
ವುಮೆನ್ಸ್ ಪ್ರೀಮಿಯರ್ ಲೀಗ್ನ ದ್ವಿತೀಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ 2 ವಿಕೆಟ್ಗಳ ರೋಚಕ ಜಯ ಸಾಧಿಸಿದೆ. ವಡೋದಾರದ ಕೋಟಂಬಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ಪರ ನ್ಯಾಟ್ ಸಿವರ್ ಬ್ರಂಟ್ 59 ಎಸೆತಗಳಲ್ಲಿ 13 ಫೋರ್ಗಳೊಂದಿಗೆ ಅಜೇಯ 80 ರನ್ ಬಾರಿಸಿದರು. ಇನ್ನು ನಾಯಕಿ ಹರ್ಮನ್ಪ್ರೀತ್ ಕೌರ್ 42 ರನ್ ಚಚ್ಚಿದರು. ಈ ಮೂಲಕ ಮುಂಬೈ ಇಂಡಿಯನ್ಸ್ 19.1 ಓವರ್ಗಳಲ್ಲಿ 164 ರನ್ ಬಾರಿಸಿ ಆಲೌಟ್ ಆಯಿತು.
165 ರನ್ಗಳ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಶಫಾಲಿ ವರ್ಮಾ ಸ್ಪೋಟಕ ಆರಂಭ ಒದಗಿಸಿದ್ದರು. ಅಲ್ಲದೆ ನಾಯಕಿ ಮೆಗ್ ಲ್ಯಾನಿಂಗ್ ಜೊತೆಗೂಡಿ ಮೊದಲ ವಿಕೆಟ್ಗೆ 60 ರನ್ಗಳ ಜೊತೆಯಾಟವಾಡಿದ್ದರು.
ಆದರೆ ಶಫಾಲಿ ವರ್ಮಾ (43) ಹಾಗೂ ಮೆಗ್ ಲ್ಯಾನಿಂಗ್ (15) ಔಟಾಗುತ್ತಿದ್ದಂತೆ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಮುಂಬೈ ಇಂಡಿಯನ್ಸ್ ಬೌಲರ್ಗಳು ಡಿಸಿ ಪಡೆ 109 ರನ್ಗಳಿಸುವಷ್ಟರಲ್ಲಿ 5 ವಿಕೆಟ್ ಉರುಳಿಸಿದರು.
ಈ ಹಂತದಲ್ಲಿ ಕಣಕ್ಕಿಳಿದ ಕನ್ನಡತಿ ನಿಕಿ ಪ್ರಸಾದ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರು. ಅನುಭವಿ ಬೌಲರ್ಗಳನ್ನು ನಿರಾಯಾಸವಾಗಿ ಎದುರಿಸಿದ 19ರ ಹರೆಯದ ನಿಕಿ ಎಚ್ಚರಿಕೆಯ ಬ್ಯಾಟಿಂಗ್ನೊಂದಿಗೆ 4 ಫೋರ್ ಬಾರಿಸಿ ಇನಿಂಗ್ಸ್ ಕಟ್ಟಿದರು.
ಇದಾಗ್ಯೂ ಕೊನೆಯ 2 ಓವರ್ಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 21 ರನ್ಗಳ ಅವಶ್ಯಕತೆಯಿತ್ತು. 19ನೇ ಓವರ್ನಲ್ಲಿ ರಾಧಾ ಯಾದವ್ ಸಿಕ್ಸ್ ಬಾರಿಸುವುದರೊಂದಿಗೆ ಒಟ್ಟು 11 ರನ್ ಕಲೆಹಾಕುವಲ್ಲಿ ಯಶಸ್ವಿಯಾದರು.
ಅದರಂತೆ ಕೊನೆಯ ಓವರ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು 10 ರನ್ಗಳ ಗುರಿ ಪಡೆಯಿತು. ಸಜನಾ ಎಸೆದ 20ನೇ ಓವರ್ನ ಮೊದಲ ಎಸೆತದಲ್ಲೇ ನಿಕಿ ಪ್ರಸಾದ್ ಫೋರ್ ಬಾರಿಸಿದರು. 2ನೇ ಎಸೆತದಲ್ಲಿ ಮತ್ತೆರಡು ರನ್ ಓಡಿದರು.
3ನೇ ಎಸೆತದಲ್ಲಿ ಒಂದು ರನ್ ಕಲೆಹಾಕಿದರು. 4ನೇ ಎಸೆತದಲ್ಲಿ ರಾಧಾ ಯಾದವ್ ಒಂದು ರನ್ ಓಡಿದರು. ಕೊನೆಯ ಎರಡು ಎಸೆತಗಳಲ್ಲಿ 2 ರನ್ ಬೇಕಿತ್ತು. ಈ ವೇಳೆ 5ನೇ ಬಾಲ್ನಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ನಿಕಿ ಪ್ರಸಾದ್ (35) ಕ್ಯಾಚ್ ನೀಡಿದರು.
ಅಂತಿಮ ಎಸೆತದಲ್ಲಿ 2 ರನ್ಗಳ ಅವಶ್ಯಕತೆಯಿತ್ತು. ಈ ವೇಳೆ ಆರುಂಧತಿ ರೆಡ್ಡಿ ಆಫ್ ಸೈಡ್ನತ್ತ ಬಾರಿಸಿ 2 ರನ್ ಓಡಿದರು. ಇದರ ನಡುವೆ ಹರ್ಮನ್ಪ್ರೀತ್ ಕೌರ್ ಎಸೆದ ಥ್ರೋ ಮೂಲಕ ವಿಕೆಟ್ ಕೀಪರ್ ರನೌಟ್ ಮಾಡಿದರು.
#WPL2025 pic.twitter.com/IkYotRYK4d
— Zsports (@_Zsports) February 16, 2025
ವಿಕೆಟ್ ಕೀಪರ್ನ ರನೌಟ್ ಮನವಿಯನ್ನು ಪರಿಶೀಲಿಸಿದಾಗ, ಮಿಲಿ ಮೀಟರ್ ಅಂತರದಲ್ಲಿ ಆರುಂಧತಿ ರೆಡ್ಡಿ ಬ್ಯಾಟ್ ಕ್ರೀಸ್ ಒಳಗಿರುವುದು ಕಂಡು ಬಂತು. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಅಂತಿಮ ಎಸೆತದಲ್ಲಿ 2 ರನ್ಗಳಿಸಿ 2 ವಿಕೆಟ್ಗಳ ರೋಚಕ ಜಯ ಸಾಧಿಸಿದೆ.
ಕನ್ನಡತಿ ನಿಕಿ ಪ್ರಸಾದ್
ಇದನ್ನೂ ಓದಿ: WPL 2025: ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಇತಿಹಾಸ ನಿರ್ಮಿಸಿದ RCB
ಈ ಗೆಲುವಿನೊಂದಿಗೆ ವುಮೆನ್ಸ್ ಪ್ರೀಮಿಯರ್ ಲೀಗ್ನ 3ನೇ ಸೀಸನ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಶುಭಾರಂಭ ಮಾಡಿದೆ. ಇದಕ್ಕೂ ಮುನ್ನ ನಡೆದ ಮೊದಲ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಆರ್ಸಿಬಿ ದಾಖಲೆಯ ಜಯ ಸಾಧಿಸಿತ್ತು.