WPL 2024: ಚಿನ್ನಸ್ವಾಮಿಯಲ್ಲಿ ರಂಗೇರಿದ ಮಹಿಳಾ ಪ್ರೀಮಿಯರ್ ಲೀಗ್ ಉದ್ಘಾಟನಾ ಸಮಾರಂಭ: ಬಾಲಿವುಡ್ ತಾರೆಯರ ಭರ್ಜರಿ ಸ್ಟೆಪ್ಸ್
Women's Premier League 2024 Opening Ceremony: ಮಹಿಳಾ ಪ್ರೀಮಿಯರ್ ಲೀಗ್ 2024 ರ ಆವೃತ್ತಿಗೆ ಚಾಲನೆ ಸಿಕ್ಕಿದೆ. ಶುಕ್ರವಾರ ಬೆಂಗೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅದ್ಧೂರಿ ಉದ್ಘಾಟನಾ ಸಮಾರಂಭ ಏರ್ಪಡಿಸಲಾಗಿತ್ತು. ಇದರಲ್ಲಿ ಬಾಲಿವುಡ್ ತಾರೆಯರಾದ ಕಾರ್ತಿಕ್ ಆರ್ಯನ್‌ನಿಂದ ಹಿಡಿದು ವರುಣ್ ಧವನ್ ವರೆಗೆ ಎಲ್ಲರೂ ತಮ್ಮ ಅದ್ಭುತ ನೃತ್ಯದ ಮೂಲಕ ಮಿಂಚಿದರು.
ಮಹಿಳಾ ಪ್ರೀಮಿಯರ್ ಲೀಗ್ 2024 (Women’s Premier League) ಫೆಬ್ರವರಿ 23 ರಿಂದ ಪ್ರಾರಂಭವಾಗಿದೆ. ಟೂರ್ನಿಯ ಎರಡನೇ ಋತುವಿನಲ್ಲಿ ಒಟ್ಟು 5 ತಂಡಗಳು ಭಾಗವಹಿಸುತ್ತಿವೆ. ಶುಕ್ರವಾರ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ರನ್ನರ್ ಅಪ್ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಮೊದಲ ಪಂದ್ಯವೇ ರಣರೋಚಕವಾಗಿತ್ತು. ಮುಂಬೈ ಕೊನೆಯ ಎಸೆತದಲ್ಲಿ ಸಿಕ್ಸ್ ಸಿಡಿಸಿ ಗೆಲ್ಲುವ ಮೂಲಕ ಭರ್ಜರಿ ಆರಂಭ ಪಡೆದುಕೊಂಡಿದೆ. ಈ ಪಂದ್ಯ ಆರಂಭಕ್ಕೂ ಮುನ್ನ, ಉದ್ಘಾಟನಾ ಸಮಾರಂಭದಲ್ಲಿ ಬಾಲಿವುಡ್ ತಾರೆಯರು ಸಖತ್ ಸ್ಟೆಪ್ಸ್ ಹಾಕಿ ಪ್ರೇಕ್ಷಕರನ್ನು ರಂಚಿಸಿದರು. ಕಾರ್ತಿಕ್ ಆರ್ಯನ್‌ನಿಂದ ಹಿಡಿದು ವರುಣ್ ಧವನ್ ವರೆಗೆ ಎಲ್ಲರೂ ತಮ್ಮ ಅದ್ಭುತ ನೃತ್ಯದ ಮೂಲಕ ಉದ್ಘಾಟನಾ ಸಮಾರಂಭಲ್ಲಿ ಮಿಂಚಿದರು.
ಉದ್ಘಾಟನಾ ಸಮಾರಂಭದಲ್ಲಿ ಕಾರ್ತಿಕ್ ಆರ್ಯನ್ ಅಭಿನಯ WPL 2024 ರ ಉದ್ಘಾಟನಾ ಸಮಾರಂಭದಲ್ಲಿ, ಕಾರ್ತಿಕ್ ಆರ್ಯನ್ ಅವರು ಯಾ ಮೇ ಗಲಾತ್ ಮತ್ತು ದಿಲ್ ಚೋರಿ ಸದ್ದಾ ಹೋ ಗಯಾ ಹಾಡಿಗೆ ತಮ್ಮ ಅದ್ಭುತ ನೃತ್ಯ ಪ್ರದರ್ಶನಗಳ ಮೂಲಕ ಎಲ್ಲರ ಹೃದಯವನ್ನು ಗೆದ್ದರು.
ಭಾರತಕ್ಕೆ ಬೇಕು ರೂಟ್ ವಿಕೆಟ್: ಎರಡನೇ ದಿನಕ್ಕೆ ರೋಹಿತ್ ಮಾಸ್ಟರ್ ಪ್ಲಾನ್ ಏನು?
A GRAND start to the #TATAWPL opening ceremony 😍
Kartik Aaryan captivates the crowd with a stellar performance! 🔥@TheAaryanKartik pic.twitter.com/PCcChO9p6y
— Women’s Premier League (WPL) (@wplt20) February 23, 2024
ಉದ್ಘಾಟನಾ ಸಮಾರಂಭದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಅಭಿನಯ ಸಿದ್ಧಾರ್ಥ್ ಮಲ್ಹೋತ್ರಾ ಅವರು ‘ಶೇರ್ಷಾ’ ಚಿತ್ರದ ಚಾರ್ಟ್‌ಬಸ್ಟರ್ ಹಾಡಿನ ಮೂಲಕ ಅದ್ಧೂರಿ ಎಂಟ್ರಿ ನೀಡಿದರು. ಸಿಲ್ವರ್ ಬ್ಲೇಜರ್, ಮ್ಯಾಚಿಂಗ್ ಪ್ಯಾಂಟ್ ಮತ್ತು ಕಪ್ಪು ಟಿ-ಶರ್ಟ್ ಧರಿಸಿದ್ದ ಸಿದ್ಧಾರ್ಥ್ ವೇದಿಕೆಯಲ್ಲಿ ಧೂಳೆಬ್ಬಿಸಿದರು.
Sidharth Malhotra’s dazzling performance lights up the Chinnaswamy Stadium 💥#TATAWPL | @SidMalhotra pic.twitter.com/FptK14jQud
— Women’s Premier League (WPL) (@wplt20) February 23, 2024
ಉದ್ಘಾಟನಾ ಸಮಾರಂಭದಲ್ಲಿ ಶಾಹಿದ್ ಕಪೂರ್ ಅಭಿನಯ ಶಾಹಿದ್ ಕಪೂರ್ ಅವರು ‘ಜಬ್ ವಿ ಮೆಟ್’ ನಗ್ಡಾ ನಗಾಡಾ ಮತ್ತು ಅವರ ಕೆಲವು ಹಿಟ್ ಸಿನಿಮಾಗಳ ಹಾಡುಗಳಿಗೆ ಅದ್ಭುತವಾಗಿ ನೃತ್ಯ ಮಾಡಿದರು. ಶಾಹಿದ್ ಕಪೂರ್ 2023 ರ ಚಾಂಪಿಯನ್ ಮುಂಬೈ ಇಂಡಿಯನ್ಸ್ ಅನ್ನು ಪ್ರತಿನಿಧಿಸಿದರು. ಕಬೀರ್ ಸಿಂಗ್ ಸ್ಟೈಲ್ ನಲ್ಲಿ ಬೈಕ್ ಮೂಲಕ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದು ನೆರೆದಿದ್ದವರ ಹುಬ್ಬೇರುವಂತೆ ಮಾಡಿತು.
Bengaluru erupts with joy to welcome Shahid Kapoor to the #TATAWPL Opening Ceremony 😃🙌@shahidkapoor pic.twitter.com/C2LckHvV2D
— Women’s Premier League (WPL) (@wplt20) February 23, 2024
ಉದ್ಘಾಟನಾ ಸಮಾರಂಭದಲ್ಲಿ ವರುಣ್ ಧವನ್ ಪ್ರದರ್ಶನ
ಉದ್ಘಾಟನಾ ಸಮಾರಂಭದಲ್ಲಿ ವರುಣ್ ಧವನ್ ತಮ್ಮ ಅಭಿನಯದಿಂದ ಎಲ್ಲರನ್ನೂ ರಂಜಿಸಿದರು. ‘ಅಪ್ನಾ ಬನಾ ಲೆ’, ‘ಪಾಲತ್’, ‘ಬೇಷರ್ಮಿ ಕಿ ಹೈಟ್’ ಮತ್ತು ‘ಮುಕಾಬಲಾ’ ಮುಂತಾದ ಅನೇಕ ಹಾಡುಗಳಿಗೆ ಅವರು ನೃತ್ಯ ಮಾಡಿದರು. ಅವರು ಯುಪಿ ವಾರಿಯರ್ಸ್ ತಂಡವನ್ನು ಪ್ರತಿನಿಧಿಸಿದರು.
Varun Dhawan has hit it out of the park with his performance in Bengaluru! 🥳#TATAWPL | @Varun_dvn pic.twitter.com/FisB55uJ6u
— Women’s Premier League (WPL) (@wplt20) February 23, 2024
ಉದ್ಘಾಟನಾ ಸಮಾರಂಭದಲ್ಲಿ ಟೈಗರ್ ಶ್ರಾಫ್ ಅಭಿನಯ ಟೈಗರ್ ಶ್ರಾಫ್ ಅವರು ‘ವಿಸಲ್ ಬಾಜಾ’, ‘ಘುಂಘರೂ’ ಮತ್ತು ಇತರ ಹಾಡುಗಳಿಗೆ ನೃತ್ಯ ಮಾಡಿ ಇಡೀ ಕ್ರೀಡಾಂಗಣದಲ್ಲಿ ಧೂಳೆಬ್ಬಿಸಿದರು.
That’s ONE roaring performance, courtesy @iTIGERSHROFF 😍#TATAWPL pic.twitter.com/JwRLGyQov2
— Women’s Premier League (WPL) (@wplt20) February 23, 2024
SOUND ON 😍
𝙎𝙝𝙖𝙝 𝙍𝙪𝙠𝙝 𝙆𝙝𝙖𝙣 👑 showcases his aura at the #TATAWPL Opening Ceremony 🤩🤩@iamsrk pic.twitter.com/WLjSmCxVXL
— Women’s Premier League (WPL) (@wplt20) February 23, 2024
ಉದ್ಘಾಟನಾ ಸಮಾರಂಭದಲ್ಲಿ ಶಾರುಖ್ ಖಾನ್ ಅಭಿನಯ ಕಿಂಗ್ ಖಾನ್ ಶಾರುಖ್ ನೋಡಲೆಂದೇ ಚಿನ್ನಸ್ವಾಮ ಕಿಕ್ಕಿರಿದು ತುಂಬಿತ್ತು. ಅಭಿಮಾನಿಗಳಿಗೆ ಬೇಸರ ತರಿಸದ ಶಾರುಖ್ ಅದ್ಭುತ ನೃತ್ಯ ಹಾಗೂ ತಮ್ಮ ಟ್ರೆಂಡ್ ಮಾರ್ಕ್ ಶೈಲಿಯಲ್ಲಿ ನೃತ್ಯ ಮಾಡಿ ಎಲ್ಲರನ್ನೂ ರಂಜಿಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ