ಫ್ಯಾಬ್​-4 ಸೆಂಚುರಿ ಸರದಾರರ ಪಟ್ಟಿಯಲ್ಲಿ ಹಿಂದುಳಿದ ವಿರಾಟ್ ಕೊಹ್ಲಿ

Virat Kohli: ಟೆಸ್ಟ್ ಕ್ರಿಕೆಟ್​​ನಲ್ಲಿ ಸಕ್ರೀಯರಾಗಿರುವ ಅತ್ಯುತ್ತಮ ಬ್ಯಾಟರ್​ಗಳನ್ನು ಫ್ಯಾಬಲಸ್-4 ಎಂದು ಗುರುತಿಸಲಾಗುತ್ತಿದೆ. ಅದರಂತೆ ಇದೀಗ ವಿರಾಟ್ ಕೊಹ್ಲಿ, ಜೋ ರೂಟ್, ಸ್ಟೀವ್ ಸ್ಮಿತ್ ಮತ್ತು ಕೇನ್ ವಿಲಿಯಮ್ಸನ್ ಫ್ಯಾಬ್-4 ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಪಟ್ಟಿಯಲ್ಲಿರುವ ಸೆಂಚುರಿ ಸರದಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಹಿಂದೆ ಉಳಿದಿದ್ದಾರೆ.

|

Updated on:Jul 23, 2024 | 9:12 AM

ನಾಟಿಂಗ್​ಹ್ಯಾಮ್​ನ ಎಡ್ಜ್​ಬಾಸ್ಟ್​ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಜೋ ರೂಟ್ (Joe Root) ಭರ್ಜರಿ ಸೆಂಚುರಿ ಸಿಡಿಸಿ ಮಿಂಚಿದ್ದರು. ಈ ಪಂದ್ಯದ 2ನೇ ಇನಿಂಗ್ಸ್​ನಲ್ಲಿ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರೂಟ್ 178 ಎಸೆತಗಳಲ್ಲಿ 122 ರನ್ ಬಾರಿಸಿದ್ದರು. ಈ ಶತಕದೊಂದಿಗೆ ಜೋ ರೂಟ್ ತಮ್ಮ ಟೆಸ್ಟ್ ಶತಕಗಳ ಸಂಖ್ಯೆಯನ್ನು 32 ಕ್ಕೇರಿಸಿದ್ದಾರೆ.

1 / 6
ಇದರೊಂದಿಗೆ ಫ್ಯಾಬ್-4 ಬ್ಯಾಟರ್​ಗಳ ಪಟ್ಟಿಯಲ್ಲಿ ಮೂವರ ಶತಕಗಳ ಸಂಖ್ಯೆ ಸಮವಾಗಿದೆ. ಆದರೆ ಮತ್ತೊಂದೆಡೆ ಅಗ್ರಸ್ಥಾನದಲ್ಲಿದ್ದ ವಿರಾಟ್ ಕೊಹ್ಲಿ ಈ ಇದೀಗ 4ನೇ ಸ್ಥಾನಕ್ಕೆ ತಳ್ಳಲ್ಪಿಟ್ಟಿದ್ದಾರೆ. ಅಂದರೆ 2021ರವರೆಗೆ ಫ್ಯಾಬ್-4 ಬ್ಯಾಟರ್​ಗಳ ಪಟ್ಟಿಯಲ್ಲಿ ಕೊಹ್ಲಿ ಅತೀ ಹೆಚ್ಚು ಶತಕ ಸಿಡಿಸಿದ ಬ್ಯಾಟ್ಸ್​ಮನ್ ಎನಿಸಿಕೊಂಡಿದ್ದರು. ಇದೀಗ ಕೇನ್ ವಿಲಿಯಮ್ಸನ್, ಸ್ಟೀವ್ ಸ್ಮಿತ್, ಜೋ ರೂಟ್ ಮೊದಲ ಮೂರು ಸ್ಥಾನಗಳನ್ನು ಅಲಂಕರಿಸಿದರೆ, ಕೊಹ್ಲಿ 4ನೇ ಸ್ಥಾನದಲ್ಲಿದ್ದಾರೆ.

2 / 6
ಕೇನ್ ವಿಲಿಯಮ್ಸನ್: ನ್ಯೂಝಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಈವರೆಗೆ 100 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 176 ಇನಿಂಗ್ಸ್ ಆಡಿರುವ ಕೇನ್ 32 ಶತಕ ಹಾಗೂ 34 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಈ ಮೂಲಕ ಫ್ಯಾಬ್-4 ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದ್ದಾರೆ.

3 / 6
ಸ್ಟೀವ್ ಸ್ಮಿತ್: ಆಸ್ಟ್ರೇಲಿಯಾ ತಂಡದ ಟೆಸ್ಟ್ ಸ್ಪೆಷಲಿಸ್ಟ್ ಸ್ಟೀವ್ ಸ್ಮಿತ್ 109	ಟೆಸ್ಟ್ ಪಂದ್ಯಗಳ 195	ಇನಿಂಗ್ಸ್​ಗಳಲ್ಲಿ ಬ್ಯಾಟ್ ಬೀಸಿದ್ದಾರೆ. ಈ ವೇಳೆ 32 ಶತಕ ಹಾಗೂ 41 ಅರ್ಧಶತಕಗಳನ್ನು ಸಿಡಿಸಿದ್ದಾರೆ.

4 / 6
ಜೋ ರೂಟ್: ಇಂಗ್ಲೆಂಡ್​ ಟೆಸ್ಟ್ ತಂಡದ ಬೆನ್ನೆಲುಬು ಎಂದೇ ಗುರುತಿಸಿಕೊಂಡಿರುವ ಜೋ ರೂಟ್ ಈವರೆಗೆ 142 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 260 ಇನಿಂಗ್ಸ್ ಆಡಿರುವ ರೂಟ್ 32 ಶತಕ 62 ಅರ್ಧಶತಕಗಳನ್ನು ಬಾರಿಸಿದ್ದಾರೆ.

5 / 6
ವಿರಾಟ್ ಕೊಹ್ಲಿ: ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಈವರೆಗೆ 113 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 191 ಇನಿಂಗ್ಸ್​ಗಳಲ್ಲಿ ಬ್ಯಾಟ್ ಬೀಸಿರುವ ಕೊಹ್ಲಿ 29 ಶತಕ ಹಾಗೂ 30 ಅರ್ಧಶತಕಗಳನ್ನು ಸಿಡಿಸಿದ್ದಾರೆ.

6 / 6

Published On - 9:10 am, Tue, 23 July 24

Follow us
ಚನ್ನಪಟ್ಟಣ ಕಾರ್ಯಕರ್ತರಿಗಾಗಿ ನಿಖಿಲ್ ಸ್ಪರ್ಧಿಸಲೇಬೇಕಿತ್ತು:ಕುಮಾರಸ್ವಾಮಿ

ಶಿವಕುಮಾರ್ ಪಾದಯಾತ್ರೆ ಮಾಡಿದ್ದನ್ನು ಮಿಮಿಕ್ರಿ ಮಾಡಿ ತೋರಿಸಿದ ಯತ್ನಾಳ್

ಕೋವಿಡ್ ಸಮಯದಲ್ಲಿ ಕುಮಾರಸ್ವಾಮಿ ಮನೇಲಿ ಹೊದ್ದು ಮಲಗಿದ್ದರು: ಶಿವಕುಮಾರ್

ವಿಧಾನಸೌಧದ ಗಾರ್ಡನ್​ನಲ್ಲಿ ಬಿಯರ್ ಬಾಟಲ್ ಪತ್ತೆ

ಬೀದರ್ ಜಿಲ್ಲೆಯ ಮುಸಲ್ಮಾನರು ಕಂಡವರ ಜಮೀನು ತಮ್ಮದು ಅಂತಿದ್ದಾರೆ: ಯತ್ನಾಳ್

ಕಳಪೆ ಆಗಿ ಜೈಲು ಸೇರಿದ ಗೋಲ್ಡ್ ಸುರೇಶ್; ಈ ವಾರ ಡಬಲ್ ಶಾಕ್

ನರೇಂದ್ರ ಮೋದಿಯವರಿಗೆ ಸರಿಸಾಟಿಯಾಗುವ ನಾಯಕ ಇಂಡಿಯಾದಲ್ಲಿಲ್ಲ: ದೇವೇಗೌಡ

ದಲಿತನ ಜಮೀನು ಕುರುಬರಾಗಿರುವ ಸಿದ್ದರಾಮಯ್ಯಗೆ ಹೇಗೆ ಸೇರುತ್ತದೆ? ಪ್ರತಾಪ್

ಸಣ್ಣಪ್ಪನ ಕುಟುಂಬಸ್ಥರು ಆತನ ಸಾವನ್ನು ಖಚಿತಪಡಿಸಿದ್ದಾರೆ: ತೇಜಸ್ವೀ ಸೂರ್ಯ

‘ಬೊಗಳುವ ನಾಯಿಗೆ...’: ಹನುಮಂತನ ಹಾಡಿನ ಗುರಿ ಯಾರ ಕಡೆಗೆ?