World Cup 2023: 2ನೇ ಅಭ್ಯಾಸ ಪಂದ್ಯಕ್ಕಾಗಿ ತಿರುವನಂತಪುರಕ್ಕೆ ಹಾರಿದ ಟೀಂ ಇಂಡಿಯಾ

World Cup 2023: ಗುವಾಹಟಿಯಲ್ಲಿ ನಡೆಯಬೇಕಿದ್ದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಅಭ್ಯಾಸ ಪಂದ್ಯ ಮಳೆಯಿಂದಾಗಿ ರದ್ದಾಯಿತು. ಟೀಂ ಇಂಡಿಯಾದ ಮೊದಲ ಅಭ್ಯಾಸ ಪಂದ್ಯ ಇದಾಗಿದ್ದು, ಇದೀಗ ನೆದರ್ಲೆಂಡ್ಸ್ ವಿರುದ್ಧದ ಎರಡನೇ ಅಭ್ಯಾಸ ಪಂದ್ಯಕ್ಕಾಗಿ ರೋಹಿತ್ ಪಡೆ ಇಂದು ಗುವಾಹಟಿಯಿಂದ ತಿರುವನಂತಪುರಕ್ಕೆ ಹಾರಿದೆ.

World Cup 2023: 2ನೇ ಅಭ್ಯಾಸ ಪಂದ್ಯಕ್ಕಾಗಿ ತಿರುವನಂತಪುರಕ್ಕೆ ಹಾರಿದ ಟೀಂ ಇಂಡಿಯಾ
ಟೀಂ ಇಂಡಿಯಾ
Follow us
ಪೃಥ್ವಿಶಂಕರ
|

Updated on: Oct 01, 2023 | 1:10 PM

ಗುವಾಹಟಿಯಲ್ಲಿ ನಡೆಯಬೇಕಿದ್ದ ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ವಿಶ್ವಕಪ್ ಅಭ್ಯಾಸ ಪಂದ್ಯ ಮಳೆಯಿಂದಾಗಿ ರದ್ದಾಯಿತು. ಟೀಂ ಇಂಡಿಯಾದ (Team India) ಮೊದಲ ಅಭ್ಯಾಸ ಪಂದ್ಯ ಇದಾಗಿದ್ದು, ಇದೀಗ ನೆದರ್ಲೆಂಡ್ಸ್ ವಿರುದ್ಧದ ಎರಡನೇ ಅಭ್ಯಾಸ ಪಂದ್ಯಕ್ಕಾಗಿ ರೋಹಿತ್ (Rohit Sharma) ಪಡೆ ಇಂದು ಗುವಾಹಟಿಯಿಂದ ತಿರುವನಂತಪುರಕ್ಕೆ ಹಾರಿದೆ. ಇನ್ನು ಉಭಯ ತಂಡಗಳ ನಡುವೆ ಇದೇ ಮಂಗಳವಾರ ಅಂದರೆ ಅಕ್ಟೋಬರ್ 3 ರಂದು ತಿರುವನಂತಪುರದ ಗ್ರೀನ್‌ಫೀಲ್ಡ್ ಸ್ಟೇಡಿಯಂನಲ್ಲಿ (Greenfield Stadium in Trivandrum) ನಡೆಯಲ್ಲಿವೆ. ದುರದೃಷ್ಟವಶಾತ್, ಇಲ್ಲಿ ನಡೆಯಬೇಕಿದ್ದ ಎರಡೂ ತಂಡಗಳ ಅಭ್ಯಾಸ ಪಂದ್ಯಗಳು ಮಳೆಗಾಹುತಿಯಾಗಿವೆ. ಹೀಗಾಗಿ ಈ ಪಂದ್ಯಕ್ಕೂ ಮಳೆ ಭೀತಿ ಎದುರಾಗಿದೆ.

ಇನ್ನು ಗುವಾಹಟಿಯಲ್ಲಿ ಇಡೀ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಕೇವಲ ಒಂದು ಅಭ್ಯಾಸ ಪಂದ್ಯವನ್ನು ಮಾತ್ರ ಆಡಬೇಕಾಗಿತ್ತು. ಆದರೆ ಮಳೆಯು ಅಭಿಮಾನಿಗಳಿಂದ ಆ ಅವಕಾಶವನ್ನು ಕಸಿದುಕೊಂಡಿತು. ಈ ಪಂದ್ಯಕ್ಕೆ ಒಂದು ದಿನ ಮೊದಲು ಶುಕ್ರವಾರ ಇದೇ ಮೈದಾನದಲ್ಲಿ ಶ್ರೀಲಂಕಾ ಮತ್ತು ಬಾಂಗ್ಲಾದೇಶ ನಡುವೆ ಪಂದ್ಯ ನಡೆದಿದ್ದು, ಎಲ್ಲೂ ಮಳೆ ಕಾಣದೆ ಇಡೀ ಪಂದ್ಯ ನಡೆದಿತ್ತು.

World Cup 2023: ಮಾಜಿ ದಂತಕಥೆಗಳ ಪ್ರಕಾರ ವಿಶ್ವಕಪ್ ಫೈನಲ್​ಗೇರುವ ಎರಡು ತಂಡಗಳಿವು

ಟಾಸ್ ನಂತರ ಭಾರೀ ಮಳೆ

ಹೀಗಾಗಿ ಟೀಂ ಇಂಡಿಯಾ ಆಡುವುದನ್ನು ನೋಡುವ ಅವಕಾಶ ಸಿಗುತ್ತದೆ ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು ಆದರೆ ಅದು ಸಾಧ್ಯವಾಗಲಿಲ್ಲ. ಈ ಪಂದ್ಯದ ಟಾಸ್ ಗೆದ್ದ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದರು. ಆದರೆ ಪಂದ್ಯ ಆರಂಭಕ್ಕೆ 5 ನಿಮಿಷಗಳ ಮೊದಲು ಮಳೆ ನಿಲ್ಲದೆ ಸುರಿಯಲಾರಂಭಿಸಿತು. ಮಳೆಯು ಎಷ್ಟು ಜೋರಾಗಿತ್ತೆಂದರೆ, ಸುಮಾರು ಒಂದೂವರೆ ಗಂಟೆಗಳ ಕಾಲ ಕಾದ ನಂತರ, ಭಾರತ ಮತ್ತು ಇಂಗ್ಲೆಂಡ್ ತಂಡಗಳು ಕ್ರೀಡಾಂಗಣದಿಂದ ತಮ್ಮ ಹೋಟೆಲ್‌ಗೆ ಹಿಂತಿರುಗಿದವು. ಆದರೆ ಅಂಪೈರ್‌ಗಳು ಎರಡು ಗಂಟೆಗಳ ನಂತರ ಪಂದ್ಯವನ್ನು ರದ್ದುಗೊಳಿಸುವುದಾಗಿ ಘೋಷಿಸಿದರು.

ಮುಂದಿನ ಪಂದ್ಯದಲ್ಲೂ ಮಳೆಭೀತಿ?

ಇನ್ನು ಅಕ್ಟೋಬರ್ 3 ರಂದು ತಿರುವನಂತಪುರಂನಲ್ಲಿ ನೆದರ್ಲ್ಯಾಂಡ್ ವಿರುದ್ಧ ನಡೆಯಲ್ಲಿರುವ ಎರಡನೇ ಅಭ್ಯಾಸ ಪಂದ್ಯಕ್ಕೂ ಮಳೆ ಭೀತಿ ಎದುರಾಗಿದೆ. ತಿರುವನಂತಪುರಂನಲ್ಲಿ ಕೆಲವು ದಿನಗಳಿಂದ ಮಳೆಯಾಗುತ್ತಿರುವ ಕಾರಣ ಈ ಪಂದ್ಯಕ್ಕೂ ಮಳೆ ಅಡ್ಡಿಪಡಿಸುವ ಸಾಧ್ಯತೆಗಳು ಹೆಚ್ಚಿವೆ. ಈ ಮೈದಾನದಲ್ಲಿ ಶುಕ್ರವಾರದಂದು ನಡೆಯಬೇಕಿದ್ದ ದಕ್ಷಿಣ ಆಫ್ರಿಕಾ ಮತ್ತು ಅಫ್ಘಾನಿಸ್ತಾನ ನಡುವಿನ ಪಂದ್ಯ ಆರಂಭವಾಗದೆ ರದ್ದಾಗಿದ್ದರೆ, ಆಸ್ಟ್ರೇಲಿಯಾ ಮತ್ತು ನೆದರ್ಲೆಂಡ್ಸ್ ನಡುವಿನ ಪಂದ್ಯವೂ ಹಾಗೆಯೇ ರದ್ದಾಯಿತು. ಅಭ್ಯಾಸದ ವಿಷಯಕ್ಕೆ ಬಂದರೆ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಕೆಲವು ದಿನಗಳ ಹಿಂದೆಯಷ್ಟೇ ಏಕದಿನ ಕ್ರಿಕೆಟ್ ಆಡುತ್ತಿದ್ದವು. ಹೀಗಿರುವಾಗ ಈ ಪಂದ್ಯ ರದ್ದಾದ ಪರಿಣಾಮ ಇಬ್ಬರಿಗೂ ಹೆಚ್ಚು ತೊಂದರೆಯಾಗದು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ