AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏಷ್ಯಾಕಪ್‌ನಲ್ಲಿ ಭಾರತ- ಪಾಕಿಸ್ತಾನ್ ನಡುವೆ ಮತ್ತೊಂದು ಪಂದ್ಯ

ಮಹಿಳಾ ಟಿ20 ಏಷ್ಯಾಕಪ್ 2026ರ ಗುಂಪು ಹಂತದಲ್ಲಿ ಭಾರತ ವನಿತೆಯರ ತಂಡ ಪಾಕಿಸ್ತಾನವನ್ನು ಸೋಲಿಸಿ ಸೆಮಿಫೈನಲ್‌ಗೆ ಪ್ರವೇಶಿಸಿದೆ. ಪಾಕಿಸ್ತಾನವು ಹಾಂಗ್ ಕಾಂಗ್ ವಿರುದ್ಧ ಗೆದ್ದರೆ, ಅದು ಸೆಮಿಫೈನಲ್‌ಗೆ ಮುನ್ನಡೆಯುತ್ತದೆ. ಭಾರತ ಮತ್ತು ಪಾಕಿಸ್ತಾನ ತಂಡಗಳು ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗುವುದಿಲ್ಲ. ಆದರೆ, ಎರಡೂ ತಂಡಗಳು ತಮ್ಮ ಸೆಮಿಫೈನಲ್ ಪಂದ್ಯಗಳನ್ನು ಗೆದ್ದರೆ, ಸೆಪ್ಟೆಂಬರ್ 13ರಂದು ದುಬೈನಲ್ಲಿ ನಡೆಯುವ ಫೈನಲ್‌ನಲ್ಲಿ ಮುಖಾಮುಖಿಯಾಗುವ ಸಾಧ್ಯತೆ ಇದೆ.

ಏಷ್ಯಾಕಪ್‌ನಲ್ಲಿ ಭಾರತ- ಪಾಕಿಸ್ತಾನ್ ನಡುವೆ ಮತ್ತೊಂದು ಪಂದ್ಯ
India Vs Pakistan
ಪೃಥ್ವಿಶಂಕರ
|

Updated on: Sep 07, 2026 | 9:42 PM

Share

2026 ರ ಮಹಿಳಾ ಟಿ20 ಏಷ್ಯಾಕಪ್‌ನ ಗುಂಪು ಹಂತ ಮುಗಿಯುತ್ತಿದ್ದು, ಸೆಮಿಫೈನಲ್‌ ಸುತ್ತು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಟೀಂ ಇಂಡಿಯಾ ಈಗಾಗಲೇ ಆಡಿರುವ ಮೂರು ಪಂದ್ಯಗಳನ್ನು ಗೆದ್ದು ಸೆಮಿಫೈನಲ್‌ ಪ್ರವೇಶಿಸಿದೆ. ಈ ಗುಂಪು ಹಂತದಲ್ಲೇ ಭಾರತ ವನಿತಾ ಪಡೆ, ಪಾಕಿಸ್ತಾನವನ್ನು ಏಕಪಕ್ಷೀಯವಾಗಿ ಸೋಲಿಸಿ ತನ್ನ ಪಾರುಪತ್ಯವನ್ನು ಮುಂದುವರೆಸಿತ್ತು. ಈ ಪಂದ್ಯದಲ್ಲಿ ಭಾರತದ ಬೌಲಿಂಗ್ ಮುಂದೆ ತತ್ತರಿಸಿದ್ದ ಪಾಕಿಸ್ತಾನ 60 ರನ್​ಗಳ ಗಡಿ ಕೂಡ ದಾಟಿರಲಿಲ್ಲ. ಇದೀಗ ಮುಂದಿನ ಸುತ್ತಿನಲ್ಲೂ ಭಾರತ- ಪಾಕ್ ತಂಡಗಳು ಮುಖಾಮುಖಿಯಾಗುತ್ತವೆಯೇ ಎಂಬುದು ಅಭಿಮಾನಿಗಳ ಪ್ರಶ್ನೆಯಾಗಿದೆ. ಏಷ್ಯಾಕಪ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ಮತ್ತೊಮ್ಮೆ ಮುಖಾಮುಖಿಯಾಗುವ ಸಾಧ್ಯತೆಗಳಿವೆ. ಅದು ಯಾವಾಗ? ಹೇಗೆ ಎಂಬುದರ ವಿವರ ಇಲ್ಲಿದೆ.

ಮಹಿಳಾ ಟಿ20 ಏಷ್ಯಾ ಕಪ್‌ನಲ್ಲಿ ಪಾಕಿಸ್ತಾನದ ಮುಂದಿನ ಪಂದ್ಯ ಹಾಂಗ್ ಕಾಂಗ್ ವಿರುದ್ಧ. ಭಾರತದ ವಿರುದ್ಧ ಹೀನಾಯ ಸೋಲನ್ನು ಅನುಭವಿಸಿದ ಪಾಕಿಸ್ತಾನ ತಂಡ ಈ ಪಂದ್ಯದಲ್ಲಿ ಗೆದ್ದರೆ, ಅದು ಮಹಿಳಾ ಟಿ20 ಏಷ್ಯಾಕಪ್ 2026 ರ ಸೆಮಿಫೈನಲ್‌ಗೆ ಮುನ್ನಡೆಯುತ್ತದೆ. ಇತ್ತ ಭಾರತ ತಂಡವು ತನ್ನ ಮೂರು ಗುಂಪು ಹಂತದ ಪಂದ್ಯಗಳನ್ನು ಗೆದ್ದ ನಂತರ ಸೆಮಿಫೈನಲ್‌ನಲ್ಲಿದೆ.

ಸೆಮಿಫೈನಲ್‌ನಲ್ಲಿ ಮುಖಾಮುಖಿ?

ಈಗ ಪ್ರಶ್ನೆ ಏನೆಂದರೆ, ಭಾರತ ಮತ್ತು ಪಾಕಿಸ್ತಾನ ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗಲಿವೆಯೇ? ಎಂಬುದು. ಅದಕ್ಕೆ ಉತ್ತರ ಇಲ್ಲ. ಈ ಎರಡು ತಂಡಗಳು ಫೈನಲ್ ತಲುಪಿದರೆ ಮಾತ್ರ ಎರಡನೇ ಬಾರಿಗೆ ಮುಖಾಮುಖಿಯಾಗಲಿವೆ. ಪಾಕಿಸ್ತಾನ ಹಾಂಗ್ ಕಾಂಗ್ ತಂಡವನ್ನು ಸೋಲಿಸಿ ಸೆಮಿಫೈನಲ್ ತಲುಪಿದರೆ, ಅಲ್ಲಿ ಶ್ರೀಲಂಕಾವನ್ನು ಎದುರಿಸಲಿದೆ. ಇತ್ತ ಭಾರತೀಯ ಮಹಿಳಾ ತಂಡವು ಸೆಪ್ಟೆಂಬರ್ 8 ರಂದು ಬಾಂಗ್ಲಾದೇಶ ಮತ್ತು ಯುಎಇ ನಡುವಿನ ಪಂದ್ಯದ ವಿಜೇತರನ್ನು ಸೆಮಿಫೈನಲ್‌ನಲ್ಲಿ ಎದುರಿಸಲಿದೆ.

ಏಷ್ಯಾಕಪ್​ನಲ್ಲಿ ಟೀಂ ಇಂಡಿಯಾದ ಸೆಮಿಫೈನಲ್ ಎದುರಾಳಿ ಯಾರು?

ಫೈನಲ್‌ನಲ್ಲಿ ಮುಖಾಮುಖಿ ಸಾಧ್ಯತೆ

ಸೆಪ್ಟೆಂಬರ್ 10 ರಂದು ಮಹಿಳಾ ಟಿ20 ಏಷ್ಯಾಕಪ್‌ನ ಮೊದಲ ಸೆಮಿಫೈನಲ್‌ನಲ್ಲಿ ಭಾರತ ತಂಡ ಆಡಲಿದೆ. ಪಾಕಿಸ್ತಾನ ತಂಡವು ಹಾಂಗ್ ಕಾಂಗ್ ತಂಡವನ್ನು ಸೋಲಿಸಿದರೆ, ಸೆಪ್ಟೆಂಬರ್ 11 ರಂದು ಎರಡನೇ ಸೆಮಿಫೈನಲ್‌ನಲ್ಲಿ ಆಡಲಿದೆ. ಭಾರತ ಮತ್ತು ಪಾಕಿಸ್ತಾನ ತಂಡಗಳು ತಮ್ಮ ತಮ್ಮ ಸೆಮಿಫೈನಲ್‌ಗಳನ್ನು ಗೆದ್ದರೆ, ಸೆಪ್ಟೆಂಬರ್ 13 ರಂದು ದುಬೈನ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮಹಿಳಾ ಟಿ20 ಏಷ್ಯಾಕಪ್‌ನ ಫೈನಲ್ ಪಂದ್ಯದಲ್ಲಿ ಎದುರುಬದುರಾಗಲಿವೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us