WPL 2023: ಮಹಿಳಾ ಪ್ರೀಮಿಯರ್ ಲೀಗ್​ಗೆ ಒಂದೇ ದಿನ ಬಾಕಿ: ಪಂದ್ಯ ಎಷ್ಟು ಗಂಟೆಗೆ ಆರಂಭ?

|

Updated on: Mar 03, 2023 | 10:31 AM

Women’s Premier League: ಮಾರ್ಚ್ 4 ರಂದು ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಲಿದೆ. ಆದರೆ, ಈ ಪಂದ್ಯಕ್ಕೂ ಮುನ್ನ ಸಂಜೆ 5:30 ರಿಂದ ಉದ್ಘಾಟನಾ ಸಮಾರಂಭ ನಡೆಯಲಿದೆ.

WPL 2023: ಮಹಿಳಾ ಪ್ರೀಮಿಯರ್ ಲೀಗ್​ಗೆ ಒಂದೇ ದಿನ ಬಾಕಿ: ಪಂದ್ಯ ಎಷ್ಟು ಗಂಟೆಗೆ ಆರಂಭ?
WPL 2023
Follow us on

ಚೊಚ್ಚಲ ಆವೃತ್ತಿಯ ಬಹುನಿರೀಕ್ಷಿತ ಮಹಿಳಾ ಪ್ರೀಮಿಯರ್ ಲೀಗ್ (WPL 2023) ಆರಂಭಕ್ಕೆ ಒಂದು ದಿನವಷ್ಟೇ ಬಾಕಿಯಿದೆ. ಮಾರ್ಚ್ 4 ರಂದು ನಾಳೆ ಈ ಮಹತ್ವದ ಟೂರ್ನಿಗೆ ಚಾಲನೆ ಸಿಗಲಿದ್ದು ಮಾರ್ಚ್ 26 ರವರೆಗೆ ಏರ್ಪಡಿಸಲಾಗಿದೆ. ಮೊದಲ ಆವೃತ್ತಿಯ ಟೂರ್ನಿಯಲ್ಲಿ ಐದು ಫ್ರಾಂಚೈಸಿಗಳು ಒಂದು ಕಪ್​ಗಾಗಿ ಪೈಪೋಟಿ ನಡೆಸಲಿದೆ. ಡೆಲ್ಲಿ ಕ್ಯಾಪಿಟಲ್ಸ್‌, ಗುಜರಾತ್‌ ಜಯಂಟ್ಸ್‌, ಮುಂಬೈ ಇಂಡಿಯನ್ಸ್‌ (MI), ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ಮತ್ತು ಯು.ಪಿ ವಾರಿಯರ್ಸ್‌ ಹೀಗೆ ಐದು ತಂಡಗಳ ನಡುವೆ ಪಂದ್ಯಗಳು ನಡೆಯಲಿದೆ. ಈಗಾಗಲೇ ಎಲ್ಲ ತಂಡಗಳ ಆಟಗಾರ್ತಿಯರು ತಮ್ಮ ತಮ್ಮ ಫ್ರಾಂಚೈಸಿ ಸೇರಿಕೊಂಡಿದ್ದು ಭರ್ಜರಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ.

ಮಾರ್ಚ್ 4 ರಂದು ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಲಿದೆ. ಆದರೆ, ಈ ಪಂದ್ಯಕ್ಕೂ ಮುನ್ನ ಸಂಜೆ 5:30 ರಿಂದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಈ ಸಮಾರಂಭದಲ್ಲಿ ಬಾಲಿವುಡ್ ನಟಿಯರಾದ ಕಿಯಾರಾ ಅಡ್ವಾಣಿ ಮತ್ತು ಕೃತಿ ಸನೋನ್ ಅವರು ಪ್ರದರ್ಶನ ನೀಡಲಿದ್ದಾರೆ. ಜೊತೆಗೆ ಜನಪ್ರಿಯ ಪಂಜಾಬಿ ಗಾಯಕ ಎಪಿ ಧಿಲ್ಲೋನ್ ತಮ್ಮ ಹಾಡುಗಳ ಮೂಲಕ ಅಭಿಮಾನಿಗಳನ್ನು ರಂಜಿಸಲಿದ್ದಾರೆ.

ಟೂರ್ನಿಯಲ್ಲಿ ಒಟ್ಟು 20 ಲೀಗ್‌ ಪಂದ್ಯಗಳು ಮತ್ತು 2 ಪ್ಲೇ-ಆಫ್ಸ್‌ ಪಂದ್ಯಗಳು ಸೇರಿ 23 ದಿನ ನಡೆಯಲಿದೆ. ಎಲ್ಲ ಪಂದ್ಯಗಳಿಗೆ ಮಹಾರಾಷ್ಟ್ರದ ಡಿವೈ ಪಾಟೀಲ್ ಸ್ಟೇಡಿಯಂ ಮತ್ತು ಬ್ರಬೋರ್ನ್ ಸ್ಟೇಡಿಯಂ ಆತಿಥ್ಯವಹಿಸಲಿದೆ. ಎರಡು ಕ್ರೀಡಾಂಗಣಗಳಲ್ಲಿ ತಲಾ 11 ಪಂದ್ಯಗಳು ಆಯೋಜನೆಯಾಗಲಿದೆ. ಲೀಗ್ ಹಂತದಲ್ಲಿ ಪ್ರತಿ ತಂಡಗಳು 8 ಪಂದ್ಯಗಳನ್ನು ಆಡಲಿದೆ. ಡಬಲ್ ಹೆಡ್ಡರ್ ದಿನ ಮೊದಲ ಪಂದ್ಯ ಮಧ್ಯಾಹ್ನ 3:30 ಹಾಗೂ ಸಂಜೆ 7:30ಕ್ಕೆ ಆರಂಭವಾಗಲಿದೆ.

ಇದನ್ನೂ ಓದಿ
IND vs AUS 3rd Test: ಆಸ್ಟ್ರೇಲಿಯಾ ಗೆಲುವಿಗೆ 76 ರನ್​ಗಳ ಗುರಿ: ಭಾರತದ ಮಾಸ್ಟರ್ ಪ್ಲಾನ್ ಏನು ಗೊತ್ತೇ?
Nathan Lyon: ಲಿಯಾನ್ ಮುಂದೆ ಮಂಡಿಯೂರುವ ಟೀಮ್ ಇಂಡಿಯಾ: ಇದಕ್ಕೆ ಈ ದಾಖಲೆಯೇ ಸಾಕ್ಷಿ..!
IPL: ಐಪಿಎಲ್ ಇತಿಹಾಸದಲ್ಲಿ ಯಾವ ತಂಡದ ಬೌಲರ್ ಹೆಚ್ಚು ಪರ್ಪಲ್ ಕ್ಯಾಪ್ ಗೆದ್ದಿದ್ದಾರೆ ಗೊತ್ತಾ?
Legends League Cricket 2023: ಲೆಜೆಂಡ್ಸ್​ ಲೀಗ್ ತಂಡಗಳಿಗೆ ನಾಯಕರುಗಳ ಆಯ್ಕೆ

Shikhar Dhawan: ಟೆಸ್ಟ್ ತಂಡದಲ್ಲಿ ಚಾನ್ಸ್ ಕೊಡಲ್ಲ, ಮತ್ತೇಕೆ ನಾ ರಣಜಿ ಕ್ರಿಕೆಟ್ ಆಡಲಿ: ಶಿಖರ್ ಧವನ್

ಲೀಗ್‌ ಹಂತದಲ್ಲಿ ಅಗ್ರ ಮೂರು ಸ್ಥಾನ ಪಡೆಯುವ ತಂಡಗಳು ಪ್ಲೇ-ಆಫ್ಸ್‌ ಹಂತಕ್ಕೆ ಕಾಲಿಡಲಿವೆ. ಲೀಗ್‌ ಹಂತದಲ್ಲಿ ಅಂಕಪಟ್ಟಿಯ ಅಗ್ರ ಸ್ಥಾನ ಪಡೆಯುವ ತಂಡ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆಯಲಿದೆ. ಲೀಗ್‌ ಹಂತದಲ್ಲಿ 2 ಮತ್ತು 3ನೇ ಸ್ಥಾನ ಪಡೆಯುವ ತಂಡಗಳು ಎಲಿಮಿನೇಟರ್‌ ಪಂದ್ಯದಲ್ಲಿ ಪೈಪೋಟಿ ನಡೆಸಲಿವೆ. ಅಂಕಪಟ್ಟಿಯ ಅಗ್ರಸ್ಥಾನಿ ಮತ್ತು ಎಲಿಮಿನೇಟರ್‌ ಪಂದ್ಯ ಗೆದ್ದ ತಂಡ ಫೈನಲ್‌ನಲ್ಲಿ ಟ್ರೋಫಿಗಾಗಿ ಹೋರಾಡಲಿದೆ.

ಇನ್ನು ರಾಯಲ್ ಚಾಲೆಂಜರ್ಸ್​ ಬೆಂಗಳೂರು ಮಹಿಳಾ ತಂಡವು ಮಾರ್ಚ್ 5 ರಿಂದ ಅಭಿಯಾನ ಆರಂಭಿಸಲಿದ್ದು, ಮೊದಲ ಪಂದ್ಯವನ್ನು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡಲಿದೆ. ಆರ್​ಸಿಬಿ ಸಾಕಷ್ಟು ಬಲಿಷ್ಠವಾಗಿದ್ದು ಸ್ಟಾರ್ ಆಟಗಾರ್ತಿಯರಿಂದ ಕೂಡಿದೆ. ಸ್ಮೃತಿ ಮಂದಾನ, ಎಲಿಸ್ ಪೆರ್ರಿ, ರಿಚಾ ಘೋಷ್, ಸೋಫಿ ಡಿವೈನ್, ರೇಣುಕಾ ಸಿಂಗ್, ಎರಿನ್ ಬರ್ನ್ಸ್ ಅವರಂತಹ ಅಪಾಯಕಾರಿ ಪ್ಲೇಯರ್ಸ್ ತಂಡದಲ್ಲಿದ್ದಾರೆ. ಈಗಾಗಲೇ ಆರ್​ಸಿಬಿಯ ಎಲ್ಲ ಪ್ಲೇಯರ್ಸ್ ತಂಡ ಸೇರಿಕೊಂಡಿದ್ದು ಅಭ್ಯಾಸ ಶುರುಮಾಡಿಕೊಂಡಿದ್ದಾರೆ.

ಭಾರತದಲ್ಲಿ ಮಹಿಳಾ ಪ್ರೀಮಿಯರ್ ಲೀಗ್ 2023 ರ ಟಿವಿ ಪ್ರಸಾರದ ಹಕ್ಕುಗಳನ್ನು Sport 18 ನೆಟ್‌ವರ್ಕ್ ಪಡೆದುಕೊಂಡಿದೆ. ಹೀಗಾಗಿ ಜಿಯೋ ಸಿನಿಮಾ ಮತ್ತು ಸ್ಪೋರ್ಟ್ಸ್​ 18 ನಲ್ಲಿ ಮಾತ್ರ ಎಲ್ಲ ಪಂದ್ಯಗಳು ನೇರಪ್ರಸಾರವಾಗಲಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ