ಏಕದಿನ ವಿಶ್ವಕಪ್ 2023 ರ ಪಂದ್ಯಾಟಗಳು 9 ಭಾಷೆಗಳಲ್ಲಿ ನೇರ ಪ್ರಸಾರವಾಗಲಿದೆ ಎಂದು ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ ತಿಳಿಸಿದೆ. ಇಂಗ್ಲಿಷ್ ಹೊರತಾಗಿ ಹಿಂದಿ, ಮರಾಠಿ, ತಮಿಳು, ತೆಲುಗು, ಕನ್ನಡ, ಬೆಂಗಾಲಿ, ಗುಜರಾತಿ ಮತ್ತು ಮಲಯಾಳಂ ಭಾಷೆಗಳ ಮೂಲಕ ವಿಶ್ವಕಪ್ ಅನ್ನು ವೀಕ್ಷಿಸಬಹುದು.
ಇದಕ್ಕಾಗಿ ಒಟ್ಟು 120 ಕಾಮೆಂಟೇಟರ್‌ಗಳನ್ನು ಈಗಾಗಲೇ ಆಯ್ಕೆ ಮಾಡಲಾಗಿದೆ. ಈ ಪಟ್ಟಿಯಲ್ಲಿ ಖ್ಯಾತ ಕ್ರಿಕೆಟಿಗರಾದ ರಿಕಿ ಪಾಂಟಿಂಗ್, ಇಯಾನ್ ಮೋರ್ಗನ್, ರವಿಶಾಸ್ತ್ರಿ, ಸುನಿಲ್ ಗವಾಸ್ಕರ್, ಶೇನ್ ವ್ಯಾಟ್ಸನ್ ಮತ್ತು ವಕಾರ್ ಯೂನಿಸ್ ಸೇರಿದಂತೆ ಹಲವು ಕಾಣಿಸಿಕೊಳ್ಳಲಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್ ಕನ್ನಡದಲ್ಲೂ ನೇರ ಪ್ರಸಾರ:
ಈ ಬಾರಿಯ ಏಕದಿನ ವಿಶ್ವಕಪ್ ಸ್ಟಾರ್ ಸ್ಪೋರ್ಟ್ಸ್ ಕನ್ನಡದಲ್ಲೂ ನೇರ ಪ್ರಸಾರವಾಗಲಿದೆ. ಇದಕ್ಕಾಗಿ ಒಟ್ಟು 14 ಕಾಮೆಂಟೇಟರ್‌ಗಳನ್ನು ಆಯ್ಕೆ ಮಾಡಲಾಗಿದೆ. ಈ ಪಟ್ಟಿಯಲ್ಲಿ ಕರ್ನಾಟಕದ ಕ್ರಿಕೆಟಿಗರುಗಳಾದ ವಿಜಯ್ ಭಾರಧ್ವಾಜ್, ಭರತ್ ಚಿಪ್ಲಿ, ವಿನಯ್ ಕುಮಾರ್, ಸುನಿಲ್ ಜೋಶಿ ಮತ್ತು ಪವನ್ ದೇಶಪಾಂಡೆ ಸೇರಿದಂತೆ ಹಲವರು ಕಾಣಿಸಿಕೊಳ್ಳಲಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್ ಕನ್ನಡದ ಕಾಮೆಂಟೇಟರ್‌ಗಳ ಪಟ್ಟಿ ಹೀಗಿದೆ:
ಮಧು ಮೈಲಂಕೋಡಿ, ಕಿರಣ್ ಶ್ರೀನಿವಾಸ, ರೂಪೇಶ್ ಶೆಟ್ಟಿ, ವಿಜಯ್ ಭಾರದ್ವಾಜ್, ಭರತ್ ಚಿಪ್ಲಿ, ಶ್ರೀನಿವಾಸ ಮೂರ್ತಿ ಪಿ, ಪವನ್ ದೇಶಪಾಂಡೆ, ಸುನಿಲ್ ಜೋಶಿ, ಅಖಿಲ್ ಬಾಲಚಂದ್ರ, ಜಿಆರ್ವಿ, ಜಿಕೆ ಅನಿಲ್ ಕುಮಾರ್, ವಿನಯ್ ಕುಮಾರ್, ಸುಮೇಶ್ ಗೋಣಿ, ಶಶಾಂಕ್ ಸುರೇಶ್.
ಹಾಟ್ಸ್ಟಾರ್ನಲ್ಲಿ ಉಚಿತ:
ಈ ಬಾರಿಯ ಏಕದಿನ ವಿಶ್ವಕಪ್ ಅನ್ನು ಡಿಸ್ನಿ ಹಾಟ್ಸ್ಟಾರ್ ಮೊಬೈಲ್ ಆ್ಯಪ್ನಲ್ಲಿ ಉಚಿತವಾಗಿ ವೀಕ್ಷಿಸಬಹುದು. ಈ ಅವಕಾಶ ಕೇವಲ ಮೊಬೈಲ್ ಅಪ್ಲಿಕೇಶನ್ಗೆ ಮಾತ್ರ ಸೀಮಿತವಾಗಿದೆ. ಅಂದರೆ ಹಾಟ್ಸ್ಟಾರ್ ವೆಬ್ಸೈಟ್ ಮೂಲಕ ವೀಕ್ಷಿಸಲು ಚಂದಾದಾರಿಕೆ ಪಡೆಯಬೇಕಾಗುತ್ತದೆ.
9 languages 🗣️
120+ Starcast ✨
1 World Cup 🏆Elevate your experience of the #GreatestGlory with exclusive insights and commentary all tournament long, in the #WorldCupOnStar! 🤩
Don’t miss #CWC2023 on Star Sports Network! pic.twitter.com/e2cCAcArmc
— Star Sports (@StarSportsIndia) October 1, 2023
ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಅಕ್ಟೋಬರ್ 5 ರಿಂದ ಶುರುವಾಗಲಿದೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಲಿವೆ. ಇನ್ನು ಭಾರತ ತಂಡವು ಅಕ್ಟೋಬರ್ 8 ರಂದು ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿಯುವ ಮೂಲಕ ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಈ ವಿಶ್ವಕಪ್ನ ಸಂಪೂರ್ಣ ವೇಳಾಪಟ್ಟಿ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ.