WPL 2024: ಬೆಂಗಳೂರಿನಲ್ಲಿ ಕೊನೆಯ ಡಬ್ಲ್ಯುಪಿಎಲ್ ಪಂದ್ಯ; ಟಾಸ್ ಸೋತ ಆರ್​ಸಿಬಿ

|

Updated on: Mar 04, 2024 | 7:15 PM

WPL 2024: ಮಹಿಳೆಯರ ಪ್ರೀಮಿಯರ್ ಲೀಗ್‌ನ 11ನೇ ಪಂದ್ಯದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡವು ಯುಪಿ ವಾರಿಯರ್ಜ್ ಮಹಿಳಾ ತಂಡವನ್ನು ಎದುರಿಸುತ್ತಿದೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊನೆಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕಿ ಸ್ಮೃತಿ ಮಂಧಾನ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿದ್ದಾರೆ.

WPL 2024: ಬೆಂಗಳೂರಿನಲ್ಲಿ ಕೊನೆಯ ಡಬ್ಲ್ಯುಪಿಎಲ್ ಪಂದ್ಯ; ಟಾಸ್ ಸೋತ ಆರ್​ಸಿಬಿ
ಆರ್​ಸಿಬಿ- ಯುಪಿ ವಾರಿಯರ್ಸ್​
Follow us on

ಮಹಿಳೆಯರ ಪ್ರೀಮಿಯರ್ ಲೀಗ್‌ನ (Women’s Premier League) 11ನೇ ಪಂದ್ಯದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡವು ಯುಪಿ ವಾರಿಯರ್ಸ್​ ಮಹಿಳಾ ತಂಡವನ್ನು (UP Warriorz vs Royal Challengers Bangalore) ಎದುರಿಸುತ್ತಿದೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊನೆಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕಿ ಸ್ಮೃತಿ ಮಂಧಾನ (Smriti Mandhana) ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿದ್ದಾರೆ. ಇಂದು ಉಭಯ ತಂಡಗಳಿಗೂ ಹ್ಯಾಟ್ರಿಕ್ ಸಾಧಿಸುವ ಅವಕಾಶವಿದೆ. ಇಂದು ಯುಪಿ ವಾರಿಯರ್ಸ್ ತಂಡ ಗೆದ್ದರೆ ಹ್ಯಾಟ್ರಿಕ್ ಗೆಲುವು ಸಾಧಿಸಲಿದೆ. ಅದೇ ವೇಳೆಗೆ ಇಂದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋಲನುಭವಿಸಿದರೆ ಆ ತಂಡ ಹ್ಯಾಟ್ರಿಕ್ ಸೋಲು ಕಾಣಲಿದೆ. ಆದರೆ ಸತತ ಎರಡು ಪಂದ್ಯಗಳನ್ನು ಸೋತಿರುವ ಆರ್​ಸಿಬಿಗೆ ತವರಿನಲ್ಲಿ ಇದು ಕೊನೆಯ ಪಂದ್ಯವಾಗಿರುವುದರಿಂದ ಗೆಲ್ಲಲೇಬೇಕಾದ ಒತ್ತಡದಲ್ಲಿ ಸ್ಮೃತಿ ಬಳಗ ಇದೆ.

ಆರ್​ಸಿಬಿಗೆ ಗೆಲುವು ಅವಶ್ಯಕ

ಪಾಯಿಂಟ್ ಪಟ್ಟಿಯ ದೃಷ್ಟಿಯಿಂದ ಈ ಪಂದ್ಯ ಬೆಂಗಳೂರು ಮತ್ತು ಯುಪಿ ವಾರಿಯರ್ಸ್‌ಗೆ ಅತ್ಯಂತ ಮಹತ್ವದ್ದಾಗಿದೆ. ವಾಸ್ತವವಾಗಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ರಸ್ತುತ 4 ಪಂದ್ಯಗಳಲ್ಲಿ ಎರಡು ಗೆಲುವುಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಆದರೆ ಯುಪಿ ವಾರಿಯರ್ಸ್ ತಂಡ ಕೂಡ ಅದೇ ಸಂಖ್ಯೆಯ ಗೆಲುವಿನೊಂದಿಗೆ ಮೂರನೇ ಸ್ಥಾನದಲ್ಲಿದೆ. ಆದರೆ, ರನ್ ರೇಟ್​ನಲ್ಲಿ ಸ್ಮೃತಿ ಮಂಧಾನ ಬಳಗ ಮೈನಸ್​ ಹೊಂದಿದ್ದರೆ, ಅಲಿಸ್ಸಾ ಹೀಲಿ ತಂಡವು ಪ್ಲಸ್‌ನಲ್ಲಿದೆ.

RCB: ‘ನಂಬಲಸಾಧ್ಯ’; ಕಿಂಗ್ ಕೊಹ್ಲಿ- ಕ್ವೀನ್ ಸ್ಮೃತಿ ನಡುವೆ ಎಷ್ಟೊಂದು ಕಾಕತಾಳೀಯ..!

ಉಭಯ ತಂಡಗಳು

ಬೆಂಗಳೂರು: ಸ್ಮೃತಿ ಮಂಧಾನ (ನಾಯಕಿ), ಸೋಫಿ ಡಿವೈನ್, ಸಬ್ಬಿನೇನಿ ಮೇಘನಾ, ಎಲ್ಲಿಸ್ ಪೆರ್ರಿ, ರಿಚಾ ಘೋಷ್ (ವಿಕೆಟ್ ಕೀಪರ್), ಸೋಫಿ ಮೊಲಿನೆಕ್ಸ್, ಜಾರ್ಜಿಯಾ ವೇರ್ಹ್ಯಾಮ್, ಏಕ್ತಾ ಬಿಶ್ತ್ (ಶ್ರೇಯಾಂಕಾ ಪಾಟೀಲ್ ಬದಲಿಗೆ), ಸಿಮ್ರಾನ್ ಬಹದ್ದೂರ್, ಆಶಾ ಶೋಬನಾ, ರೇಣುಕಾ ಸಿಂಗ್.

ಯುಪಿ ವಾರಿಯರ್ಸ್​: ಅಲಿಸ್ಸಾ ಹೀಲಿ (ನಾಯಕಿ), ಕಿರಣ್ ನವಗಿರೆ, ಚಾಮರಿ ಅಥಾಪತ್ತು, ಗ್ರೇಸ್ ಹ್ಯಾರಿಸ್, ಶ್ವೇತಾ ಸೆಹ್ರಾವತ್, ದೀಪ್ತಿ ಶರ್ಮಾ, ಪೂನಂ ಖೇಮ್ನಾರ್, ಸೋಫಿ ಎಕ್ಲೆಸ್ಟೋನ್, ರಾಜೇಶ್ವರಿ ಗಾಯಕ್ವಾಡ್, ಸೈಮಾ ಥಕ್ವಾಡ್, ಅಂಜಲಿ ಸರ್ವಾಣಿ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:01 pm, Mon, 4 March 24