WPL 2026: ಆರ್​ಸಿಬಿಗೆ ಆಘಾತ; 2026 ರ ಡಬ್ಲ್ಯುಪಿಎಲ್​ನಿಂದ ಹಿಂದೆ ಸರಿದ ಎಲ್ಲಿಸ್ ಪೆರ್ರಿ

Ellyse Perry WPL 2026: 2026 ರ ಜನವರಿ 9 ರಿಂದ ನಾಲ್ಕನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ ಪ್ರಾರಂಭವಾಗಲಿದೆ. ಆರ್​ಸಿಬಿ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ. ಆದರೆ, ಈ ಪ್ರಮುಖ ಪಂದ್ಯಕ್ಕೂ ಮುನ್ನ ಆರ್​ಸಿಬಿಗೆ ದೊಡ್ಡ ಆಘಾತ ಎದುರಾಗಿದೆ. ತಂಡದ ಪ್ರಮುಖ ಆಟಗಾರ್ತಿ ಆಸ್ಟ್ರೇಲಿಯಾದ ಎಲಿಸ್ ಪೆರ್ರಿ, ವೈಯಕ್ತಿಕ ಕಾರಣಗಳಿಂದ ಡಬ್ಲ್ಯುಪಿಎಲ್ 2026 ರಿಂದ ಹಿಂದೆ ಸರಿದಿದ್ದಾರೆ. ಇದು ಆರ್​ಸಿಬಿ ತಂಡಕ್ಕೆ ಬೃಹತ್ ಹಿನ್ನಡೆಯನ್ನುಂಟು ಮಾಡಿದೆ.

WPL 2026: ಆರ್​ಸಿಬಿಗೆ ಆಘಾತ; 2026 ರ ಡಬ್ಲ್ಯುಪಿಎಲ್​ನಿಂದ ಹಿಂದೆ ಸರಿದ ಎಲ್ಲಿಸ್ ಪೆರ್ರಿ
Ellyse Perry

Updated on: Dec 30, 2025 | 5:48 PM

ನಾಲ್ಕನೇ ಆವೃತ್ತಿಯ ಮಹಿಳಾ ಪ್ರೀಮಿಯರ್​ ಲೀಗ್ (Women’s Premier League) ಮುಂದಿನ ವರ್ಷ ಅಂದರೆ 2026 ರ ಜನವರಿ 9 ರಿಂದ ಆರಂಭವಾಗಲಿದೆ. ಈ ಆವೃತ್ತಿಯ ಉದ್ಘಾಟನಾ ಪಂದ್ಯ ರಾಯಲ್ ಚಾಲೆಂಜರ್ಸ್​ ಬೆಂಗಳೂರು (RCB) ಹಾಗೂ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ನಡುವೆ ನಡೆಯಲಿದೆ. ಆದರೆ ಈ ಪಂದ್ಯಕ್ಕೂ ಮುನ್ನ ಆರ್​ಸಿಬಿಗೆ ದೊಡ್ಡ ಆಘಾತ ಎದುರಾಗಿದೆ. ತಂಡದ ಚಾಂಪಿಯನ್ ಆಟಗಾರ್ತಿ ಆಸ್ಟ್ರೇಲಿಯಾದ ಸ್ಟಾರ್ ಆಲ್​ರೌಂಡರ್ ಎಲ್ಲಿಸ್ ಪೆರ್ರಿ (Ellyse Perry) ಮುಂದಿನ ಆವೃತ್ತಿಯ ಡಬ್ಲ್ಯುಪಿಎಲ್​ನಿಂದ ಹಿಂದೆ ಸರಿದಿದ್ದಾರೆ. ವೈಯಕ್ತಿಕ ಕಾರಣಗಳಿಂದಾಗಿ ಮುಂದಿನ ಆವೃತ್ತಿಯ ಡಬ್ಲ್ಯುಪಿಎಲ್​ನಿಂದ ಹಿಂದೆ ಸರಿಯುತ್ತಿರುವುದಾಗಿ ಪೆರ್ರಿ ತಿಳಿಸಿದ್ದಾರೆ. ಪೆರ್ರಿ ಅವರ ಈ ನಿರ್ಧಾರ ಆರ್​ಸಿಬಿಗೆ ದೊಡ್ಡ ಹಿನ್ನಡೆಯನ್ನುಂಟು ಮಾಡಿದೆ.

ಪೆರ್ರಿ ಬದಲಿಯಾಗಿ ಬಂದಿದ್ಯಾರು?

ವಾಸ್ತವವಾಗಿಮಿನಿ ಹರಾಜಿಗೂ ಮುನ್ನವೇ ಆರ್​ಸಿಬಿ ಎಲ್ಲಿಸ್ ಪೆರ್ರಿ ಅವರನ್ನು 2 ಕೋಟಿ ರೂ. ಬೆಲೆಗೆ ತಂಡದಲ್ಲೇ ಉಳಿಸಿಕೊಂಡಿತ್ತು. ಆದರೆ ವೈಯಕ್ತಿಕ ಕಾರಣಗಳಿಂದಾಗಿ ಪೆರ್ರಿ ಈ ಆವೃತ್ತಿಯಲ್ಲಿ ಆಡುತ್ತಿಲ್ಲ. ಎಲ್ಲಿಸ್ ಪೆರ್ರಿ ತಂಡದಿಂದ ಹಿಂದೆ ಸರಿದ ನಂತರ, ಆರ್‌ಸಿಬಿ ಈಗ ಅವರ ಬದಲಿ ಆಟಗಾರ್ತಿಯನ್ನು ಘೋಷಿಸಿದೆ. 25 ವರ್ಷದ ಆಲ್‌ರೌಂಡರ್ ಸಯಾಲಿ ಸತ್‌ಘರೆ ಅವರನ್ನು ಆರ್‌ಸಿಬಿ ಬದಲಿಯಾಗಿ ಸೇರಿಸಿಕೊಳ್ಳಲಾಗಿದೆ. ಈ ಆಟಗಾರ್ತಿ ಭಾರತ ಪರ ಮೂರು ಏಕದಿನ ಪಂದ್ಯಗಳನ್ನು ಆಡಿದ್ದು, ಮೂರು ವಿಕೆಟ್‌ಗಳನ್ನು ಪಡೆದಿದ್ದಾರೆ.

ಈ ಹಿಂದೆ ಗುಜರಾತ್ ಜೈಂಟ್ಸ್ ತಂಡದ ಪರ ನಾಲ್ಕು ಪಂದ್ಯಗಳನ್ನು ಆಡಿರುವ ಸತ್‌ಘರೆ ಎರಡು ಇನ್ನಿಂಗ್ಸ್‌ಗಳಲ್ಲಿ ಒಂದು ವಿಕೆಟ್ ಪಡೆದು 20 ರನ್ ಗಳಿಸಿದ್ದಾರೆ. ಈ ಆವೃತ್ತಿಯಲ್ಲಿ ಸಯಾಲಿ ಅವರನ್ನು ಯಾವುದೇ ತಂಡವು ಖರೀದಿಸಿರಲಿಲ್ಲ. ಆದರೆ ಎಲೀಸ್ ಪೆರ್ರಿ ಗಾಯಗೊಂಡ ನಂತರ, ಅವರು ಈಗ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಪೆರ್ರಿ WPL ದಾಖಲೆ

ಎಲಿಸ್ ಪೆರ್ರಿ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಇದುವರೆಗೆ 25 ಪಂದ್ಯಗಳನ್ನಾಡಿದ್ದು 64.8 ಸರಾಸರಿಯಲ್ಲಿ 972 ರನ್ ಗಳಿಸಿದ್ದಾರೆ, 132 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಅವರು ಎಂಟು ಅರ್ಧಶತಕಗಳನ್ನು ಸಹ ಸಿಡಿಸಿದ್ದಾರೆ. ಹಾಗೆಯೇ ಬೌಲಿಂಗ್​ನಲ್ಲೂ 14 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:24 pm, Tue, 30 December 25