ಈ ಬಾರಿಯ ವಿಶ್ವಕಪ್ನಲ್ಲಿ ಭಾರತ-ಆಸ್ಟ್ರೇಲಿಯಾ ನಡುವೆ ಶತಕಗಳ ಪೈಪೋಟಿ
ICC World Cup 2023: ಮೊದಲ ಪಂದ್ಯದಿಂದಲೇ ಉಭಯ ತಂಡಗಳ ನಡುವೆ ಶತಕದ ವಿಭಿನ್ನ ಪೈಪೋಟಿಯನ್ನು ನಿರೀಕ್ಷಿಸಬಹುದು. ಏಕೆಂದರೆ ಅಕ್ಟೋಬರ್ 8 ರಂದು ನಡೆಯಲಿರುವ ಪಂದ್ಯದಲ್ಲಿ ಆಸ್ಟ್ರೇಲಿಯಾ ಹಾಗೂ ಭಾರತ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ಆಸೀಸ್ ಬ್ಯಾಟರ್ ಶತಕ ಸಿಡಿಸಿದರೆ ಭಾರತದ ವಿಶ್ವಕಪ್ ಸೆಂಚುರಿ ದಾಖಲೆಯನ್ನು ಸರಿಗಟ್ಟಬಹುದು.
1975 ರಲ್ಲಿ ಶುರುವಾದ ಏಕದಿನ ವಿಶ್ವಕಪ್ ಇದೀಗ 13ನೇ ಆವೃತ್ತಿಗೆ ಬಂದು ನಿಂತಿದೆ. ಈ ಹದಿಮೂರು ಆವೃತ್ತಿಗಳಲ್ಲಿ ಭಾರತೀಯ ಬ್ಯಾಟರ್ಗಳು ಪರಾಕ್ರಮ ಮರೆದಿದ್ದಾರೆ. ಇದಕ್ಕೆ ಸಾಕ್ಷಿಯೇ ಟೀಮ್ ಇಂಡಿಯಾ ಬ್ಯಾಟರ್ಗಳು ಬಾರಿಸಿದ ಶತಕಗಳ ಸಂಖ್ಯೆ. ಹೌದು, ಏಕದಿನ ವಿಶ್ವಕಪ್ನಲ್ಲಿ ಅತ್ಯಧಿಕ ಸೆಂಚುರಿ ಸಿಡಿಸಿದ ದಾಖಲೆ ಪಟ್ಟಿಯಲ್ಲಿ ಭಾರತ ಅಗ್ರಸ್ಥಾನದಲ್ಲಿದೆ. ಟೀಮ್ ಇಂಡಿಯಾ ಆಟಗಾರರು ಕಳೆದ 12 ವಿಶ್ವಕಪ್ ಆವೃತ್ತಿಗಳಲ್ಲಿ ಒಟ್ಟು 32 ಶತಕಗಳನ್ನು ಬಾರಿಸಿ ಇತಿಹಾಸ ನಿರ್ಮಿಸಿದ್ದಾರೆ.
ಆದರೆ ಈ ದಾಖಲೆ ಶಾಶ್ವತವಾಗಿ ಉಳಿಯುತ್ತದೆಯಾ ಎಂಬುದೇ ಪ್ರಶ್ನೆ. ಏಕೆಂದರೆ ವರ್ಲ್ಡ್ಕಪ್ ಸೆಂಚುರಿ ದಾಖಲೆಗಳ ಪಟ್ಟಿಯಲ್ಲಿ ಆಸ್ಟ್ರೇಲಿಯಾ 2ನೇ ಸ್ಥಾನದಲ್ಲಿದೆ. ಕಳೆದ 12 ಆವೃತ್ತಿಗಳಲ್ಲಿ ಆಸೀಸ್ ಬ್ಯಾಟರ್ಗಳು ಒಟ್ಟು 31 ಶತಕಗಳನ್ನು ಸಿಡಿಸಿದ್ದಾರೆ. ಅಂದರೆ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ಕೇವಲ 1 ಶತಕದ ಅಂತರವಿದೆ.
ಹೀಗಾಗಿ ಮೊದಲ ಪಂದ್ಯದಿಂದಲೇ ಉಭಯ ತಂಡಗಳ ನಡುವೆ ಶತಕದ ವಿಭಿನ್ನ ಪೈಪೋಟಿಯನ್ನು ನಿರೀಕ್ಷಿಸಬಹುದು. ಏಕೆಂದರೆ ಅಕ್ಟೋಬರ್ 8 ರಂದು ನಡೆಯಲಿರುವ ಪಂದ್ಯದಲ್ಲಿ ಆಸ್ಟ್ರೇಲಿಯಾ ಹಾಗೂ ಭಾರತ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ಆಸೀಸ್ ಬ್ಯಾಟರ್ ಶತಕ ಸಿಡಿಸಿದರೆ ಭಾರತದ ವಿಶ್ವಕಪ್ ಸೆಂಚುರಿ ದಾಖಲೆಯನ್ನು ಸರಿಗಟ್ಟಬಹುದು.
ಇದೇ ವೇಳೆ ಟೀಮ್ ಇಂಡಿಯಾ ಬ್ಯಾಟರ್ಗಳು ಶತಕ ಸಿಡಿಸಿದರೆ ಸೆಂಚುರಿ ದಾಖಲೆಗಳ ಅಂತರ ಮತ್ತಷ್ಟು ಹೆಚ್ಚಾಗಲಿದೆ. ಹೀಗಾಗಿ ಈ ಬಾರಿಯ ವಿಶ್ವಕಪ್ ಮೂಲಕ ಶತಕಗಳ ಸರದಾರರು ಎನಿಸಿಕೊಳ್ಳುವ ತಂಡ ಯಾವುದು ಎಂಬುದನ್ನು ಕಾದು ನೋಡೋಣ.
ಏಕದಿನ ವಿಶ್ವಕಪ್ನಲ್ಲಿ ಅತ್ಯಧಿಕ ಶತಕ ಸಿಡಿಸಿದ ತಂಡಗಳ ಪಟ್ಟಿ ಈ ಕೆಳಗಿನಂತಿದೆ…
- ಭಾರತ- 32 ಶತಕಗಳು
- ಆಸ್ಟ್ರೇಲಿಯಾ – 31 ಶತಕಗಳು
- ಶ್ರೀಲಂಕಾ – 25 ಶತಕಗಳು
- ವೆಸ್ಟ್ ಇಂಡೀಸ್ – 19 ಶತಕಗಳು
- ಇಂಗ್ಲೆಂಡ್ – 18 ಶತಕಗಳು
- ನ್ಯೂಝಿಲೆಂಡ್ – 17 ಶತಕಗಳು
- ಪಾಕಿಸ್ತಾನ್ – 16 ಶತಕಗಳು
- ಸೌತ್ ಆಫ್ರಿಕಾ – 15 ಶತಕಗಳು
- ಝಿಂಬಾಬ್ವೆ – 6 ಶತಕಗಳು
- ಬಾಂಗ್ಲಾದೇಶ್ – 5 ಶತಕಗಳು
- ನೆದರ್ಲೆಂಡ್ಸ್ – 5 ಶತಕಗಳು
ಏಕದಿನ ವಿಶ್ವಕಪ್ಗೆ ಉಭಯ ತಂಡಗಳು ಹೀಗಿವೆ:
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪ ನಾಯಕ), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಆರ್. ಅಶ್ವಿನ್, ಕುಲ್ದೀಪ್ ಯಾದವ್, ಜಸ್ಪ್ರಿತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್.
ಇದನ್ನೂ ಓದಿ: ಏಕದಿನ ವಿಶ್ವಕಪ್ನ ಅತ್ಯಂತ ಯಶಸ್ವಿ ನಾಯಕ ಯಾರು ಗೊತ್ತಾ?