ODI World Cup 2023: ಈ ವಿಶ್ವಕಪ್​ನಲ್ಲಿ ತಂಡಗಳನ್ನು ಮುನ್ನಡೆಸುತ್ತಿರುವ ನಾಯಕರ ಬಗ್ಗೆ ನಿಮಗೆಷ್ಟು ಗೊತ್ತು?

|

Updated on: Sep 30, 2023 | 9:58 AM

ODI World Cup 2023: ಭಾರತವು ಆತಿಥ್ಯ ವಹಿಸುತ್ತಿರುವ ಏಕದಿನ ವಿಶ್ವಕಪ್ ಇದೇ ಅಕ್ಟೋಬರ್ 5 ರಂದು ಪ್ರಾರಂಭವಾಗುತ್ತದೆ. ಮೊದಲ ಪಂದ್ಯ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವೆ ನಡೆಯಲಿದೆ. ಈ ಬಾರಿ 10 ತಂಡಗಳು ವಿಶ್ವಕಪ್ ಕಣದಲ್ಲಿದ್ದು, ಆ ಎಲ್ಲಾ 10 ತಂಡಗಳ ನಾಯಕರ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

1 / 11
ಭಾರತವು ಆತಿಥ್ಯ ವಹಿಸುತ್ತಿರುವ ಏಕದಿನ ವಿಶ್ವಕಪ್ ಇದೇ ಅಕ್ಟೋಬರ್ 5 ರಂದು ಪ್ರಾರಂಭವಾಗುತ್ತದೆ. ಮೊದಲ ಪಂದ್ಯ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವೆ ನಡೆಯಲಿದೆ. ಈ ಬಾರಿ 10 ತಂಡಗಳು ವಿಶ್ವಕಪ್ ಕಣದಲ್ಲಿದ್ದು, ಆ ಎಲ್ಲಾ 10 ತಂಡಗಳ ನಾಯಕರ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

2 / 11
ರೋಹಿತ್ ಶರ್ಮಾ: ಭಾರತ ತಂಡದ ನಾಯಕತ್ವ ವಹಿಸಿರುವ ರೋಹಿತ್ ಶರ್ಮಾ ಇದೇ ಮೊದಲ ಬಾರಿಗೆ ವಿಶ್ವಕಪ್​ನಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಲಿದ್ದಾರೆ. 36 ವರ್ಷದ ರೋಹಿತ್ 251 ಏಕದಿನ ಪಂದ್ಯಗಳಲ್ಲಿ 10112 ರನ್ ಗಳಿಸಿದ್ದಾರೆ.

3 / 11
ಪ್ಯಾಟ್ ಕಮ್ಮಿನ್ಸ್: 5 ಬಾರಿ ವಿಶ್ವಕಪ್ ಚಾಂಪಿಯನ್ ಆಗಿರುವ ಆಸ್ಟ್ರೇಲಿಯ ತಂಡವನ್ನು ಪ್ಯಾಟ್ ಕಮ್ಮಿನ್ಸ್  ಮುನ್ನಡೆಸುತ್ತಿದ್ದಾರೆ. ಕಾಂಗರೂ ತಂಡ 2015ರಲ್ಲಿ ಕೊನೆಯ ಬಾರಿ ವಿಶ್ವಕಪ್ ಗೆದ್ದಿತ್ತು. 30 ವರ್ಷದ ವೇಗದ ಬೌಲರ್ ಕಮ್ಮಿನ್ಸ್ ಇದುವರೆಗೆ 77 ಏಕದಿನ ಪಂದ್ಯಗಳನ್ನು ಆಡಿದ್ದು, ಇದರಲ್ಲಿ 126 ವಿಕೆಟ್‌ಗಳನ್ನು ಪಡೆದಿದ್ದಾರೆ.

4 / 11
ಕೇನ್ ವಿಲಿಯಮ್ಸನ್: ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಗೂ ಗೊತ್ತು. ಕಳೆದ ವಿಶ್ವಕಪ್ 2019 ರಲ್ಲಿ ನ್ಯೂಜಿಲೆಂಡ್ ಫೈನಲ್ ಪಂದ್ಯವನ್ನು ಆಡಿತ್ತು. ಆದರೆ ಇಂಗ್ಲೆಂಡ್ ವಿರುದ್ಧ ಸೋಲನುಭವಿಸಿತ್ತು. ಈ ಬಾರಿ ವಿಲಿಯಮ್ಸನ್ ತಮ್ಮ ತಂಡಕ್ಕೆ ಪ್ರಶಸ್ತಿ ಗೆಲ್ಲುವ ಉದ್ದೇಶದಿಂದ ಮೈದಾನಕ್ಕಿಳಿಯಲಿದ್ದಾರೆ. ಇಲ್ಲಿಯವರೆಗೆ ಕೇನ್ ವಿಲಿಯಮ್ಸನ್ 161 ಏಕದಿನ ಪಂದ್ಯಗಳನ್ನು ಆಡಿದ್ದು, ಇದರಲ್ಲಿ 6554 ರನ್ ಬಾರಿಸಿದ್ದಾರೆ

5 / 11
ಬಾಬರ್ ಆಝಂ: ಪಾಕಿಸ್ತಾನ ತಂಡದ ನಾಯಕತ್ವ 28ರ ಹರೆಯದ ಬಾಬರ್ ಆಜಮ್ ಕೈಯಲ್ಲಿದೆ. ಬಾಬರ್ ಸೇರಿದಂತೆ ಹೆಚ್ಚಿನ ಪಾಕಿಸ್ತಾನಿ ಆಟಗಾರರು ಮೊದಲ ಬಾರಿಗೆ ಭಾರತಕ್ಕೆ ಬಂದಿದ್ದಾರೆ. ಬಾಬರ್ ಇದುವರೆಗೆ 108 ಏಕದಿನ ಪಂದ್ಯಗಳನ್ನು ಆಡಿದ್ದು, ಇದರಲ್ಲಿ 19 ಶತಕಗಳ ಸಹಾಯದಿಂದ 5409 ರನ್ ಬಾರಿಸಿದ್ದಾರೆ.

6 / 11
ಜೋಸ್ ಬಟ್ಲರ್: ಕಳೆದ ವಿಶ್ವಕಪ್ 2019 ರ ಚಾಂಪಿಯನ್ ಇಂಗ್ಲೆಂಡ್‌ ತಂಡದ ನಾಯಕತ್ವ 33 ವರ್ಷದ ಜೋಸ್ ಬಟ್ಲರ್ ಕೈಯಲ್ಲಿದೆ. ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಬಟ್ಲರ್ ಇಲ್ಲಿಯವರೆಗೆ 169 ಏಕದಿನ ಪಂದ್ಯಗಳನ್ನು ಆಡಿದ್ದು, ಇದರಲ್ಲಿ 4823 ರನ್ ಗಳಿಸಿದ್ದಾರೆ. ಅವರ ಹೆಸರಲ್ಲಿ 11 ಶತಕಗಳೂ ಇವೆ.

7 / 11
ತೆಂಬಾ ಬಾವುಮಾ: ದಕ್ಷಿಣ ಆಫ್ರಿಕಾ ತಂಡದ ಕಮಾಂಡ್ ತೆಂಬಾ ಬಾವುಮಾ ಕೈಯಲ್ಲಿದೆ. 33ರ ಹರೆಯದ ಬಲಗೈ ಬ್ಯಾಟ್ಸ್‌ಮನ್ ಬವುಮಾ ಇದುವರೆಗೆ 30 ಏಕದಿನ ಪಂದ್ಯಗಳಲ್ಲಿ 1367 ರನ್ ಗಳಿಸಿದ್ದಾರೆ. ಬಾವುಮಾ 56 ಟೆಸ್ಟ್‌ಗಳಲ್ಲಿ 2997 ರನ್ ಮತ್ತು 36 ಟಿ20 ಪಂದ್ಯಗಳಲ್ಲಿ 670 ರನ್ ಬಾರಿಸಿದ್ದಾರೆ.

8 / 11
ಶಕೀಬ್ ಅಲ್ ಹಸನ್: ಬಾಂಗ್ಲಾದೇಶ ತಂಡದ ನಾಯಕತ್ವ ಸ್ಪಿನ್ ಆಲ್ ರೌಂಡರ್ ಶಕೀಬ್ ಅಲ್ ಹಸನ್ ಕೈಯಲ್ಲಿದೆ. ಶಕೀಬ್ ಎಡಗೈ ಆರ್ಥೊಡಾಕ್ಸ್ ಸ್ಪಿನ್ನರ್. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬರುವ ಅವರು 240 ಏಕದಿನ ಪಂದ್ಯಗಳಲ್ಲಿ 7384 ರನ್ ಗಳಿಸಿದ್ದಾರೆ. ಅಲ್ಲದೆ ಬೌಲಿಂಗ್​ನಲ್ಲಿ 308 ವಿಕೆಟ್ ಪಡೆದಿದ್ದಾರೆ.

9 / 11
ದಸುನ್ ಶನಕಾ: ಶ್ರೀಲಂಕಾ ತಂಡದ ನಾಯಕತ್ವವನ್ನು 32 ವರ್ಷದ ದಸುನ್ ಶನಕಾ ವಹಿಸಿದ್ದಾರೆ. ವೇಗದ ಬೌಲಿಂಗ್ ಆಲ್ ರೌಂಡರ್ ಶನಕ ಇಲ್ಲಿಯವರೆಗೆ 67 ಏಕದಿನ ಪಂದ್ಯಗಳನ್ನು ಆಡಿದ್ದು, ಇದರಲ್ಲಿ 1204 ರನ್ ಗಳಿಸಿದ್ದಾರೆ. ಹಾಗೆಯೇ 27 ವಿಕೆಟ್ ಪಡೆದಿದ್ದಾರೆ.

10 / 11
ಹಷ್ಮತುಲ್ಲಾ ಶಾಹಿದಿ: ಅಫ್ಘಾನಿಸ್ತಾನ ತಂಡದ ನಾಯಕತ್ವ ಹಷ್ಮತುಲ್ಲಾ ಶಾಹಿದಿ ಕೈಯಲ್ಲಿದೆ. 28 ವರ್ಷದ ಶಾಹಿದಿ ಅಗ್ರ ಕ್ರಮಾಂಕದ ಎಡಗೈ ಬ್ಯಾಟ್ಸ್‌ಮನ್. ಅವರು ಇಲ್ಲಿಯವರೆಗೆ 64 ಏಕದಿನ ಪಂದ್ಯಗಳನ್ನು ಆಡಿದ್ದು, ಇದರಲ್ಲಿ 1775 ರನ್ ಗಳಿಸಿದ್ದಾರೆ. ಶಾಹಿದ್ ಕೂಡ ಆಫ್ ಸ್ಪಿನ್ ಬೌಲಿಂಗ್ ಮಾಡುತ್ತಾರೆ.

11 / 11
ಸ್ಕಾಟ್ ಎಡ್ವರ್ಡ್ಸ್: ನೆದರ್ಲೆಂಡ್ಸ್ ತಂಡದ ನಾಯಕತ್ವವು 27 ವರ್ಷದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸ್ಕಾಟ್ ಎಡ್ವರ್ಡ್ಸ್ ಕೈಯಲ್ಲಿದೆ. ಅವರು ಇಲ್ಲಿಯವರೆಗೆ 38 ಏಕದಿನ ಪಂದ್ಯಗಳನ್ನು ಆಡಿದ್ದು, ಇದರಲ್ಲಿ 1212 ರನ್ ಗಳಿಸಿದ್ದಾರೆ.