
ನವದೆಹಲಿಯಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ ಮೆಗಾಹರಾಜಿನಲ್ಲಿ (WPL Auction 2026) ಒಟ್ಟು 276 ಆಟಗಾರ್ತಿಯರು ಹರಾಜಿನಲ್ಲಿ ಭಾಗವಹಿಸಿದ್ದರು. ಇದರಲ್ಲಿ ಖಾಲಿ ಇದ್ದ 73 ಸ್ಥಾನಗಳಿಗೆ 67 ಆಟಗಾರ್ತಿರು ಭರ್ತಿಯಾಗಿದ್ದಾರೆ. ಅದರಲ್ಲೂ ಪ್ರಮುಖವಾಗಿ ಎರಡನೇ ಆವೃತ್ತಿಯಲ್ಲಿ ಚಾಂಪಿಯನ್ ಆಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮೇಲೆ ಎಲ್ಲರ ದೃಷ್ಟಿ ನೆಟ್ಟಿತ್ತು. ಏಕೆಂದರೆ 2024 ರ ಆವೃತ್ತಿಯಲ್ಲಿ ಚಾಂಪಿಯನ್ ಆಗಿದ್ದ ಆರ್‌ಸಿಬಿ ಹರಾಜಿಗೂ ಮುನ್ನ ಕೇವಲ ನಾಲ್ವರನ್ನು ತಂಡದಲ್ಲಿ ಉಳಿಸಿಕೊಂಡು ಉಳಿದವರನ್ನು ತಂಡದಿಂದ ಕೈಬಿಟ್ಟಿತ್ತು. ಕೈಬಿಟ್ಟ ಆಟಗಾರ್ತಿಯರಲ್ಲಿ ಹಲವರು ಸ್ಟಾರ್ ಆಟಗಾರ್ತಿಯರೇ ಸೇರಿದ್ದರು. ಹೀಗಾಗಿ ಹರಾಜಿನಲ್ಲಿ ಆರ್‌ಸಿಬಿ ಯಾವ ಆಟಗಾರ್ತಿಯರ ಹಿಂದೆ ಬೀಳಬಹುದು ಎಂಬ ನಿರೀಕ್ಷೆ ಇತ್ತು. ಅದರಂತೆ 6.15 ಕೋಟಿ ರೂಪಾಯಿ ಬಜೆಟ್ನೊಂದಿಗೆ ಹರಾಜಿಗೆ ಬಂದಿದ್ದ ಆರ್‌ಸಿಬಿ ಒಟ್ಟು 12 ಆಟಗಾರ್ತಿಯರನ್ನು ತನ್ನ ತಂಡಕ್ಕೆ ಸೇರಿಸಿಕೊಂಡಿದೆ.
ಸ್ಮೃತಿ ಮಂಧಾನ, ರಿಚಾ ಘೋಷ್, ಎಲ್ಲಿಸ್ ಪೆರ್ರಿ, ಲಾರೆನ್ ಬೆಲ್, ಪೂಜಾ ವಸ್ತ್ರಾಕರ್, ಅರುಂಧತಿ ರೆಡ್ಡಿ, ಗ್ರೇಸ್ ಹ್ಯಾರಿಸ್, ರಾಧಾ ಯಾದವ್, ನಡಿನ್ ಡಿ ಕ್ಲರ್ಕ್, ಶ್ರೇಯಾಂಕಾ ಪಾಟೀಲ್, ಜಾರ್ಜಿಯಾ ವೋಲ್, ಲಿನ್ಸೆ ಸ್ಮಿತ್, ಪ್ರೇಮಾ ರಾವತ್, ಗೌತಮಿ ನಾಯಕ್, ಪ್ರತ್ಯೂಷ ಕುಮಾರ್, ದಯಾಲನ್ ಹೇಮಲತಾ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ