
ಭಾರತ ಮತ್ತು ಪಾಕಿಸ್ತಾನ (India and Pakistan) ನಡುವಿನ ಹೈ ವೋಲ್ಟೇಜ್ ಪಂದ್ಯವನ್ನು ಮತ್ತೊಮ್ಮೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಅಕ್ಟೋಬರ್ 1 ರಿಂದ ಪ್ರಾರಂಭವಾಗಲಿರುವ ಮಹಿಳಾ ಏಷ್ಯಾಕಪ್‌ಗೆ (Women’s Asia Cup) ಬಾಂಗ್ಲಾದೇಶ ಆತಿಥ್ಯ ವಹಿಸುತ್ತಿದೆ. ಅಕ್ಟೋಬರ್ 15ರಂದು ಮಹಿಳೆಯರ ಏಷ್ಯಾಕಪ್ ಟೂರ್ನಿಯ ಪ್ರಶಸ್ತಿ ಸುತ್ತಿನ ಪಂದ್ಯ ನಡೆಯಲಿದ್ದು, ಆತಿಥೇಯ ಬಾಂಗ್ಲಾದೇಶ, ಭಾರತ, ಪಾಕಿಸ್ತಾನ, ಥಾಯ್ಲೆಂಡ್, ಶ್ರೀಲಂಕಾ, ಮಲೇಷ್ಯಾ, ಯುಎಇ ಸೇರಿದಂತೆ ಒಟ್ಟು 7 ತಂಡಗಳು ಈ ಟೂರ್ನಿಯಲ್ಲಿ ಭಾಗವಹಿಸಲಿವೆ. ಟೂರ್ನಿಯು ರೌಂಡ್ ರಾಬಿನ್ ಮಾದರಿಯಲ್ಲಿ (round robin format) ನಡೆಯಲಿದೆ.
ಎಲ್ಲಾ ತಂಡಗಳು ಒಟ್ಟು 6 ಪಂದ್ಯಗಳನ್ನು ಆಡಲಿವೆ. ಲೀಗ್ ಹಂತದ ಅಂತ್ಯದ ನಂತರ ಪಾಯಿಂಟ್ ಪಟ್ಟಿಯಲ್ಲಿ ಅಗ್ರ 4 ತಂಡಗಳ ನಡುವೆ ಸೆಮಿಫೈನಲ್ ಪಂದ್ಯ ನಡೆಯಲಿದೆ. ಎರಡು ಸೆಮಿಫೈನಲ್‌ಗಳಲ್ಲಿ ಗೆಲ್ಲುವ ತಂಡಗಳು ಅಕ್ಟೋಬರ್ 15 ರಂದು ನಡೆಯಲ್ಲಿರುವ ಪ್ರಶಸ್ತಿ ಸುತ್ತಿಗೆ ಎಂಟ್ರಿಕೊಡಲಿವೆ. ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಆತಿಥೇಯ ಬಾಂಗ್ಲಾದೇಶ ಮತ್ತು ಥಾಯ್ಲೆಂಡ್ ತಂಡಗಳು ಮುಖಾಮುಖಿಯಾಗಲಿವೆ. ಮತ್ತೊಂದೆಡೆ ಮೊದಲ ದಿನದ ಎರಡನೇ ಪಂದ್ಯ ಭಾರತ ಮತ್ತು ಶ್ರೀಲಂಕಾ ನಡುವೆ ನಡೆಯಲಿದೆ. ಅಕ್ಟೋಬರ್ 7 ರಂದು ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ ವೋಲ್ಟೇಜ್ ಪಂದ್ಯ ನಡೆಯಲಿದೆ.
ದಿನಾಂಕ |
ಎದುರಾಳಿ ತಂಡ |
ಸಮಯ |
| ಅಕ್ಟೋಬರ್ 1 | ಭಾರತ vs ಶ್ರೀಲಂಕಾ |
ಮಧ್ಯಾಹ್ನ 1 ಗಂಟೆಗೆ |
|
ಅಕ್ಟೋಬರ್ 3 |
ಭಾರತ vs ಮಲೇಷ್ಯಾ | ಮಧ್ಯಾಹ್ನ 1 ಗಂಟೆಗೆ |
| ಅಕ್ಟೋಬರ್ 4 | ಭಾರತ vs ಯುಎಇ |
ಮಧ್ಯಾಹ್ನ 1 ಗಂಟೆಗೆ |
|
ಅಕ್ಟೋಬರ್ 7 |
ಭಾರತ vs ಪಾಕಿಸ್ತಾನ | ಮಧ್ಯಾಹ್ನ 1 ಗಂಟೆಗೆ |
| ಅಕ್ಟೋಬರ್ 8 | ಭಾರತ vs ಬಾಂಗ್ಲಾದೇಶ |
ಮಧ್ಯಾಹ್ನ 1 ಗಂಟೆಗೆ |
|
ಅಕ್ಟೋಬರ್ 10 |
ಭಾರತ vs ಥೈಲ್ಯಾಂಡ್ |
ಮಧ್ಯಾಹ್ನ 1 ಗಂಟೆಗೆ |
2018 ರಲ್ಲಿ ಆಡಿದ ಕೊನೆಯ ಏಷ್ಯಾಕಪ್‌ನಲ್ಲಿ ಬಾಂಗ್ಲಾದೇಶದ ಎದುರು ಟೀಂ ಇಂಡಿಯಾ ವನಿತಾ ಬಳಗ ಪ್ರಶಸ್ತಿ ಪಂದ್ಯದಲ್ಲಿ ಸೋಲನ್ನು ಎದುರಿಸಬೇಕಾಯಿತು. ಇದುವರೆಗೆ ಟೀಂ ಇಂಡಿಯಾ ಟಿ20 ಸ್ವರೂಪದಲ್ಲಿ ಆಡಿರುವ 3 ಏಷ್ಯಾಕಪ್‌ನಲ್ಲಿ ಎರಡು ಬಾರಿ ಚಾಂಪಿಯನ್ ಆಗಿದ್ದರೆ, ODI ಸ್ವರೂಪದಲ್ಲಿ ನಡೆದಿರುವ ಎಲ್ಲಾ ನಾಲ್ಕು ಏಷ್ಯಾಕಪ್ ಪ್ರಶಸ್ತಿಗಳನ್ನು ಗೆದ್ದಿದೆ. ಇನ್ನು ಗಾಯದ ಸಮಸ್ಯೆಯಿಂದ ಇಂಗ್ಲೆಂಡ್ ಪ್ರವಾಸದಿಂದ ಹೊರಗುಳಿದಿದ್ದ ಜೆಮಿಮಾ ರಾಡ್ರಿಗಸ್ ಇಂಜುರಿಯಿಂದ ಚೇತರಿಸಿಕೊಂಡು ಟೀಂ ಇಂಡಿಯಾಗೆ ಮರಳಿದ್ದಾರೆ. ಜೆಮಿಮಾ ಆಗಮನದಿಂದ ಮಧ್ಯಮ ಕ್ರಮಾಂಕದಲ್ಲಿ ತಂಡ ಬಲಗೊಳ್ಳಲಿದೆ. ಅದೇ ವೇಳೆ ಏಷ್ಯಾಕಪ್ ಆರಂಭಕ್ಕೂ ಮುನ್ನವೇ ಪಾಕಿಸ್ತಾನ ದೊಡ್ಡ ಹಿನ್ನಡೆ ಅನುಭವಿಸಿದ್ದು, ಸ್ಟಾರ್ ವೇಗಿ ಫಾತಿಮಾ ಸನಾ ಗಾಯದ ಸಮಸ್ಯೆಯಿಂದ ಈ ಟೂರ್ನಿಯಿಂದ ಹೊರಗುಳಿದಿದ್ದಾರೆ.
ಮಹಿಳೆಯರ ಏಷ್ಯಾಕಪ್ 2022 ಯಾವಾಗ ಪ್ರಾರಂಭವಾಗುತ್ತದೆ?
ಅಕ್ಟೋಬರ್ 1 ರಿಂದ 15 ರವರೆಗೆ ಬಾಂಗ್ಲಾದೇಶದಲ್ಲಿ ಮಹಿಳೆಯರ ಏಷ್ಯಾಕಪ್ ನಡೆಯಲಿದೆ.
ಮಹಿಳಾ ಏಷ್ಯಾಕಪ್ ಪಂದ್ಯಗಳು ಎಲ್ಲಿ ನಡೆಯಲಿವೆ?
ಮಹಿಳೆಯರ ಏಷ್ಯಾಕಪ್ ಪಂದ್ಯಗಳು ಬಾಂಗ್ಲಾದೇಶದ ಸಿಲ್ಹೆಟ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿವೆ.
ಮಹಿಳೆಯರ ಏಷ್ಯಾಕಪ್‌ನ ನೇರ ಪ್ರಸಾರವನ್ನು ಭಾರತದಲ್ಲಿ ಯಾವ ಚಾನೆಲ್ನಲ್ಲಿ ವೀಕ್ಷಿಸಬಹುದು?
ಮಹಿಳೆಯರ ಏಷ್ಯಾಕಪ್ ಅನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರ ಮಾಡಲಾಗುವುದು
Published On - 3:00 pm, Fri, 30 September 22