ಭಾರತ-ನೆದರ್ಲೆಂಡ್ಸ್ ತಂಡಗಳ ಮುಖಾಮುಖಿ ಈ ಹಿಂದೆ ಹೇಗಿತ್ತು?: ಯಾರಿಗೆ ಜಯ?

India vs Netherlands Head to Head: ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಭಾರತ-ನೆದರ್ಲೆಂಡ್ಸ್ ತಂಡಗಳು ಎರಡು ಬಾರಿ ಮಾತ್ರ ಮುಖಾಮುಖಿಯಾಗಿವೆ. 2011 ರ ವಿಶ್ವಕಪ್ ವಿಜೇತ ಅಭಿಯಾನದಲ್ಲಿ ಭಾರತವು ನೆದರ್ಲೆಂಡ್ಸ್ ಅನ್ನು ಕೊನೆಯದಾಗಿ ಎದುರಿಸಿತ್ತು. ಇನ್ನು ಭಾರತ ಮತ್ತು ನೆದರ್ಲೆಂಡ್ಸ್ ಭಾರತದಲ್ಲಿ ಒಮ್ಮೆ ಮಾತ್ರ ಮುಖಾಮುಖಿ ಆಗಿದೆ.

ಭಾರತ-ನೆದರ್ಲೆಂಡ್ಸ್ ತಂಡಗಳ ಮುಖಾಮುಖಿ ಈ ಹಿಂದೆ ಹೇಗಿತ್ತು?: ಯಾರಿಗೆ ಜಯ?
IND vs NED Head to Head
Follow us
Vinay Bhat
|

Updated on:Oct 01, 2023 | 12:17 PM

ಐಸಿಸಿ ಏಕದಿನ ವಿಶ್ವಕಪ್ (ICC ODI World Cup) ಟೂರ್ನಿಗೆ ಅಕ್ಟೋಬರ್ 5 ರಂದು ಚಾಲನೆ ಸಿಗಲಿದೆ. ಈಗಾಗಲೇ ಎಲ್ಲ ತಂಡಗಳು ಸಕಲ ಸಿದ್ದತೆ ನಡೆಸುತ್ತಿದ್ದು, ಅಭ್ಯಾಸ ಪಂದ್ಯಗಳನ್ನು ಆಡುತ್ತಿದೆ. ಅಕ್ಟೋಬರ್ 3 ರಂದು ನಡೆಯಲಿರುವ 9 ನೇ ಅಭ್ಯಾಸ ಪಂದ್ಯದಲ್ಲಿ ಭಾರತವು ತಿರುವನಂತಪುರಂನ ಗ್ರೀನ್‌ಫೀಲ್ಡ್ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನೆದರ್ಲೆಂಡ್ಸ್ ತಂಡವನ್ನು ಎದುರಿಸಲಿದೆ. ಹಾಗಾದರೆ, 50-ಓವರ್​ಗಳ ಸ್ವರೂಪದ ಮುಖಾಮುಖಿಯಲ್ಲಿ ಉಭಯ ತಂಡಗಳು ಎಷ್ಟು ಪಂದ್ಯ ಜಯಿಸಿದೆ ಎಂಬುದನ್ನು ನೋಡೋಣ.

ಭಾರತ-ನೆದರ್ಲೆಂಡ್ಸ್ ಹೆಡ್ ಟು ಹೆಡ್

  • ಆಡಿದ ಪಂದ್ಯಗಳು – 2
  • ಗೆದ್ದ ಪಂದ್ಯಗಳು: ಭಾರತ – 2
  • ಗೆದ್ದ ಪಂದ್ಯಗಳು: ನೆದರ್ಲೆಂಡ್ಸ್ – 0 –
  • ಯಾವುದೇ ಫಲಿತಾಂಶವಿಲ್ಲ –
  • ಗೆಲುವು % (ಭಾರತ) – 100.00%
  • ಗೆಲುವು % (ನೆದರ್ಲೆಂಡ್ಸ್) – 00.00%

ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಉಭಯ ತಂಡಗಳು ಎರಡು ಬಾರಿ ಮಾತ್ರ ಮುಖಾಮುಖಿಯಾಗಿವೆ. 2011 ರ ವಿಶ್ವಕಪ್ ವಿಜೇತ ಅಭಿಯಾನದಲ್ಲಿ ಭಾರತವು ನೆದರ್ಲೆಂಡ್ಸ್ ಅನ್ನು ಕೊನೆಯದಾಗಿ ಎದುರಿಸಿತ್ತು. ಇನ್ನು ಭಾರತ ಮತ್ತು ನೆದರ್ಲೆಂಡ್ಸ್ ಭಾರತದಲ್ಲಿ ಒಮ್ಮೆ ಮಾತ್ರ ಮುಖಾಮುಖಿ ಆಗಿದೆ. ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ (ಹಿಂದೆ ಫಿರೋಜ್ ಷಾ ಕೋಟ್ಲಾ ಎಂದು ಕರೆಯಲಾಗುತ್ತಿತ್ತು) ನಡೆದ ಪಂದ್ಯದಲ್ಲಿ ಭಾರತವು 5 ವಿಕೆಟ್‌ಗಳಿಂದ ಗೆದ್ದಿತ್ತು.

ಏಕದಿನ ವಿಶ್ವಕಪ್​ನಲ್ಲಿ ಹಲವು ವಿಶ್ವ ದಾಖಲೆ ಸೃಷ್ಟಿಸಲಿದ್ದಾರೆ ಹಿಟ್​ಮ್ಯಾನ್ ರೋಹಿತ್..!

ಇದನ್ನೂ ಓದಿ
Image
ಈ 9 ತಂಡಗಳು ಏಕದಿನ ವಿಶ್ವಕಪ್​ನಲ್ಲಿ ಒಮ್ಮೆಯೂ ಭಾರತವನ್ನು ಸೋಲಿಸಿಲ್ಲ..!
Image
2 ದಿನಗಳಲ್ಲಿ 3 ಪಂದ್ಯಗಳು ಮಳೆಗಾಹುತಿ; ವಿಶ್ವಕಪ್​ಗೂ ವರುಣನ ಅವಕೃಪೆ?
Image
ಈ ವಿಶ್ವಕಪ್​ನಲ್ಲಿ ರೋಹಿತ್ ಪಡೆ ಸೃಷ್ಟಿಸಬಹುದಾದ ಹಲವು ದಾಖಲೆಗಳಿವು
Image
ಭಾರತದ ಎರಡನೇ ಅಭ್ಯಾಸ ಪಂದ್ಯ ಯಾವಾಗ?, ಎದುರಾಳಿ ಯಾರು?

ಮೊದಲ ಅಭ್ಯಾಸ ಪಂದ್ಯ ರದ್ದು:

ಗುವಾಹಟಿಯ ಬರ್ಸಾಪರ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಯೋಜಿಸಿದ್ದ ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೊದಲ ಅಭ್ಯಾಸ ಪಂದ್ಯದ ಟಾಸ್ ಪ್ರಕ್ರಿಯೆ ನಡೆದ ಬಳಿಕ ಮಳೆ ಸುರಿಯಿತು. ಎಷ್ಟು ಹೊತ್ತು ಕಾದರೂ ಮಳೆ ನಿಲ್ಲದ ಕಾರಣ ಬಳಿಕ ಪಂದ್ಯವನ್ನು ರದ್ದು ಮಾಡಲಾಯಿತು. ಇದೀಗ ಟೀಮ್ ಇಂಡಿಯಾ ಅಕ್ಟೋಬರ್ 3 ಮಂಗಳವಾರದಂದು ತಿರುವನಂತಪುರಂನ ಗ್ರೀನ್ ಫೀಲ್ಡ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನೆದರ್ಲೆಂಡ್ಸ್ ವಿರುದ್ಧ ಕೊನೆಯ ಅಭ್ಯಾಸ ಪಂದ್ಯ ಆಯೋಜಿಸಲಾಗಿದೆ.

ಭಾರತ-ನೆದರ್ಲೆಂಡ್ಸ್ ನಡುವಿನ ಅಭ್ಯಾಸ ಪಂದ್ಯವು ಮಧ್ಯಾಹ್ನ 2 ಗಂಟೆಗೆ ಶುರುವಾಗಲಿದೆ. ಸ್ಟಾರ್ ಸ್ಪೋರ್ಟ್ಸ್ ಚಾನೆಲ್‌ಗಳಲ್ಲಿ ನೇರ ಪ್ರಸಾರ ವೀಕ್ಷಿಸಬಹುದು. ಹಾಗೆಯೆ ಹಾಟ್‌ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮ್ ಇರಲಿದೆ.

2023ರ ವಿಶ್ವಕಪ್‌ಗೆ ಭಾರತ ತಂಡ: ರೋಹಿತ್ ಶರ್ಮಾ, ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ (ಉಪ ನಾಯಕ), ಶಾರ್ದೂಲ್ ಠಾಕೂರ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್.

2023ರ ವಿಶ್ವಕಪ್‌ಗೆ ನೆದರ್ಲೆಂಡ್ಸ್ ತಂಡ: ವಿಕ್ರಮ್‌ಜಿತ್ ಸಿಂಗ್ , ಮ್ಯಾಕ್ಸ್ ಓಡೌಡ್ , ವೆಸ್ಲಿ ಬ್ಯಾರೆಸಿ , ಸ್ಕಾಟ್ ಎಡ್ವರ್ಡ್ಸ್ (ನಾಯಕ) , ಶರೀಜ್ ಅಹ್ಮದ್ , ಆರ್ಯನ್ ದತ್ , ರೋಲೋಫ್ ವ್ಯಾನ್ ಡೆರ್ ಮೆರ್ವೆ , ತೇಜಾ ನಿಡಮನೂರು , ಪಾಲ್ ವಾನ್ ಮೀಕೆರೆನ್, ಲೋಗನ್ ವ್ಯಾನ್ ಬೀಕ್ , ರಿಯಾನ್ ಕ್ಲೈನ್ , ಸೈಬ್ರಂಡ್ ಎಂಗೆಲ್​ಝೆಕ್‌ಬ್ರೆಚ್ , ಕೊಲಿನ್ ಅಕರ್ಮನ್ , ಸಕಿದ್ ಝಲ್ಫಿಕರ್ , ಬಾಸ್ ಡಿ ಲೀಡ್.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:17 pm, Sun, 1 October 23

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?