
ನವಿ ಮುಂಬೈನ ಡಿವೈ ಪಾಟೀಲ್ ಮೈದಾನದಲ್ಲಿ ನಡೆಯುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುತ್ತಿರುವ ಡೆಲ್ಲಿ ತಂಡ ಮೊದಲ ಎರಡು ಓವರ್ಗಳಲ್ಲೇ ಆಘಾತ ಎದುರಿಸಿದೆ. ಕೇವಲ 12 ಎಸೆತಗಳಲ್ಲಿ ಡೆಲ್ಲಿ ತಂಡದ ನಾಲ್ಕು ಪ್ರಮುಖ ವಿಕೆಟ್ಗಳು ಪತನಗೊಂಡಿವೆ. ಅದರಲ್ಲೂ 7 ಎಸೆತಗಳಲ್ಲಿ ಡೆಲ್ಲಿ ತಂಡದ 4 ವಿಕೆಟ್ಗಳು ಉದುರಿದ್ದು, ಆರ್ಸಿಬಿಯ ಮಾರಕ ದಾಳಿಗೆ ಹಿಡಿದ ಕೈಗನ್ನಡಿಯಾಗಿತ್ತು.
ಡೆಲ್ಲಿ ಪರ ಶಫಾಲಿ ವರ್ಮಾ ಮತ್ತು ಲಿಜೆಲ್ಲೆ ಲೀ ಆರಂಭಿಕರಾಗಿ ಕಣಕ್ಕಿಳಿದರು. ಲಿಜೆಲ್ಲೆ ಲೀ ತಾವು ಎದುರಿಸಿದ ಮೊದಲ ಎಸೆತದಲ್ಲಿ ಭರ್ಜರಿ ಬೌಂಡರಿ ಬಾರಿಸಿದರೆ, ನಂತರದ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಲಾರೆನ್ ಬೆಲ್ ಅವರ ಇನ್ಸ್ವಿಂಗರ್ ಎಸೆತ ಲೀ ಅವರನ್ನು ಪೆವಿಲಿಯನ್‌ಗಟ್ಟಿತು. ನಂತರ ಬಂದ ಲಾರಾ ವೊಲ್ವಾರ್ಡ್ಟ್ ಕೂಡ ಅದೇ ಓವರ್ನಲ್ಲಿ ಎರಡು ಎಸೆತಗಳನ್ನು ಎದುರಿಸಿ ಖಾತೆ ಕೂಡ ತೆರೆಯದೆ ವಿಕೆಟ್ ಒಪ್ಪಿಸಿದರು.
ಇನ್ನು ಎರಡನೇ ಓವರ್ನಲ್ಲಿ ಆರ್ಸಿಬಿ ಪರ ಸಯಾಲಿ ಸತ್ಘರೆ ಬೌಲಿಂಗ್ ಆರಂಭಿಸಿದರೆ, ಡೆಲ್ಲಿ ನಾಯಕಿ ಜೆಮಿಮಾ ರೋಡ್ರಿಗಸ್ ಸ್ಟ್ರೈಕ್ನಲ್ಲಿದ್ದರು. ಜೆಮಿಮಾ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸಿದರೆ, ನಂತರದ ಎಸೆತದಲ್ಲಿ ಬೌಲ್ಡ್ ಆದರು. ಹೀಗಾಗಿ ಡೆಲ್ಲಿ ತಂಡ 10 ರನ್ಗಳಿಗೆ ತನ್ನ 3 ವಿಕೆಟ್ ಕಳೆದುಕೊಂಡಿತು. ಈ ವೇಳೆ ಕ್ರೀಸ್ಗೆ ಬಂದ ಅನುಭವಿ ಮರಿಝನ್ನೆ ಕಪ್ ಅವರ ಮೇಲೆ ಜವಾಬ್ದಾರಿ ಹೆಚ್ಚಿತ್ತು. ಆದರೆ ಮರಿಝನ್ನೆ ಕಪ್ ಕೂಡ ತಾವು ಎದುರಿಸಿದ ಮೊದಲ ಎಸೆತದಲ್ಲೇ ಕ್ಲೀನ್ ಬೌಲ್ಡ್ ಆಗುವ ಮೂಲಕ ಡೆಲ್ಲಿಗೆ 4ನೇ ಆಘಾತ ನೀಡಿದರು. ಹೀಗಾಗಿ ಡೆಲ್ಲಿ ತಂಡ 2 ಓವರ್ಗಳ ಅಂತ್ಯಕ್ಕೆ ಪ್ರಮುಖ 4 ವಿಕೆಟ್ ಕಳೆದುಕೊಂಡಿತು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್ XI: ಸ್ಮೃತಿ ಮಂಧಾನ (ನಾಯಕಿ), ಗ್ರೇಸ್ ಹ್ಯಾರಿಸ್, ಜಾರ್ಜಿಯಾ ವೋಲ್ (ದಯಾಲನ್ ಹೇಮಲತಾ ಬದಲಿಗೆ), ರಿಚಾ ಘೋಷ್ (ವಿಕೆಟ್ ಕೀಪರ್), ಗೌತಮಿ ನಾಯ್ಕ್, ನಡಿನ್ ಡಿ ಕ್ಲರ್ಕ್, ರಾಧಾ ಯಾದವ್,ಪ್ರೇಮಾ ರಾವತ್ (ಅರುಂಧತಿ ರೆಡ್ಡಿ ಬದಲಿಗೆ), ಶ್ರೇಯಾಂಕ ಪಾಟೀಲ್, ಸಯಾಲಿ ಸತ್ಘರೆ (ಲಿನ್ಸೆ ಸ್ಮಿತ್ ಬದಲಿಗೆ), ಲಾರೆನ್ ಬೆಲ್.
ದೆಹಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ XI: ಶಫಾಲಿ ವರ್ಮಾ, ಲಿಜೆಲ್ಲೆ ಲೀ (ವಿಕೆಟ್ ಕೀಪರ್), ಲಾರಾ ವೊಲ್ವಾರ್ಡ್ಟ್, ಜೆಮಿಮಾ ರೋಡ್ರಿಗಸ್ (ನಾಯಕಿ), ಮರಿಝನ್ನೆ ಕಪ್, ಸ್ನೇಹ ರಾಣಾ, ನಿಕಿ ಪ್ರಸಾದ್, ಮಿನ್ನು ಮಣಿ, ಶ್ರೀ ಚರಣಿ, ನಂದಿನಿ ಶರ್ಮಾ, ಲೂಸಿ ಹ್ಯಾಮಿಲ್ಟನ್ (ಚಿನೆಲ್ ಹೆನ್ರಿ ಬದಲಿಗೆ).
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:14 pm, Sat, 17 January 26