ಈ ಬಗ್ಗೆ ಮಾತನಾಡಿರುವ ಶಿಖರ್ ಧವನ್, ನನ್ನ ಟೆಸ್ಟ್ ವೃತ್ತಿಜೀವನ ಮುಗಿದಿದೆ ಎಂಬುದು ನನಗೆ ತಿಳಿದಿದೆ. ಕಳೆದ 2-3 ವರ್ಷಗಳಿಂದ ನಾನು ಟೆಸ್ಟ್ ತಂಡದ ಭಾಗವಾಗಿಲ್ಲ. ಇದಕ್ಕೆ ವಯಸ್ಸು ಕೂಡ ಕಾರಣ ಇರಬಹುದು. ಪ್ರತಿಯೊಬ್ಬ ಕ್ರಿಕೆಟಿಗನ ಜೀವನವೂ ವಿಭಿನ್ನವಾಗಿರುತ್ತದೆ. ಪ್ರಸ್ತುತ ಸನ್ನಿವೇಶದಲ್ಲಿ ಯುವಕರಿಗೆ ಅವಕಾಶ ನೀಡಲಾಗುತ್ತದೆ. ಹೀಗಾಗಿ ನಾನು ಸಹ ರೆಡ್ ಬಾಲ್ ಕ್ರಿಕೆಟ್ನಿಂದ ದೂರ ಉಳಿದಿದ್ದೇನೆ ಎಂದು ಧವನ್ ತಿಳಿಸಿದ್ದಾರೆ.