AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊನೆಯಲ್ಲಿ ಎಡವಿದ ಪಾಕಿಸ್ತಾನ; ಏಷ್ಯಾಕಪ್‌ ಫೈನಲ್​ಗೇರಿದ ಶ್ರೀಲಂಕಾ

2026ರ ಮಹಿಳಾ ಏಷ್ಯಾಕಪ್ ಸೆಮಿಫೈನಲ್‌ನಲ್ಲಿ ಶ್ರೀಲಂಕಾ ಪಾಕಿಸ್ತಾನವನ್ನು ರೋಚಕವಾಗಿ ಸೋಲಿಸಿ ಫೈನಲ್‌ಗೆ ಪ್ರವೇಶಿಸಿತು. ಪಾಕಿಸ್ತಾನದ ಫಾತಿಮಾ ಸನಾ 47 ರನ್ ಗಳಿಸಿ ತಂಡಕ್ಕೆ ಸವಾಲಿನ ಮೊತ್ತ ನೀಡಿದರೂ ಸೋಲಿನಿಂದ ಪಾರಾಗಲು ಸಾಧ್ಯವಾಗಲಿಲ್ಲ. ಈಗ ಫೈನಲ್‌ನಲ್ಲಿ ಶ್ರೀಲಂಕಾ, ಭಾರತವನ್ನು ಎದುರಿಸಲಿದೆ. ಕಳೆದ ಬಾರಿಯ ಫೈನಲ್ ಸೋಲಿಗೆ ಸೇಡು ತೀರಿಸಿಕೊಳ್ಳಲು ಟೀಂ ಇಂಡಿಯಾ ಸಿದ್ಧವಾಗಿದೆ.

ಕೊನೆಯಲ್ಲಿ ಎಡವಿದ ಪಾಕಿಸ್ತಾನ; ಏಷ್ಯಾಕಪ್‌ ಫೈನಲ್​ಗೇರಿದ ಶ್ರೀಲಂಕಾ
ಭಾರತ Vs ಶ್ರೀಲಂಕಾ
ಪೃಥ್ವಿಶಂಕರ
|

Updated on:Sep 11, 2026 | 11:34 PM

Share

2026 ರ ಮಹಿಳಾ ಏಷ್ಯಾಕಪ್‌ನ ಎರಡನೇ ಸೆಮಿಫೈನಲ್ ಪಂದ್ಯ ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವೆ ನಡೆಯಿತು. ದುಬೈನ ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಶ್ರೀಲಂಕಾ ನಾಯಕಿ ಚಾಮರಿ ಅಥಪತ್ತು ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 130 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಶ್ರೀಲಂಕಾ ರೋಚಕ ಜಯ ಸಾಧಿಸುವ ಮೂಲಕ ಸತತ ಎರಡನೇ ಬಾರಿಗೆ ಫೈನಲ್​ಗೇರಿತು. ಇತ್ತ ಪಾಕಿಸ್ತಾನ ಗೆಲುವಿನಂಚಿನಲ್ಲಿ ಎಡವಿ ಫೈನಲ್ ರೇಸ್​ನಿಂದ ಹೊರಬಿದ್ದಿತು. ಇದೀಗ ಫೈನಲ್​ನಲ್ಲಿ ಭಾರತ ಹಾಗೂ ಶ್ರೀಲಂಕಾ ಮುಖಾಮುಖಿಯಾಗಲಿದ್ದು, ಕಳೆದ ಬಾರಿಯ ಫೈನಲ್ ಸೋಲಿಗೆ ಸೇಡು ತೀರಿಸಿಕೊಳ್ಳಲು ಟೀಂ ಇಂಡಿಯಾ ಸಿದ್ಧವಾಗಿದೆ.

ಪಾಕಿಸ್ತಾನಕ್ಕೆ ಕಳಪೆ ಆರಂಭ

ಈ ಪಂದ್ಯದಲ್ಲಿ, ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಕಳಪೆ ಆರಂಭ ಪಡೆಯಿತು. ಸ್ಟಾರ್ ಓಪನರ್ ಮುನೀಬಾ ಅಲಿ ಕೇವಲ 5 ರನ್‌ಗಳಿಗೆ ಔಟಾದರು. ನಂತರ 29 ರನ್‌ಗಳಿಗೆ 2 ವಿಕೆಟ್‌ ಮತ್ತು 37 ರನ್‌ಗಳಿಗೆ 3 ವಿಕೆಟ್‌ ಪತನಗೊಂಡವು. ಶಾವಲ್ ಜುಲ್ಫಿಕರ್ 24 ರನ್‌ ಗಳಿಸಿ ಪೆವಿಲಿಯನ್‌ ಸೇರಿಕೊಂಡರು. ಆಯೇಷಾ ಜಾಫರ್ ಕೂಡ ಕೇವಲ 7 ರನ್‌ಗಳ ಕೊಡುಗೆ ನೀಡಲಷ್ಟೇ ಶಕ್ತರಾದರು. ಹೀಗಾಗಿ ತಂಡವು 52 ರನ್‌ಗಳಿಗೆ 4 ವಿಕೆಟ್‌ಗಳನ್ನು ಕಳೆದುಕೊಂಡಿತು. ನಂತರ ಬಂದ ನಾಯಕಿ ಫಾತಿಮಾ ಸನಾ ತಂಡದ ಇನ್ನಿಂಗ್ಸ್ ಸ್ಥಿರಗೊಳಿಸಿದರು.

ಫಾತಿಮಾ ಸನಾ ಏಕಾಂಗಿ ಹೋರಾಟ

ಫಾತಿಮಾ ಐದನೇ ವಿಕೆಟ್‌ಗೆ ಗುಲ್ ಫಿರೋಜಾ ಅವರೊಂದಿಗೆ 40 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಗುಲ್ ಫಿರೋಜಾ 32 ಎಸೆತಗಳಲ್ಲಿ 21 ರನ್ ಗಳಿಸಿ ಔಟಾದರು. ಆದರೆ ನಾಯಕಿ ಸನಾ ಕೊನೆಯವರೆಗೂ ಆಟ ಮುಂದುವರಿಸಿ ತಂಡವನ್ನು ಉತ್ತಮ ಮತ್ತು ಸವಾಲಿನ ಮೊತ್ತಕ್ಕೆ ಕೊಂಡೊಯ್ದರು. ಅವರಿಗೆ ಆಲ್‌ರೌಂಡರ್ ತುಬಾ ಹಸನ್ ಬೆಂಬಲ ನೀಡಿದರು.

ಫಾತಿಮಾ ಸನಾ 36 ಎಸೆತಗಳಲ್ಲಿ ಅಜೇಯ 47 ರನ್ ಗಳಿಸಿದರೆ, ಹಸನ್ 10 ಎಸೆತಗಳಲ್ಲಿ ಅಜೇಯ 12 ರನ್ ಗಳಿಸಿದರು. ಶ್ರೀಲಂಕಾ ಪರ ಚಾಮರಿ ಅಟಪಟ್ಟು ಮತ್ತು ಚಾಮುದಿ ಪ್ರಬೋಧ ತಲಾ ಎರಡು ವಿಕೆಟ್ ಪಡೆದರೆ, ಸುಗಂದಿಕಾ ಕುಮಾರಿ ಒಂದು ವಿಕೆಟ್ ಪಡೆದರು.

ಶ್ರೀಲಂಕಾಕ್ಕೂ ಆರಂಭ ಉತ್ತಮವಾಗಿರಲಿಲ್ಲ

ಈ ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ತಂಡದ ಮೊತ್ತ 6 ರನ್​ ಆಗುವಷ್ಟರಲ್ಲಿ ನಾಯಕಿ ಚಮರಿ ಅಟಾಪಟು ಕೇವಲ 5 ರನ್​ಗಳಿಗೆ ವಿಕೆಟ್ ಒಪ್ಪಿಸಿದರೆ, ಆ ಬಳಿಕ ಬಂದ ಸಂಜನಾ ಕವಿಂದಿ ಮೊದಲ ಎಸೆತದಲ್ಲೇ ಗೋಲ್ಡನ್ ಡಕ್​ಗೆ ಬಲಿಯಾದರು. ಈ ಎರಡು ವಿಕೆಟ್‌ಗಳನ್ನು ಪಾಕ್ ನಾಯಕಿ ಫಾತಿಮಾ ಸನಾ ಉರುಳಿಸಿದರು. ಅಲ್ಲದೆ ತಂಡದ ಪ್ರಮುಖ 4 ವಿಕೆಟ್​​ಗಳು 33 ರನ್​ಗಳಿಗೆ ಉರುಳಿದವು.

ಕೊನೆಯಲ್ಲಿ ಎಡವಿದ ಪಾಕಿಸ್ತಾನ

ಆದರೆ ಆ ಬಳಿಕ ಜೊತೆಯಾದ ಹರ್ಷಿತಾ ಸಮರವಿಕ್ರಮ ಮತ್ತು ಕವಿಶಾ ದಿಲ್ಹಾರಿ ಅರ್ಧಶತಕದ ಜೊತೆಯಾಟವನ್ನಾಡುವ ಮೂಲಕ ತಂಡವನ್ನು ಶತಕದ ಗಡಿ ದಾಟಿಸಿದರು. ಹಾಗೆಯೇ ತಂಡವನ್ನು ಗೆಲುವಿನ ಸಮೀಪಕ್ಕೆ ಕರೆದೊಯ್ದರು. ಆದರೆ ಪಾಕ್ ನಾಯಕಿ ಸನಾ ಮಾಡಿದ 17ನೇ ಓವರ್​ನಲ್ಲಿ ಇವರಿಬ್ಬರನ್ನು ಔಟ್ ಮಾಡುವ ಮೂಲಕ ಲಂಕಾ ತಂಡಕ್ಕೆ ಆಘಾತ ನೀಡಿದರು. ಸಮರವಿಕ್ರಮ 36 ರನ್​ಗಳಿಗೆ ಔಟಾದರೆ, ಕವಿಶಾ 33 ರನ್​​ಗಳಿಗೆ ವಿಕೆಟ್ ಒಪ್ಪಿಸಿದರು. ಆದರೆ ಕೊನೆಯಲ್ಲಿ ನಿಲಾಕ್ಷಿ ಡಿ ಸಿಲ್ವಾ ಸ್ಫೋಟಕ ಬ್ಯಾಟಿಂಗ್‌ ಮೂಲಕ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:28 pm, Fri, 11 September 26

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್