇಂಟರ್​ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಟೀಮ್ ಇಂಡಿಯಾ ಸೆಮಿಫೈನಲ್​ಗೇರಬಹುದು. ಏಕೆಂದರೆ ಇದಕ್ಕೂ ಮುನ್ನ ಭಾರತ ತಂಡ 2 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಮೊದಲ ಪಂದ್ಯದಲ್ಲಿ ಪಾಕಿಸ್ತಾನ್ ವಿರುದ್ಧ ಭಾರತೀಯ ವನಿತೆಯರು 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತ್ತು. ಇನ್ನು ಎರಡನೇ ಪಂದ್ಯದಲ್ಲಿ ಯುಎಇ ವಿರುದ್ಧ ಟೀಮ್ ಇಂಡಿಯಾ 78 ರನ್​ಗಳ ಗೆಲುವು ದಾಖಲಿಸಿದೆ.

ಇದೀಗ ಎರಡು ಗೆಲುವುಗಳೊಂದಿಗೆ ಗ್ರೂಪ್-ಎ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಭಾರತ ತಂಡವು ನೇಪಾಳ ವಿರುದ್ಧ ಗೆದ್ದರೆ ಅಧಿಕೃತವಾಗಿ ಸೆಮಿಫೈನಲ್​ಗೇರಲಿದೆ. ಅತ್ತ ನೇಪಾಳ ತಂಡಕ್ಕೆ ಇದು ಮಾಡು ಇಲ್ಲವೇ ಮಡಿ ಪಂದ್ಯ. ಏಕೆಂದರೆ ಗ್ರೂಪ್-ಎ ಅಂಕ ಪಟ್ಟಿಯಲ್ಲಿ ಭಾರತ ಮೊದಲ ಸ್ಥಾನದಲ್ಲಿದ್ದರೆ, ಪಾಕಿಸ್ತಾನ್ ತಂಡ ದ್ವಿತೀಯ ಸ್ಥಾನದಲ್ಲಿದೆ. ಹಾಗೆಯೇ ನೇಪಾಳ ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಅಂದರೆ ಇಂದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ಜಯ ಸಾಧಿಸಿದರೆ ಮಾತ್ರ ನೇಪಾಳ ತಂಡಕ್ಕೆ ಸೆಮಿಫೈನಲ್​ಗೇರಲು ಅವಕಾಶ ಇರಲಿದೆ.

ಇಲ್ಲದಿದ್ದರೆ ಕೊನೆಯ ಪಂದ್ಯದಲ್ಲಿ ಪಾಕಿಸ್ತಾನ್ ತಂಡವು ಯುಎಇ ವಿರುದ್ಧ ಹೀನಾಯವಾಗಿ ಸೋಲನುಭವಿಸುವುದನ್ನು ಎದುರು ನೋಡಬೇಕಾಗುತ್ತದೆ. ಹೀಗಾಗಿ ಭಾರತದ ವಿರುದ್ಧದ ಪಂದ್ಯವು ನೇಪಾಳ ತಂಡದ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿ ಮಾರ್ಪಟ್ಟಿದೆ.

ಎಷ್ಟು ಗಂಟೆಗೆ ಪಂದ್ಯ ಶುರು?

ಭಾರತ ಮತ್ತು ನೇಪಾಳ ನಡುವಣ ಪಂದ್ಯದ ಟಾಸ್ ಪ್ರಕ್ರಿಯೆಯು ಮಧ್ಯಾಹ್ನ 6.30 ಕ್ಕೆ ನಡೆಯಲಿದ್ದು, ಪಂದ್ಯವು 7 PM ಗಂಟೆಯಿಂದ ಶುರುವಾಗಲಿದೆ.

ಯಾವ ಚಾನೆಲ್​ನಲ್ಲಿ ವೀಕ್ಷಿಸಬಹುದು?

ಈ ಪಂದ್ಯದ ನೇರ ಪ್ರಸಾರ ಸ್ಟಾರ್ ಸ್ಪೋರ್ಟ್ಸ್​ ನೆಟ್​ವರ್ಕ್​ನ ಚಾನೆಲ್​ಗಳಲ್ಲಿ ಇರಲಿದೆ. ಹಾಗೆಯೇ ಡಿಸ್ನಿ ಹಾಟ್ ಸ್ಟಾರ್ ಆ್ಯಪ್​ ಮೂಲಕ ಕೂಡ ಈ ಪಂದ್ಯವನ್ನು ಲೈವ್ ವೀಕ್ಷಿಸಬಹುದು.

ಉಭಯ ತಂಡಗಳು:

ಭಾರತ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ರಿಚಾ ಘೋಷ್ (ವಿಕೆಟ್ ಕೀಪರ್), ಉಮಾ ಚೆಟ್ರಿ (ವಿಕೆಟ್ ಕೀಪರ್), ಸ್ಮೃತಿ ಮಂಧಾನ (ಉಪನಾಯಕಿ), ಶಫಾಲಿ ವರ್ಮಾ, ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ಅರುಂಧತಿ ರೆಡ್ಡಿ, ಜೆಮಿಮಾ ರೊಡ್ರಿಗಸ್, ರೇಣುಕಾ ಠಾಕೂರ್, ದಯಾಲನ್ ಹೇಮಲತಾ, ಆಶಾ ಶೋಭಾನಾ, ರಾಧಾ ಯಾದವ್, ಸಜನಾ ಸಜೀವನ್, ತನುಜಾ ಕನ್ವರ್.

ಇದನ್ನೂ ಓದಿ: IPL 2025: ಮುಂಬೈ ಇಂಡಿಯನ್ಸ್ ತಂಡಕ್ಕೆ ಸೂರ್ಯಕುಮಾರ್ ಯಾದವ್ ಗುಡ್ ಬೈ?

ನೇಪಾಳ ತಂಡ: ಇಂದೂ ಬರ್ಮಾ (ನಾಯಕಿ), ಕಾಜೋಲ್ ಶ್ರೇಷ್ಠಾ, ರುಬಿನಾ ಚೆಟ್ರಿ, ಸಬ್ನಮ್ ರೈ, ಸೀತಾ ರಾಣಾ ಮಗರ್, ರಾಜಮತಿ ಐರೀ, ಪೂಜಾ ಮಹತೋ, ಬಿಂದು ರಾವಲ್, ರೋಮಾ ಥಾಪಾ, ಮಮತಾ ಚೌಧರಿ, ಕಬಿತಾ ಜೋಶಿ, ಕಬಿತಾ ಕುನ್ವಾರ್, ಡಾಲಿ ಭಟ್ಟಾ, ಕೃತಿಕಾ ಮರಸಿನಿ, ಸಂಜಾನಾ ಖಾಡ್ಕಾ.