IML 2025: ಮಾಸ್ಟರ್ಸ್ ಲೀಗ್ಗೆ ಭಾರತ ತಂಡ ಪ್ರಕಟ
International Masters League: ಇಂಟರ್ನ್ಯಾಷನಲ್ ಮಾಸ್ಟರ್ಸ್ ಲೀಗ್ ಎಂಬುದು ಮಾಜಿ ಕ್ರಿಕೆಟರುಗಳ ಟಿ20 ಲೀಗ್. ಈ ಟೂರ್ನಿಯಲ್ಲಿ ಭಾರತ, ಶ್ರೀಲಂಕಾ, ವೆಸ್ಟ್ ಇಂಡೀಸ್, ಸೌತ್ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳ ಮಾಜಿ ಆಟಗಾರರು ಪಾಲ್ಗೊಳ್ಳಲಿದ್ದಾರೆ. ಈ ಟೂರ್ನಿಗಾಗಿ ಇದೀಗ ಭಾರತವು 15 ಸದಸ್ಯರ ತಂಡವನ್ನು ಪ್ರಕಟಿಸಿದೆ.

ಫೆಬ್ರವರಿ 22 ರಿಂದ ಶುರುವಾಗಲಿರುವ ಮಾಜಿ ಕ್ರಿಕೆಟರುಗಳ ಇಂಟರ್ನ್ಯಾಷನಲ್ ಮಾಸ್ಟರ್ಸ್ ಲೀಗ್ಗೆ ಭಾರತ ತಂಡವನ್ನು ಘೋಷಿಸಲಾಗಿದೆ. ಇಂಡಿಯಾ ಮಾಸ್ಟರ್ಸ್ ಹೆಸರಿನಲ್ಲಿ ಕಣಕ್ಕಿಳಿಯಲಿರುವ 15 ಸದಸ್ಯರ ಈ ತಂಡವನ್ನು ಸಚಿನ್ ತೆಂಡೂಲ್ಕರ್ ಮುನ್ನಡೆಸಲಿದ್ದಾರೆ. ಇನ್ನು ಈ ತಂಡದಲ್ಲಿರುವುದು ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ ಆಟಗಾರರು ಮಾತ್ರ ಎಂಬುದು ವಿಶೇಷ.
ಅಂದರಂತೆ ತಂಡದಲ್ಲಿ ಸಚಿನ್ ತೆಂಡೂಲ್ಕರ್ ಅಲ್ಲದೆ ಸ್ಟಾರ್ ಆಟಗಾರರಾಗಿ ಯುವರಾಜ್ ಸಿಂಗ್, ಇರ್ಫಾನ್ ಪಠಾಣ್, ಸುರೇಶ್ ರೈನಾ, ಯೂಸುಫ್ ಪಠಾಣ್, ಅಂಬಾಟಿ ರಾಯುಡು ಸೇರಿದಂತೆ ಅನೇಕ ಆಟಗಾರರಿದ್ದಾರೆ.
ಹಾಗೆಯೇ ಕನ್ನಡಿಗರಾದ ವಿನಯ್ ಕುಮಾರ್ ಹಾಗೂ ಆಭಿಮನ್ಯು ಮಿಥುನ್ ಸಹ ಇಂಡಿಯಾ ಮಾಸ್ಟರ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ಧವಳ್ ಕುಲಕರ್ಣಿ, ರಾಹುಲ್ ಶರ್ಮಾ, ಶಹಬಾಝ್ ನದೀಮ್ ಕೂಡ ಇದ್ದಾರೆ. ಅದರಂತೆ ಇಂಡಿಯಾ ಮಾಸ್ಟರ್ಸ್ ತಂಡ ಈ ಕೆಳಗಿನಂತಿದೆ…
- ಸಚಿನ್ ತೆಂಡೂಲ್ಕರ್ (ನಾಯಕ)
- ಯುವರಾಜ್ ಸಿಂಗ್
- ಸುರೇಶ್ ರೈನಾ
- ಅಂಬಾಟಿ ರಾಯುಡು
- ಯೂಸುಫ್ ಪಠಾಣ್
- ಇರ್ಫಾನ್ ಪಠಾಣ್
- ಸ್ಟುವರ್ಟ್ ಬಿನ್ನಿ
- ಧವಳ್ ಕುಲಕರ್ಣಿ
- ವಿನಯ್ ಕುಮಾರ್
- ಶಹಬಾಝ್ ನದೀಮ್
- ರಾಹುಲ್ ಶರ್ಮಾ
- ಗುರುಕೀರತ್ ಸಿಂಗ್ ಮಾನ್
- ಅಭಿಮನ್ಯು ಮಿಥುನ್
- ಪವನ್ ನೇಗಿ
- ನಮನ್ ಓಜಾ
ಇನ್ನು ಈ ಟೂರ್ನಿಗಾಗಿ ಶ್ರೀಲಂಕಾ ಕೂಡ ತಂಡವನ್ನು ಘೋಷಿಸಿದ್ದು, ಈ ತಂಡವನ್ನು ಲಂಕಾ ತಂಡದ ಮಾಜಿ ವಿಕೆಟ್ ಕೀಪರ್ ಬ್ಯಾಟರ್ ಕುಮಾರ ಸಂಗಕ್ಕಾರ ಮುನ್ನಡೆಸಲಿದ್ದಾರೆ. ಅದರಂತೆ ಇಂಟರ್ನ್ಯಾಷನಲ್ ಮಾಸ್ಟರ್ಸ್ ಲೀಗ್ ಟೂರ್ನಿಯಲ್ಲಿ ಕಣಕ್ಕಿಳಿಯಲಿರುವ ಶ್ರೀಲಂಕಾ ಮಾಸ್ಟರ್ಸ್ ತಂಡ ಈ ಕೆಳಗಿನಂತಿದೆ…
- ಕುಮಾರ್ ಸಂಗಕ್ಕಾರ (ನಾಯಕ)
- ರೊಮೇಶ್ ಕಲುವಿತರಣ
- ಅಶಾನ್ ಪ್ರಿಯಾಂಜನ್
- ಉಪುಲ್ ತರಂಗ
- ನುವಾನ್ ಪ್ರದೀಪ್
- ಲಹಿರು ತಿರಿಮನ್ನೆ
- ಚಿಂತಕ ಜಯಸಿಂಹ
- ಸೀಕ್ಕುಗೆ ಪ್ರಸನ್ನ
- ಜೀವನ್ ಮೆಂಡಿಸ್
- ಇಸುರು ಉದಾನ
- ಧಮ್ಮಿಕಾ ಪ್ರಸಾದ್
- ಸುರಂಗ ಲಕ್ಮಲ್
- ದಿಲ್ರುವಾನ್ ಪೆರೇರಾ
- ಅಸೆಲಾ ಗುಣರತ್ನೆ
- ಚತುರಂಗ ಡಿ ಸಿಲ್ವಾ
ಇದನ್ನೂ ಓದಿ: ಎರಡೇ ಎರಡು ಪಂದ್ಯದಲ್ಲಿ ವಿಶ್ವ ದಾಖಲೆ ನಿರ್ಮಿಸಿದ ಮ್ಯಾಥ್ಯೂ ಬ್ರೀಟ್ಝ್ಕೆ
ಮಾಸ್ಟರ್ಸ್ ಲೀಗ್ನಲ್ಲಿ ಕಣಕ್ಕಿಳಿಯಲಿರುವ ತಂಡಗಳು:
- ಇಂಡಿಯಾ ಮಾಸ್ಟರ್ಸ್
- ಶ್ರೀಲಂಕಾ ಮಾಸ್ಟರ್ಸ್
- ವೆಸ್ಟ್ ಇಂಡೀಸ್ ಮಾಸ್ಟರ್ಸ್
- ಆಸ್ಟ್ರೇಲಿಯಾ ಮಾಸ್ಟರ್ಸ್
- ಸೌತ್ ಆಫ್ರಿಕಾ ಮಾಸ್ಟರ್ಸ್
- ಇಂಗ್ಲೆಂಡ್ ಮಾಸ್ಟರ್ಸ್
